ಹಿರಿಯ ನಟಿ ಮಾಲತಿ ಸರ್ ದೇಶಪಾಂಡೆ ನಡೆದು ಬಂದ ಹಾದಿ

By ಪ್ರಿಯಾ ದೊರೆ

ಮಾಲತಿ ಸರ್ ದೇಶಪಾಂಡೆ.. ಈ ಹೆಸರು ಎಲ್ಲರಿಗೂ ಚಿರಪರಿಚಿತವಿಲ್ಲದೇ ಇರಬಹುದು. ಆದರೆ ಈ ನಟಿ ಮಾತ್ರ ಎಲ್ಲರಿಗೂ ಪರಿಚಿತರೇ. ಕಾರಣ ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿದ್ದಾರೆ.

ರಂಗಭೂಮಿಯಲ್ಲಿ ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಸದ್ಯ ಸತ್ಯ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಪತಿಯೂ ರಂಗಭೂಮಿಯಲ್ಲಿರುವ ಕಲಾವಿದರೇ. ನಾಟಕಗಳ ಕಥೆ ಬರೆದು, ನಿರ್ದೇಶಿಸುವ ಇವರ ಪತಿಯ ಹಲವು ನಾಟಕಗಳು ಹಿಟ್ ಆಗಿವೆ.

ಮಾಲತಿ ಅವರು ಸುಮಾರು ಎರಡು ದಶಕಗಳಿಂದಲೂ ಬಣ್ಣದ ಲೋಕದಲ್ಲಿದ್ದಾರೆ. ಹಿಂದೂಸ್ತಾನಿ ಸಂಗೀತ ಕಲಿತಿರುವ ಮಾಲತಿ ಅವರ ತಾತನೂ ಕೂಡ ಒಳ್ಳೆಯ ಕಲಾವಿದರಾಗಿದ್ದವರಂತೆ. ಅವರಿಂದಲೇ ಮಾಲತಿ ಅವರು ನಟನೆಯನ್ನು ಮೈಗೂಡಿಸಿಕೊಂಡಿದ್ದಾರೆ.

ಬರ್ತಡೇ ವಿಶಸ್ ಅಲ್ಲ.. ಪ್ರಪೋಸಲ್

ಬರ್ತಡೇ ವಿಶಸ್ ಅಲ್ಲ.. ಪ್ರಪೋಸಲ್

ಮಾಲತಿ ಸರ್ ದೇಶಪಾಂಡೆ ಅವರು ಕಾಲೇಜಿನಲ್ಲಿ ಓದುವಾಗ, ಯಶವಂತ ಸರ್ ದೇಶಪಾಂಡೆ ಅವರ ನಾಟಕವೊಂದಕ್ಕೆ ಹಾಡು ಹಾಡಲು ಹೋಗುತ್ತಿದ್ದರು. ತುಂಟ ಮಕ್ಕಳ ತಂಟೆ ಎಂಬ ನಾಟಕದ ಪ್ರಾಕ್ಟಿಸ್ ಮುಗಿದು ಶೋ ನಡೆಯುವ ದಿನವೇ ಯಶವಂತ ಸರ್ ದೇಶಪಾಂಡ್ ಅವರ ಹುಟ್ಟುಹಬ್ಬವಿತ್ತಂತೆ. ಇದು ಕೊನೆ ಕ್ಷಣದಲ್ಲಿ ತಿಳಿದ ಕಾರಣ ಮಾಲತಿ ಅವರು ಕೈಗೆ ಸಿಕ್ಕ ಗ್ರೀಟಿಂಗ್ ಕಾರ್ಡ್ ಅನ್ನು ಪರ್ಚೇಸ್ ಮಾಡಿ, ಬರ್ತ ಡೇ ವಿಶಸ್ ಬರೆದು ಕೊಟ್ಟಿದ್ದರಂತೆ. ಆದರೆ ಅದರಲ್ಲಿ ನಾನು ಪ್ರೀತಿಸುವವರು ಎಂದು ಇಂಗ್ಲೀಷ್ ನಲ್ಲಿ ಬರೆದಿತ್ತಂತೆ. ಹಾಗಾಗಿ ಯಶವಂತ ಅವರು ಮಾಲತಿ ಅವರ ಮನೆಯಲ್ಲಿ ಮಾತನಾಡಿ ನಿಶ್ಚಿತಾರ್ಥ ಆಗಿ ಗ್ರೀಟಿಂಗ್ ಕಾರ್ಡ್ ಪಡೆದ ಒಂದೇ ತಿಂಗಳಲ್ಲಿ ಸಪ್ತಪದಿಯನ್ನೂ ತುಳಿದಿದ್ದರಂತೆ.

ಎರಡು ದಶಕಗಳಿಂದ ನಟನೆ

ಎರಡು ದಶಕಗಳಿಂದ ನಟನೆ

ಮಾಲತಿ ಹಾಗೂ ಯಶವಂತ ಸರ್ ದೇಶಪಾಂಡೆ ಅವರು ಸಾಕಷ್ಟು ಮರಾಠಿ ನಾಟಕಗಳನ್ನು ಅನುವಾದಿಸಿ, ನಿರ್ದೇಶಿಸಿ, ನಟಿಸಿದ್ದಾರೆ. ಈ ಜೋಡಿ ಮಾಡಿದ ಆಲ್ ದಿ ಬೆಸ್ಟ್, ಹೀಗೇಕೆ ನೀ ದೂರ ಓಡುವೆ, ರಾಶಿ ಚಕ್ರ ಸೇರಿದಂತೆ ಹಲವು ನಾಟಕಗಳು ಅತ್ಯುತ್ತಮ ಪ್ರದರ್ಶನಗಳನ್ನು ಕಂಡಿವೆ. ಇನ್ನು ಆಲ್ ದಿ ಬೆಸ್ಟ್ ನಾಟಕವಂತೂ ಬ್ರೇಕ್ ಇಲ್ಲದಂತೆ ಪ್ರದರ್ಶನಗೊಂಡಿದೆ. ಈ ನಾಟಕದ ಬಗ್ಗೆ ತಿಳಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಮನೆಯಲ್ಲೂ ಈ ನಾಟಕ ಪ್ರದರ್ಶನ ಮಾಡಿಸಿದ್ದರಂತೆ. ಇನ್ನು ಮಾಲತಿ ಅವರು ಶ್ರೀರಸ್ತು ಶುಭಮಸ್ತು, ಆಕಾಶದೀಪ, ಕನ್ಯಾದಾನ ಸೇರಿದಂತೆ ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಇನ್ನು ಇಂತಿ ನಿನ್ನ ಪ್ರೀತಿಯ, ಉಲ್ಲಾಸ ಉತ್ಸಾಹ, ಯಶವಂತ್, ಗಜ, ಜೊತೆ ಜೊತೆಯಲಿ, ಅಯ್ಯ, ಆದಿ, ಡಕೋಟಾ ಎಕ್ಸ್ ಪ್ರೆಸ್, ಕಂಠಿ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ದೋಸ್ತಿಯಿಂದ ಎಲ್ಲವೂ ಬದಲಾಯ್ತು

ದೋಸ್ತಿಯಿಂದ ಎಲ್ಲವೂ ಬದಲಾಯ್ತು

ಇನ್ನು ಮಾಲತಿ ಅವರ ಬದುಕಿಗೆ ಅವರ ಮಗಳು ದೋಸ್ತಿ ಬಂದಾಗ ಅತ್ಯಂತ ಖುಷಿಯಾಗಿತ್ತಂತೆ. ಮಗಳು ಹುಟ್ಟಿದ ಮೇಲೆ ನಾವು ತುಂಬಾ ಚೆನ್ನಾಗಿದ್ದೀವಿ. ಮಗಳು ಹುಟ್ಟಿದ ಮೇಲೆ ನಮ್ಮ ಬದುಕೇ ಬದಲಾಯ್ತು. ಅವಳೀಂದಾಗಿ ನಮ್ಮ ಮನೆಯಲ್ಲಿ ಯಾವುದಕ್ಕೂ ಕಮ್ಮಿ ಇಲ್ಲದಂತಾಯ್ತು. ಅವಳು ಒಂದು ಕ್ಷಣ ಮನೆಯಲ್ಲಿಲ್ಲದಿದ್ದರೂ ಮನೆ ಬಿಕೋ ಎನ್ನುತ್ತೆ ಎಂದು ಇತ್ತೀಚೆಗೆ ನಡೆದ ರಿಯಾಲಿಟಿ ಶೋ ಒಂದರಲ್ಲಿ ಹೇಳಿದ್ದಾರೆ. ಈ ವೇಳೆ ಅವರ ಮಗಳು ಕೂಡ, ನನ್ನ ಅಮ್ಮ ನನ್ನ ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಇವರು ದಿ ಬೆಸ್ಟ್ ಅಮ್ಮ ಎಂದು ಹೇಳಿದ್ದಾರೆ.

ಸತ್ಯ ಧಾರಾವಾಹಿಯಲ್ಲಿ ಖಡಕ್ ಅತ್ತೆ

ಸತ್ಯ ಧಾರಾವಾಹಿಯಲ್ಲಿ ಖಡಕ್ ಅತ್ತೆ

ಮಾಲತಿ ಅವರಿಗೆ ಮಗಳೇ ಜಗತ್ತು. ಎಲ್ಲರ ಜೊತೆಗೆ ಸ್ನೇಹ ಪ್ರೀತಿಯಿಂದ ಇರಲಿ ಎಂದು ಮಗಳಿಗೆ ದೋಸ್ತಿ ಎಂದು ಹೆಸರಿಟ್ಟಿದ್ದಾರೆ. ಇನ್ನು ಒಂದು ಕಾಲದಲ್ಲಿ ಮಗಳಿಗೆ ಕೊಡಲು ಒಂದು ಗ್ಲಾಸ್ ಹಾಲಿಗೆ ಸಂಕಷ್ಟವಿತ್ತು. ಆಗ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು ಎಂದು ಹೇಳಿದ್ದಾರೆ. ಸದ್ಯ ಮಾಲತಿ ಅವರು ಸತ್ಯ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಖಡಕ್ ಅತ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿಜ ಜೀವನದಲ್ಲಿ ತುಂಬಾನೇ ಸರಳ ವ್ಯಕ್ತಿತ್ವ ಇವರದ್ದು.

More from Filmibeat

English summary
Actress malathi sir deshpande serial, film and drama life. And their personal life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X