ಮತ್ತದೇ ಲುಕ್‌ನಲ್ಲಿ ವೀಕ್ಷಕರ ಮುಂದೆ ಬಂದ ನಟಿ ಮಾನಸ ಮನೋಹರ್

By ಪ್ರಿಯಾ ದೊರೆ

ಸಾಮಾನ್ಯವಾಗಿ ಎಲ್ಲಾ ನಟ- ನಟಿಯರು ಒಂದು ಧಾರಾವಾಹಿಯಲ್ಲಿ ಮಾಡಿದ ಪಾತ್ರವನ್ನು ಮತ್ತೊಂದು ಧಾರಾವಾಹಿಯಲ್ಲಿ ಮುಂದುವರೆಸುವುದಿಲ್ಲ. ನೆಗೆಟಿವ್ ಅಥವಾ ಪಾಸಿಟಿವ್ ರೋಲ್ ಮುಂದುವರೆಸುತ್ತಾರೆ ಅಷ್ಟೇ. ಆದರೆ, ಕಳೆದ ಮೂರು ವರ್ಷಗಳಿಂದ ಡಿಫರೆಂಟ್ ಔಟ್‌ಫಿಟ್‌ನಲ್ಲಿ ನಿತ್ಯ ಒಂದೊಂದು ಲುಕ್‌ನಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ನಟಿ, ಈಗ ಪುನಃ ಅದೇ ಮಾದರಿಯ ಮತ್ತೊಂದು ಕ್ಯಾರೆಕ್ಟರ್ ಮೂಲಕ ಎಂಟ್ರಿಕೊಟ್ಟಿದ್ದಾರೆ.

ಈ ನಟಿ ತಮ್ಮ ಡ್ರೆಸ್ಸಿಂಗ್‌ಸೆನ್ಸ್ ಹಾಗೂ ಪರ್ಸನಾಲಿಟಿ ಮೂಲಕವೇ ಜನರನ್ನು ಸೆಳೆದಿದ್ದು, ಈಗ ಹೊಸ ಧಾರಾವಾಹಿಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಯಾರಪ್ಪಾ ಆ ನಟಿ..? ಯಾವ ಪಾತ್ರ, ಏನು ಔಟ್ ಫಿಟ್ ಎಂಬೆಲ್ಲಾ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡುತ್ತಿರಬಹುದು. ಅದು ಬೇರೆ ಯಾರೂ ಅಲ್ಲ ನಟಿ ಮಾನಸ ಮನೋಹರ್.

Actress Manasa Manohar joins the cast of Olavind Nildana serial

ನೀವು ಮಾನಸ ಮನೋಹರ್ ಯಾರು ಎಂದು ಯೋಚಿಸುವ ಮುನ್ನವೇ ಮುಂದಿನ ಸಾಲನ್ನು ಓದಿ.. ನಿಮ್ಮೆಲ್ಲರ ನೆಚ್ಚಿನ ಮೀರಾ. 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ ಪಾತ್ರದ ಮೂಲಕ ಪ್ರೇಕ್ಷಕರನ್ನು ಸೆಳೆದ ನಟಿಯ ಹೆಸರೇ ಮಾನಸ ಮನೋಹರ್. ಮಾನಸ ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟ ಸೀರಿಯಲ್ ಮಾತ್ರ 'ಜೊತೆ ಜೊತೆಯಲಿ'.


ಮೀರಾ ಇನ್ಮುಂದೆ ಪ್ರಾಚಿ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿ ಮಾನಸ ಮನೋಹರ್ ಅವರು ಮೀರಾ ಪಾತ್ರದ ಮೂಲಕ ಕಾಣಿಸಿಕೊಂಡಿದ್ದರು. ಇದರಲ್ಲಿ ಪರ್ಫೆಕ್ಟ್ ಆಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದರು. ಆಫೀಸ್‌ಗೆ ಬರುವಾಗ ಫಾರ್ಮಲ್ಸ್, ಕ್ಯಾಶ್ಯುವಲ್ಸ್ ಹಾಗೂ ಡಿಫರೆಂಟ್ ಆಂಡ್ ಫಿಟ್ ಆಗಿದ್ದಂತಹ ಸ್ಕರ್ಟ್‌ಗಳನ್ನು ಧರಿಸುತ್ತಿದ್ದರು. ಅವರು ಧರಿಸುತ್ತಿದ್ದ ಬಟ್ಟೆ, ಅದರ ಬಣ್ಣ ಹಾಗೂ ಕ್ಯಾರಿ ಮಾಡುತ್ತಿದ್ದ ರೀತಿ ಪ್ರತಿಯೊಬ್ಬ ಯುವತಿಗೂ ಇಷ್ಟವಾಗುತ್ತಿತ್ತು. ಎಲ್ಲೂ ಅಸಹ್ಯ ಎನಿಸುತ್ತಿರಲಿಲ್ಲ. ಓವರ್ ಎಂದು ಕಾಣುತ್ತಿರಲಿಲ್ಲ.

ಮೀರಾ ಪಾತ್ರ ಮಿಸ್ ಮಾಡಿಕೊಳ್ತಿದ್ದ ಫ್ಯಾನ್ಸ್

ಈ ಮೊದಲು ಮಾಡಿದ್ದ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಒಂದೇ ರೀತಿಯ ಮೇಕಪ್ ಹಾಗೂ ಎಲ್ಲರಿಗೂ ಇಷ್ಟವಾಗುವಂತೆ ಆಫಿಸ್‌ಗೆ ಬರುತ್ತಿದ್ದರು. ಇದರ ಜೊತೆಗೆ ಮೀರಾ ಆಫಿಸ್ ನಿಭಾಯಿಸುತ್ತಿದ್ದ ರೀತಿಯೂ ಸೇರಿದಂತೆ ಅವರ ಕ್ಯಾರೆಕ್ಟರ್ ಬಹಳ ಪರ್ಫೆಕ್ಟ್ ಆಗಿ ಕಾಣುತ್ತಿತ್ತು. ಆದರೆ, 'ಜೊತೆ ಜೊತೆಯಲಿ' ಧಾರಾವಾಹಿ ಮುಗಿದ ಮೇಲೆ ಮೀರಾಳನ್ನು ಕೂಡ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದರು.

ಮತ್ತದೇ ಔಟ್ ಫಿಟ್‌ನಲ್ಲಿ ಮಾನಸ

ಮೀರಾ ಮತ್ತದೇ ಔಟ್ ಫಿಟ್‌ನಲ್ಲಿ, ಅಷ್ಟೇ ಪರ್ಫೆಕ್ಟ್ ಆಗಿ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಪಾತ್ರ ಮಾತ್ರ ಬೇರೆಯಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಒಲವಿನ ನಿಲ್ದಾಣ' ತಂಡವನ್ನು ಮಾನಸ ಮನೋಹರ್ ಸೇರಿಕೊಂಡಿದ್ದಾರೆ. ಇದರಲ್ಲಿ ಈಗ ಸಿದ್ಧಾಂತ್ ಪ್ರೀತಿಗಾಗಿ ಕೆಲಸವನ್ನು ಬಿಟ್ಟು ತಾರಿಣಿಯನ್ನು ಮದುವೆಯಾಗಿದ್ದಾನೆ. ಮಗ ಕೆಲಸ ಕಳೆದುಕೊಂಡ ಕಾರಣ ಅವರ ತಾಯಿ ದುಡಿಯುವಂತಾಗಿದ್ದು, ಇದೀಗ ಕಂಪನಿಯೊಂದರಲ್ಲಿ ಸಿದ್ದಾಂತ್ ಗೆ ಕೆಲಸ ಸಿಕ್ಕಿದೆ. ಆದರೆ, ಈ ಕಂಪನಿಯ ಬಾಸ್ ಆಗಿರುವ ಪ್ರಾಚಿ ಮೇಡಂ ಸಿಕ್ಕಾಪಟ್ಟೆ ಸ್ಟ್ರಿಕ್ಟ್. ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಎಂದು ಬಯಸುತ್ತಾರೆ.

ಮೀರಾ ಪಾತ್ರದ ಹೋಲಿಕೆ

'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ಮೀರಾ ಆಗಿ ಬರದೇ, ಪ್ರಾಚಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೇಮ್ ಟು ಸೇಮ್ ಔಟ್ ಫಿಟ್‌ನಲ್ಲಿ ಕಾಣಿಸಿಕೊಂಡಿದ್ದು, 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿನ ಪಾತ್ರವನ್ನೇ ಹೋಲುತ್ತಿದೆ. ಆದರೆ, ಪ್ರಾಚಿ ಪಾತ್ರ ಡಿಫರೆಂಟ್ ಆಗಿ ಪ್ರೇಕ್ಷಕರನ್ನು ಸೆಳೆಯುತ್ತದೆಯೋ ಇಲ್ಲವೇ 'ಜೊತೆ ಜೊತೆಯಲಿ' ಧಾರಾವಾಹಿಯ ಪಾತ್ರವೇನಾ..? ಇದರಲ್ಲಿ ಜಸ್ಟ್ ಗೆಸ್ಟ್ ರೋಲ್ ಮಾಡುತ್ತಿದ್ದಾರಾ ಎಂಬುದನ್ನು ತಿಳಿಯಬೇಕಿದೆ.

More from Filmibeat

English summary
Actress Manasa Manohar joins the cast of Olavind Nildana serial. her Prachi character Looks like Jothe jotheyali Meera. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X