ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ನಟಿ ಮಾನ್ಸಿ ಜೋಶಿ; ವರ ಯಾರು ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಆಗಿ ಅಭಿನಯಿಸಿದ್ದ ಮಾನ್ಸಿ ಜೋಶಿ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು, ಕಿರುತೆರೆ ನಟಿ ಮಾನ್ಸಿ ಜೋಶಿ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ನಿನ್ನೆಯಷ್ಟೇ ರಾಘವ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮಾನ್ಸಿ ಜೋಶಿ.
ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಮಾನ್ಸಿ ಜೋಶಿ ತಮ್ಮ ಎಂಗೇಜ್‌ಮೆಂಟ್ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹೌದು, ಎಂಗೇಜ್‌ಮೆಂಟ್‌ನ ಒಂದಷ್ಟು ಪೋಟೋಗಳನ್ನು ಹಂಚಿಕೊಂಡಿರುವ ಮಾನ್ಸಿ ಜೋಶಿ 'M/R forever, ಮಾನಸಿಯ ರಾಘವ" ಎಂದು ಬರೆದುಕೊಂಡಿದ್ದಾರೆ.

ಅಂದ ಹಾಗೇ ಮಾನ್ಸಿ ಅವರ ಕೈ ಹಿಡಿಯುತ್ತಿರುವ ರಾಘವ ಅವರು ಯಾರು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಹೊರಬಂದಿಲ್ಲ. ಇನ್ನು ಮಾನ್ಸಿ ಅವರು ನೇರಳೆ ಬಣ್ಣದ ಸಾರಿಯನ್ನು ಧರಿಸಿದ್ದರೆ ಅವರ ಭಾವಿ ಪತಿ ರಾಘವ್ ಅವರು ನೇರಳೆ ಬಣ್ಣದ ಶರ್ಟ್‌ನಲ್ಲಿ ಮಿಂಚಿದ್ದಾರೆ. ಒಟ್ಟಿನಲ್ಲಿ ಈ ಮುದ್ದಾದ ಜೋಡಿ ಕಂಡು ಕಿರುತೆರೆ ವೀಕ್ಷಕರು ಹಾಗೂ ನೆಟ್ಟಿಗರು ಫಿದಾ ಆಗಿದ್ದಾರೆ.
ಸದ್ಯ ಮಲಯಾಳಂನ 'ಚಂದ್ರಕಲಲೆಯುಮ್ ಚಂದ್ರಕಾಂತಮ್' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಮಾನ್ಸಿ ಜೋಶಿ ಅವರ ನಟನಾ ಪಯಣ ಶುರುವಾಗಿದ್ದು 'ಬಿಳಿ ಹೆಂಡ್ತಿ' ಧಾರಾವಾಹಿಯ ಮೂಲಕ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಿಳಿ ಹೆಂಡ್ತಿ' ಧಾರಾವಾಹಿಯಲ್ಲಿ ರಮ್ಯಾ ಆಗಿ ಅಭಿನಯಿಸಿದ್ದ ಈಕೆ ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ಮೋಡಿ ಮಾಡಿರುವ ಬೆಡಗಿ.
ತದ ನಂತರ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸಿದ ಈಕೆ ಅಲ್ಲಿ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಯಕಿ' ಧಾರಾವಾಹಿಯಲ್ಲಿ ಸೌಜನ್ಯ ಪಾತ್ರಕ್ಕೆ ಬಣ್ಣ ಹಚ್ಚಿರುವ ಈಕೆ ಅಲ್ಲೂ ಖಳನಾಯಕಿಯಾಗಿ ಕಮಾಲ್ ಮಾಡಿದರು. ಮುಂದೆ 'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಆಗಿ ನಟಿಸಿದ ಮಾನ್ಸಿ ಜೋಶಿ ಮಗದೊಮ್ಮೆ ಖಳನಾಯಕಿಯಾಗಿ ನಟಿಸಿದ್ದಲ್ಲದೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು.

ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಬೆಸ್ಟ್ ವಿಲನ್ ಅವಾರ್ಡ್ ಅನ್ನು ಪಡೆದುಕೊಂಡಿರುವ ಈಕೆ 'ಪಾರು' ಧಾರಾವಾಹಿಯ ನಂತರ ಒಂದು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ನಂತರ 'ಅಣ್ಣ ತಂಗಿ' ಧಾರಾವಾಹಿಯಲ್ಲಿ ಜಿಲ್ಲಾಧಿಕಾರಿ ಸಂಧ್ಯಾ ಆಗಿ ನಟಿಸಿದ್ದ ಈಕೆ ಮತ್ತೊಮ್ಮೆ ಪಾಸಿಟಿವ್ ಪಾತ್ರದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಪರಭಾಷೆಯ ಕಿರುತೆರೆಯಲ್ಲಿಯೂ ಬ್ಯುಸಿಯಾಗಿರುವ ಮಾನ್ಸಿ ಜೋಷಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮೈನಾ' ಧಾರಾವಾಹಿಯಲ್ಲಿ ನಾಯಕಿಯ ಅಕ್ಕನಾಗಿ ಗಮನ ಸೆಳೆದಿದ್ದಾರೆ.


Click it and Unblock the Notifications











