ಮತ್ತೆ ಕಿರುತೆರೆಗೆ ಮರಳಿದ ಮಯೂರಿ ಕ್ಯಾತರಿ; ರೀಲ್ಸ್ ಪ್ರಪಂಚದ ಬಗ್ಗೆ ಹೇಳಿದ್ದೇನು?

By ಅನಿತಾ ಬನಾರಿ

ನಟಿ ಮಯೂರಿ ಕ್ಯಾತರಿ ಆಲಿಯಾಸ್ ಅಶ್ವಿನಿ ಕಿರುತೆರೆಗೆ ವಾಪಸ್ ಆಗಿದ್ದಾರೆ. ಹೌದು 'ಅಶ್ವಿನಿನಕ್ಷತ್ರ' ಧಾರಾವಾಹಿಯ ನಾಯಕ ನಟಿ ಮಯೂರಿ ಕ್ಯಾತರಿ ಇದೀಗ ಕಿರುತೆರೆಗೆ ಮರಳಿದ್ದು, ಪ್ರಮುಖ ಪಾತ್ರ ಒಂದನ್ನು ನಿಭಾಯಿಸುತ್ತಿದ್ದಾರೆ. ಈ ವಿಚಾರ ಮಯೂರಿ ಅವರ ಫ್ಯಾನ್ಸ್ ಗೆ ಬಹಳ ಸಂತೋಷ ತಂದಿದೆ.

ಅಂದ ಹಾಗೆ ಇತ್ತೀಚೆಗಷ್ಟೇ ತಾಯಿ ಆಗಿರುವ ನಟಿ ಮಯೂರಿ ಕ್ಯಾತರಿ ಇದೀಗ ಮತ್ತೆ ಕಿರುತೆರೆಗೆ ಮರಳಿರುವುದು ವಿಶೇಷ. 'ನನ್ನ ದೇವ್ರು' ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ನಟಿಸುತ್ತಿರುವ ನಟಿ ಮಯೂರಿಯವರು ತಮ್ಮ ಕಮ್ ಬ್ಯಾಕ್ ಬಗ್ಗೆ ಮಾತನಾಡಿದ್ದಾರೆ.

Actress Mayuri Kyatari says that serials still have their importance in reels world

"ರೀಲ್ಸ್ ಜಗತ್ತು ಇದಾದರೂ ಇಂದಿಗೂ ಧಾರಾವಾಹಿ ಹಾಗೂ ಕಿರುತೆರೆಗೆ ಅದರದೇ ಆದ ಪ್ರಾಮುಖ್ಯತೆ ಇದೆ. ಇಂದು ತುಂಬಾ ಜನರು ಬೇರೆ ಬೇರೆ ರೀತಿಯಲ್ಲಿ ನಟಿಸುತ್ತಾ ನಟರಾಗುವ ಪ್ರಯತ್ನದಲ್ಲಿ ಇದ್ದಾರೆ. ಹೀಗಿರುವಾಗ ಬರೀ ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್‌ಗಳಿಗೆ ಸೀಮಿತವಾಗದೆ ಅವರೆಲ್ಲರ ಬಹುದೊಡ್ಡ ಆಸೆ ಕಿರುತೆರೆ ಅಥವಾ ಸಿನಿಮಾಗೆ ಸೇರಬೇಕು ಎಂಬುದಾಗಿದೆ. ಏಕೆಂದರೆ ಇಂದಿಗೂ ಕಿರುತೆರೆ ಮಾತ್ರ ಹೆಚ್ಚಿನ ಪ್ರೇಕ್ಷಕರ ಗಮನ ಸೆಳೆಯಲು ವೇದಿಕೆಯಾಗಿರುವುದು. ಹಾಗಾಗಿ ಈ ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳು ಧಾರಾವಾಹಿ ಅದರಲ್ಲೂ ಕಿರುತೆರೆಗೆ ಬಹಳಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿದೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಟಿ ಮಾಯೂರಿ ಕ್ಯಾತರಿ ಮಾತನಾಡುತ್ತಾ ಹೇಳಿದ್ದಾರೆ.

"ಧಾರಾವಾಹಿಗಳಿಗೆ ಹಲವು ಕುಟುಂಬಗಳನ್ನು ಒಂದು ಮಾಡುವ ಶಕ್ತಿ ಇದೆ. ಒಂದೇ ಸಮಯದಲ್ಲಿ ರಾಜ್ಯದ ಬೇರೆ ಬೇರೆ ಜಾಗಗಳಲ್ಲಿ ಮನೆಗಳಲ್ಲಿ ಜನರು ಒಂದೇ ಕಡೆ ಕೂತು ಒಂದು ಕಥೆಯನ್ನು ವೀಕ್ಷಿಸುವುದೇ ವಿಶೇಷವಾದ ವಿಚಾರ. ಇಂತಹದೊಂದು ವಿಶೇಷ ಅನುಭವ ಕಿರುತೆರೆಯಿಂದ ಮಾತ್ರ ಸಾಧ್ಯ. ಕಿರುತೆರೆಗೆ ಮರಳಿರುವುದಕ್ಕೆ ನನಗೆ ಬಹಳ ಸಂತೃಪ್ತಿ ಇದೆ" ಎಂದು ಕಿರುತೆರೆ ವಿಶೇಷತೆಯ ಬಗ್ಗೆ ನಟಿ ಮಯೂರಿ ಕ್ಯಾತರಿ ಮಾತನಾಡಿದ್ದಾರೆ .

Actress Mayuri Kyatari says that serials still have their importance in reels world

"2013ರಲ್ಲಿ ಅಶ್ವಿನಿ ನಕ್ಷತ್ರ ಮೊದಲ ಬಾರಿ ತೆರೆಕಂಡಾಗ ನನಗೆ ಬಹಳ ಖುಷಿಯಾಗಿತ್ತು. ಅದರಲ್ಲಿ ಅಶ್ವಿನಿ ಎಂಬ ನನ್ನ ಪಾತ್ರಕ್ಕೆ ಜನರು ಬಹಳಷ್ಟು ಪ್ರೀತಿಯನ್ನು ನೀಡಿದ್ದಾರೆ. ಮದುವೆಯಾದ ನಂತರ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟೆ. ಅದಾದ ಮೇಲೆ ನನಗೆ ಒಬ್ಬ ಮುದ್ದಾದ ಮಗನಿದ್ದಾನೆ. ಮಗನೊಂದಿಗೆ ಇದ್ದಾಗ ಯಾವಾಗ ಕಿರುತೆರೆಗೆ ವಾಪಸ್ ಆಗುತ್ತೇನೋ ಎಂಬ ಹಪಾಹಪಿ ಇತ್ತು. ಇಂದು ಶೂಟಿಂಗ್‌ನಲ್ಲಿ ಇದ್ದಾಗೆಲ್ಲ ಮಗನ ನೆನಪಾಗುತ್ತದೆ. ಒಂದು ದಿನ ರಜೆ ಸಿಕ್ಕರೂ ಇಡೀ ದಿನವನ್ನು ಮಗನೊಂದಿಗೆ ಕಳೆಯಲು ಖುಷಿಯಾಗುತ್ತದೆ" ಎಂದು ತಮ್ಮ ಶೂಟಿಂಗ್ ಅನುಭವದ ಬಗ್ಗೆಯೂ ಹಂಚಿಕೊಂಡಿದ್ದಾರೆ ನಟಿ ಮಯೂರಿ ಕ್ಯಾತರಿ.

ಅಂದಹಾಗೆ 2013ರಲ್ಲಿ ಆರಂಭವಾದ 'ಅಶ್ವಿನಿ ನಕ್ಷತ್ರ' ಎಂಬ ಧಾರಾವಾಹಿ ಬಹಳಷ್ಟು ಖ್ಯಾತಿ ಪಡೆದು ಬಹುದೊಡ್ಡ ಪ್ರೇಕ್ಷಕ ವರ್ಗವನ್ನು ಹೊಂದಿತ್ತು. ಅದರಲ್ಲಿ ಮಯೂರಿ ನಾಯಕ ನಟಿ ಅಶ್ವಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಟಿ ಮಯೂರಿ ಕ್ಯಾತರಿ ಅವರು 'ನನ್ನ ದೇವ್ರು' ಧಾರಾವಾಹಿಯಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Mayuri Kyatari returned to television with the serial Nanna Devru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X