ಅಂಧ ವೇಶ್ಯೆ ಪಾತ್ರದಲ್ಲಿ 'ಅಶ್ವಿನಿ ನಕ್ಷತ್ರ' ಬೆಡಗಿ ಮಯೂರಿ!
ಇಂದಿಗೂ ಜನ 'ಅಶ್ವಿನಿ ನಕ್ಷತ್ರ' ಧಾರಾವಾಹಿಯನ್ನು ನೆನಪಿಸಿಕೊಳ್ಳುತ್ತಾರೆ. ಜೆಕೆ ಹಾಗೂ ನಟಿ ಮಯೂರಿ ಅಭಿನಯದ ಈ ಧಾರಾವಾಹಿ ಅದ್ಭುತವಾಗಿ ಮೂಡಿ ಬಂದಿತ್ತು. ಈ ಧಾರಾವಾಹಿ ಮೂಲಕ ಮಯೂರಿ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೂಡ ಒದಗಿ ಬಂತು.
ನಟಿ ಮಯೂರಿ ಕ್ಯಾತರಿ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಬಹಳ ಕಾಲದ ಸ್ನೇಹಿತನನ್ನು ಮದುವೆಯಾದರು. ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದ ಮಯೂರಿ ಸದ್ಯ ತಾಯ್ತನವನ್ನು ಅನುಭವಿಸುತ್ತಿದ್ದಾರೆ.
ಕಳೆದೆರಡು ವರ್ಷಗಳಿಂದ ಸಿನಿಮಾ ರಂಗಕ್ಕೆ ಕೊಂಚ ಬ್ರೇಕ್ ಕೊಟ್ಟಿದ್ದ ಮಯೂರಿ ಈಗ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಅವರೀಗ ಅಂಧ ಯುವತಿಯಾಗಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ವಿಶೇಷ. ಯಾವುದು ಆ ಚಿತ್ರ ಅಂತೀರಾ..? ಹಾಗಿದ್ದರೆ ಈ ಸುದ್ದಿಯನ್ನು ಪೂರ್ತಿ ಓದಿ.

ವೀಲ್ ಚೇರ್ ರೋಮಿಯೋ ರಿಲೀಸ್‌ಗೆ ರೆಡಿ!
ವೀಲ್ ಚೇರ್ ರೋಮಿಯೋ ಚಿತ್ರ ಇದೇ ತಿಂಗಳು ಮೇ 27ರಂದು ರಿಲೀಸ್ ಆಗಲಿದೆ. ಇದರಲ್ಲಿ ರಾಮ್ ಚೇತನ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ನಟರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಿ.ಜೆ.ಭರತ್ ಸಂಗೀತ ನಿರ್ದೇಶಿಸಿದ್ದು, ಈಗಾಗಲೇ ಇತ್ರದ ಟ್ರೈಲರ್ ಹಾಗೂ ಹಾಡುಗಳು ಹಿಟ್ ಆಗಿವೆ. ಇನ್ನು ಗುರುಕಶ್ಯಪ್ ಸಂಭಾಷಣೆ ಬರೆದಿದ್ದು, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ. ಸುಚೇಂದ್ರ ಪ್ರಸಾದ್, ತಬಲ ನಾಣಿ, ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟಾಚಲಯ್ಯ ಬಂಡವಾಳವನ್ನು ಹೂಡಿ ಚಿತ್ರ ನಿರ್ಮಿಸಿದ್ದಾರೆ.

ಕೃಷ್ಣ ಲೀಲಾ ಮಯೂರಿ ಮೊದಲ ಸಿನಿಮಾ!
ಇನ್ನು ಮಯೂರಿ ಕ್ಯಾತರಿ ಅವರು ಅಶ್ವಿನಿ ನಕ್ಷತ್ರ ಧಾರಾವಾಹಿಯ ಬಳಿಕ 'ಕೃಷ್ಣ ಲೀಲಾ' ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದ ಬಳಿಕ ಇಷ್ಟಕಾಮ್ಯ, ಮೌನಂ, ಅನಾದ್ಯಂತ, ರುಸ್ತುಂ, ನನ್ನ ಪ್ರಕಾರ, ನಟರಾಜ ಸರ್ವೀಸ್, ಪೊಗರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಂದು ಚಿತ್ರದಲ್ಲಿ ಮಯೂರಿ ಅವರು ಕಾಣಿಸಿಕೊಳ್ಳಲಿದ್ದು, ಇದರಲ್ಲಿ ಅಂಧೆಯಾಗಿ ನಟಿಸಿದ್ದಾರೆ. ಆ ಚಿತ್ರವೇ 'ವೀಲ್ ಚೇರ್ ರೋಮಿಯೋ'. ಇದರಲ್ಲಿ ನಾಯಕ ವೀಲ್ ಚೇರ್ ನಲ್ಲಿ ಇರುತ್ತಾನೆ, ನಾಯಕಿ ಅಂಧೆಯಾಗಿದ್ದು, ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ.

ನಟಿ ಮಯೂರಿಗೆ ಭಾಷೆ ಕಲಿಯುವ ಅಭ್ಯಾಸ!
ನಟಿ ಮಯೂರಿ ಕ್ಯಾತರಿ ಅವರಿಗೆ ಐದು ಭಾಷೆಗಳು ಬರುತ್ತವೆಯಂತೆ. ಹೆಚ್ಚು ಕನ್ನಡ ಮಾತನಾಡುವ ಮಯೂರಿ ಅವರಿಗೆ ಹಿಂದಿ ಹಾಗೂ ಮರಾಠಿ ಭಾಷೆಯೂ ಗೊತ್ತಂತೆ. ಸುಲಲಿತವಾಗಿ ಹಿಂದಿ ಹಾಗೂ ಮರಾಠಿಯನ್ನು ಮಾತನಾಡುತ್ತಾರೆ. ಇನ್ನು ಇಂಗ್ಲೀಷ್‌ನಲ್ಲೂ ಮಯೂರಿ ಮಾತನಾಡುತ್ತಾರೆ. ಜರ್ಮನಿ ಭಾಷೆಯನ್ನೂ ಕಲಿತಿರುವ ಮಯೂರಿ ಅವರು ಜರ್ಮನಿಯಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲ ವಾಸವಿದ್ದರು. ಅದೂ ಕೂಡ ಅವರ ಅಕ್ಕನ ಬಾಣಂತನಕ್ಕಾಗಿ ಜರ್ಮನಿಗೆ ಹೋಗಿದ್ದರಂತೆ. ಇನ್ನು ಮಯೂರಿ ಅವರಿಗೆ ತೆಲುಗು ಸ್ವಲ್ಪ ಬರುತ್ತದೆಯಂತೆ. ಮ್ಯಾನೇಜ್ ಮಾಡುವಷ್ಟು ತೆಲುಗು ಮಾತನಾಡುತ್ತಾರಂತೆ.

ಸಿನಿಮಾದಲ್ಲಿ ಬ್ಯೂಸಿ ಇರುವಾಗಲೇ ಮಯೂರಿ ಮದುವೆ!
ನಟಿ ಮಯೂರಿ ಕ್ಯಾತರಿ ಅವರು ಸುಮಾರು 10 ವರ್ಷಗಳಿಂದ ಅರುಣ್ ಎಂಬುವರನ್ನು ಪ್ರೀತಿಸುತ್ತಿದ್ದರು. ಅರುಣ್ ಅವರು ಮಯೂರಿ ಅವರ ನಟನೆಗೆ ಏಣಿಯಾದವರಂತೆ. ಮಯೂರಿ ಅವರು ನಟಿಯಾಗುವ ಕನಸು ಕಾಣುತ್ತಿದ್ದರಂತೆ. ಇದಕ್ಕೆ ಅರುಣ್ ಅವರದ್ದು ಫುಲ್ ಸಪೋರ್ಟ್ ಇತ್ತಂತೆ. ಸಿನಿಮಾ ರಂಗಕ್ಕೆ ಮಯೂರಿ ಎಂಟ್ರಿ ಕೊಟ್ಟಾಗ ಅರುಣ್ ಸಪೋರ್ಟ್ ಮಾಡುತ್ತಿದ್ದರಂತೆ. ಇವರಿಬ್ಬರು ಲಾಕ್ ಡೌನ್ ಸಂದರ್ಭದಲ್ಲಿ ಹಸೆಮಣೆ ಏರಿದರು. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಮಯೂರಿ ಅವರು ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡಿದರು. ಗಂಡು ಮಗುವಿನ ತಾಯಿಯಾಗಿರುವ ಮಯೂರಿ ಅವರು ಈಗ ಫುಲ್ ಬ್ಯುಸಿಯಾಗಿದ್ದಾರೆ. ಮಗನಿಗೆ ಆರವ್ ಎಂದು ಹೆಸರಿಟ್ಟಿದ್ದು, ಸದಾ ಮಗನ ಜೊತೆಗೆ ಇನ್ ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿರುತ್ತಾರೆ.


Click it and Unblock the Notifications











