Megha Shetty: ಶಿಡ್ಜುಗಳ ಬಳಿ ಬರ್ತ್‌ಡೇ ವಿಶ್ ಮಾಡಿಸಿಕೊಂಡು ಹಿರಿ ಹಿರಿ ಹಿಗ್ಗಿದ ಮೇಘಾ

By ಪ್ರಿಯಾ ದೊರೆ

ಅಕಸ್ಮಾತ್ ಆಗಿ ಕಿರುತೆರೆಗೆ ಎಂಟ್ರಿಕೊಟ್ಟು ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ನಟಿಸಿ ಮನೆ ಮಾತಾದ ಚೆಲುವೆ ಮೇಘಾ ಶೆಟ್ಟಿ. ಸೂಪರ್ ಹಿಟ್ 'ಜೊತೆ ಜೊತೆಯಲಿ' ಧಾರಾವಾಹಿಯ ಅನು ಸಿರಿಮನಿ ಆಗಿ ಕನ್ನಡ ಕಿರುತೆರೆ ವೀಕ್ಷಕರ ಮನಗೆದ್ದ ಚೆಲುವೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಸದ್ಯ ಕಿರುತೆರೆ ಬಿಟ್ಟು ಹಿರಿತೆರೆಯಲ್ಲಿ ಬ್ಯುಸಿಯಾಗುತ್ತಿರುವ ನಟಿ ಮೇಘಾ ಶೆಟ್ಟಿ ಅವರು ಮನೆಯಲ್ಲಿ ಪುಟಾಣಿಗಳ ಬಳಿ ತಮ್ಮ ಹುಟ್ಟುಹಬ್ಬಕ್ಕೆ ವಿಶ್ ಮಾಡಿಸಿಕೊಂಡಿದ್ದಾರೆ.

ಪುಟಾಣಿಗಳು ಅಂದರೆ ಯಾರಪ್ಪಾ..? ಅದೂ ಕೂಡ ನಮ್ ಮೇಘಾ ಶೆಟ್ಟಿ ಅವರ ಮನೆಯಲ್ಲಿ ಯಾರಿದ್ದಾರೆ ಪುಟಾಣಿಗಳು ಎಂದು ಯೋಚಿಸುತ್ತಿದ್ದೀರಾ..?

Actress Megha shetty birthday: Wishes pour in from fans

ಮೇಘಾ ಬರ್ತ್‌ಡೇ ಪುಟಾಣಿಗಳ ವಿಶ್

ಪುಟಾಣಿಗಳು ಎಂದರೆ, ಮಕ್ಕಳಲ್ಲ ಕಣ್ರೀ.. ಈಗಿನ ಲೈಫ್ ಸ್ಟೈಲ್‌ನಲ್ಲಿ ಎಲ್ಲರೂ ಶ್ವಾನಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಶಿಡ್ಜುಗಳ ಸಂಖ್ಯೆ ಹೆಚ್ಚೇ ಇದೆ. ನೋಡಲು ಟೆಡಿಬೇರ್ ಗೊಂಬೆಯಂತೆ ಕಾಣುವ ಶಿಡ್ಜು ನಾಯಿ ಮರಿಗಳು ಮೇಘಾ ಶೆಟ್ಟಿ ಮನೆಯಲ್ಲೂ ಇದೆ. ಎರಡು ಶಿಡ್ಜುಗಳನ್ನು ಸಾಕಿರುವ ಮೇಘಾ ಶೆಟ್ಟಿ ಅವರು ಬೆಳಗ್ಗೆ ಬೆಳಗ್ಗೆ ಎದ್ದು, ಅವಳ ಬಳಿ ಹ್ಯಾಪಿ ಬರ್ತ್‌ಡೇ ಎಂದು ಹೇಳಿ ವಿಶ್ ಮಾಡಿಸಿಕೊಂಡಿದ್ದಾರೆ. ಶಿಡ್ಜುಗಳು ಕೂಡ ತಮ್ಮ ಪ್ರೀತಿಯ ಮೇಘಾ ಶೆಟ್ಟಿಗೆ ಶೇಕ್‌ ಹ್ಯಾಡ್ ಕೊಟ್ಟಿವೆ. ಈ ವೀಡಿಯೋವನ್ನು ಮೇಘಾ ಶೆಟ್ಟಿ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಂದ ವಿಶ್

ಇನ್ನು ಮೇಘಾ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಕಿರುತೆರೆ ಬಳಗ ವಿಶ್ ಮಾಡಿದೆ. ಶಿಡ್ಜುಗಳ ಜೊತೆಗೆ ಹಂಚಿಕೊಂಡಿರುವ ವೀಡಿಯೋಗ ಪೋಸ್ಟ್‌ನಲ್ಲಿ 250ಕ್ಕೂ ಅಧಿಕ ಮಂದಿ ಬರ್ತಡೇ ವಿಶ್ ಮಾಡಿದ್ದಾರೆ. ಕೆಲವರು ತಮ್ಮಿಷ್ಟದ ನಟಿಗೆ ಕವನಗಳನ್ನೂ ಬರೆದಿದ್ದಾರೆ. ಅಂದಹಾಗೆ ಮೇಘಾ ಶೆಟ್ಟಿ 25ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಸ್ಟಾರ್ ಗಿರಿ ಪಟ್ಟಕ್ಕೇರಿದ ಮೇಘಾ, ತಮ್ಮ ಮುಗ್ಧ ನಟನೆಯ ಮೂಲಕವೇ ಎಲ್ಲರ ಮನ ಗೆದ್ದಿದ್ದಾರೆ.

Actress Megha shetty birthday: Wishes pour in from fans

ಸ್ಟೈಲಿಶ್ ಲುಕ್‌ನಲ್ಲಿ ಕ್ಯೂಟಿ

ಇತ್ತೀಚೆಗೆ ಮೇಘಾ ಶೆಟ್ಟಿ ಅವರು ಹೆಚ್ಚೆಚ್ಚು ಫೋಟೋಶೂಟ್ ಮಾಡಿಸುತ್ತಿದ್ದಾರೆ. ಪಿಂಕ್ ರೋಸ್ ಮುಡಿದು ಬ್ರೈಡಲ್ ಡ್ರೆಸ್‌ನಲ್ಲಿ ಮಿಂಚಿ ಎಲ್ಲರ ಕಣ್ಮನ ಸೆಳೆದಿದ್ದರು. ತದನಂತರ ಸ್ಟೈಲಿಶ್ ಕ್ರೀಂ ಸೂಟ್ ಧರಿಸಿ ಯಾವ ಬಾಲಿವುಡ್ ನಟಿಗೂ ಕಡಿಮೆ ಇಲ್ಲ ಎಂಬಂತೆ ಪೋಸ್ ಕೊಟ್ಟಿದ್ದರು. ಈ ಫೋಟೋಗಳಿಗೆ ಫಿದಾ ಆದ ಅಭಿಮಾನಿಗಳು ಹಾಟಿ ಆಗಿ ಬದಲಾದ ಕ್ಯೂಟಿ, ಕ್ಲಾಸ್ ಹುಡುಗಿಯ ಮಾಸ್ ಲುಕ್, ಪಿಂಕ್ ಪ್ರಿಟಿ ಗರ್ಲ್, ಮೇಘ ಮಂದಾರ ಮೇಘಾ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿ ಆಗಾಗ ರೀಲ್ಸ್, ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

ಸಿನಿಮಾಗಳಲ್ಲಿ ಬೆಡಗಿ ಬ್ಯುಸಿ

ಜೀ ಕನ್ನಡದಲ್ಲಿ ಮೂಡಿ ಬರುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿ ಮೇಘಾ ಶೆಟ್ಟಿ ಅವರು ಅನು ಸಿರಿಮನೆ ಪಾತ್ರದಲ್ಲಿ ಮೂರು ವರ್ಷಗಳ ಕಾಲ ಮಿಂಚಿದ್ದರು. ಮೊದಲ ಧಾರಾವಾಹಿಯಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮೇಘಾ, ಸದ್ಯ ಸಿನಿಮಾ ಕಡೆ ಹೆಚ್ಚು ಒಲವನ್ನು ತೋರುತ್ತಿದ್ದಾರೆ. ಮೇಘಾ ಶೆಟ್ಟಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ 'ತ್ರಿಬಲ್ ರೈಡಿಂಗ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೇ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ದಿಲ್ ಪಸಂದ್', 'ಆಫ್ಟರ್ ಆಪರೇಷನ್ ಲಂಡನ್ ಕೆಫೆ' ಹಾಗೂ 'ಕೈವಾ' ಎಂಬ ಚಿತ್ರದಲ್ಲಿಯೂ ಮೇಘಾ ಶೆಟ್ಟಿ ನಟಿಸಿದ್ದಾರೆ.

More from Filmibeat

English summary
Actress Megha Shetty turns 25 and celebrated birthaday today. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X