ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮೇಘಾಶೆಟ್ಟಿ!

By ಪ್ರಿಯಾ

ಜೊತೆ ಜೊತೆಯಲಿ ಧಾರಾವಾಹಿಯ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ, ಒಂದೇ ಒಂದು ಧಾರಾವಾಹಿಯಿಂದಲೇ ಗಮನ ಸೆಳೆದಿದ್ದಾರೆ. ಮನೆ ಮನೆಯಲ್ಲೂ ಜೊತೆ ಜೊತೆಯಲಿ ಧಾರಾವಾಹಿಯನ್ನು ನೋಡುತ್ತಾರೆ. ಧಾರಾವಾಹಿಯೂ ಕೂಡ ಈಗ ಕುತೂಹಲದ ಘಟ್ಟವನ್ನು ಸೇರಿದೆ.

ನಟಿ ಮೇಘಾ ಶೆಟ್ಟಿ ಈಗ ಮುಟ್ಟಿದ್ದೆಲ್ಲವೂ ಚಿನ್ನವಾಗುವ ಸಮಯ. ಅವರು ನಟಿಸಿದ ಮೊದಲ ಧಾರಾವಾಹಿಯೇ ಹಿಟ್ ಆಗಿದ್ದು, ಮೇಘಾ ಶೆಟ್ಟಿ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಹತ್ತು ಹಲವು ಆಫರ್‌ಗಳು ಬರುತ್ತಿವೆ. ಈ ನಡುವೆ ಮೇಘಾ ಶೆಟ್ಟಿ ಧಾರಾವಾಹಿಯೊಂದಕ್ಕೆ ನಿರ್ಮಾಪಕಿ ಕೂಡ ಆಗಿದ್ದಾರೆ.

ಇನ್ನು ಮ್ಯಾಜಿಕ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಮ್ಯಾಜಿಕ್ ಮಾಡುವುದನ್ನು ಇಷ್ಟಪಡುವವರು ಹಲವರು. ಈಗ ಅದೇ ರೀತಿ ಮೇಘಾ ಶೆಟ್ಟಿ ಕೂಡ ಮ್ಯಾಜಿಕ್ ಒಂದನ್ನು ಮಾಡಿದ್ದಾರೆ. ಅದೂ ಕೂಡ ಕಿತ್ತಳೆ ಹಣ್ಣಿನಿಂದ. ಅದು ಹೇಗೆ ಎಂದು ನೋಡೋಣ ಬನ್ನಿ..

ರೀಲ್ಸ್ ಮಾಡುವ ಅನು ಸಿರಿಮನೆ!

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಕಾಣಿಸಿಕೊಂಡ ಮೇಘಾ ಶೆಟ್ಟಿಗೆ 9ಕ್ಕೆ ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮೇಘಾ ಶೆಟ್ಟಿ, ತಾವು ಮಾಡುವ ಯೋಗ, ವರ್ಕೌಟ್, ರೀಲ್ಸ್ ಹಾಗೂ ಫೋಟೋ ಶೂಟ್, ಡ್ಯಾನ್ಸ್ ಗಳ ವಿಡಿಯೋಗಳು ಹಾಗೂ ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಮೂಲಕ ಆಗಾಗ ತಮ್ಮ ಫ್ಯಾನ್ಸ್ ಗಳಿಗೆ ಖುಷಿ ಕೊಡುತ್ತಿರುತ್ತಾರೆ. ಇದೀಗ ಮ್ಯಾಜಿಕ್ ಮಾಡಿದ್ದು, ಈ ಮ್ಯಾಜಿಕ್ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮೇಘಾ ಶೆಟ್ಟಿ ಹುಟ್ಟುಹಬ್ಬ!

ಮೇಘಾ ಶೆಟ್ಟಿ ಹುಟ್ಟುಹಬ್ಬದ ಖುಷಿಯಲ್ಲಿ ಇದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲರೂ ಮೇಘಾ ಶೆಟ್ಟಿಗೆ ವಿಶ್ ಮಾಡುತ್ತಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಯ ಹುಟ್ಟುಹಬ್ಬಕ್ಕೆ ವಿಷ್ ಮಾಡುತ್ತಿದ್ದಾರೆ. ಫ್ಯಾನ್ ಪೇಜ್‌ಗಳಲ್ಲಿ ವಿಧ ವಿಧವಾಗಿ ಎಡಿಟ್ ಮಾಡಿ ವಿಶ್ ಮಾಡಿದ್ದಾರೆ. ಇತ್ತೀಚೆಗೆ ಸಿಕ್ಕಾಪಟ್ಟೆ ಸಣ್ಣಗಾಗಿರುವ ಮೇಘಾ ಅವರು, ಜೀರೋ ಸೈಜ್ ಮೇಂಟೈನ್ ಮಾಡುತ್ತಿದ್ದಾರೆ. ಅವರ ವರ್ಕೌಟ್ ವೀಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಸಿನಿಮಾಗಳಲ್ಲಿ ಬ್ಯುಸಿ!

ನಟಿ ಮೇಘಾ ಶೆಟ್ಟಿ ಜೊತೆ ಜೊತೆ ಧಾರಾವಾಹಿಯಲ್ಲಿ ನಟಿಸುವ ಜೊತೆಗೆ ಕೆಂಡಸಂಪಿಗೆ ಎಂಬ ಹೊಸ ಸೀರಿಯಲ್‌ಗೆ ಪ್ರೊಡ್ಯೂಸರ್ ಕೂಡ ಆಗಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲೂ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ 'ತ್ರಿಬಲ್ ರೈಡಿಂಗ್' ಚಿತ್ರದಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ. ಇದರ ಜೊತೆಗೆ ಡಾರ್ಲಿಂಗ್ ಕೃಷ್ಣ ಅವರೊಂದಿಗೆ 'ದಿಲ್ ಪಸಂದ್' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಇನ್ನು 'ಆಫ್ಟರ್ ಆಪರೇಷನ್ ಲಂಡನ್ ಕೆಫೆ' ಎಂಬ ಚಿತ್ರದಲ್ಲಿ ನಟಿಸಿದ್ದು, ಇದರ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ. ಈ ಎಲ್ಲಾ ಚಿತ್ರಗಳು ರಿಲೀಸ್ ಆಗುವುದೊಂದೇ ಬಾಕಿ ಇದೆ.

ಮ್ಯಾಜಿಕ್ ಮಾಡಿದ ಅನು!

ಇನ್ನು ಅನು ಸಿರಿಮನೆ ಮ್ಯಾಜಿಕ್ ಮಾಡಿದ್ದು, ಇದರ ವೀಡಿಯೋ ವೈರಲ್ ಆಗಿದೆ. ಕಿತ್ತಳೆ ಹಣ್ಣಿನ ಸಿಪ್ಪೆ ಬಿಡಿಸಿದ್ದಾರೆ. ಈ ಹಣ್ಣನ್ನು ಕೈಯಲ್ಲಿ ಹಿಡಿದು ನಾನೀಗ ಒಂದು ಮ್ಯಾಜಿಕ್ ಮಾಡಿ ತೋರಿಸಲಾ ಎಂದು ಹೇಳಿದ್ದಾರೆ. ಮೇಘಾ ಅವರ ಜೊತೆಗಿದ್ದವರು ಹೂಗುಟ್ಟಿದ್ದು, ಮೇಘಾ ಒಂದು, ಎರಡು ಎಂದು ಕೌಂಟ್ ಮಾಡಿ ಕಿತ್ತಳೆ ಹಣ್ಣನ್ನು ಒಂದೇ ಸಲಕ್ಕೆ ಬಾಯಿ ಒಳಗೆ ಹಾಕಿಕೊಂಡು ತಿಂದಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋವನ್ನು ನಟಿ ರಮ್ಯಾ ಅಲಿಯಾಸ್ ಪ್ರಿಯದರ್ಶನಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

More from Filmibeat

English summary
Actress Megha shetty Celebrating Birthday, Know Mofre About Megha Shetty,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X