For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾದ 'ಜೊತೆ ಜೊತೆಯಲಿ' ನಟಿ ಮೇಘಾ ಶೆಟ್ಟಿ

  By ಪ್ರಿಯಾ ದೊರೆ
  |

  ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಮೊದಲ ಧಾರಾವಾಹಿಯಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಮೇಘಾ ಶೆಟ್ಟಿ ಅವರು ನಿಧಾನವಾಗಿ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.

  'ಜೊತೆ ಜೊತೆಯಲಿ' ಧಾರಾವಾಹಿ ಕಥೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಅನು ಸಿರಿಮನೆಯ ಧೈರ್ಯ, ತಾಳ್ಮೆಯ ಪರೀಕ್ಷೆ ನಡೆಯುತ್ತಿದೆ. ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಅಭಿನಯವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಸಾಫ್ಟ್ ಅನು, ರಗಡ್ ಅನು, ಲವ್ಲಿ ಅನು ಹೀಗೆ ನಾನಾ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಅನು ಬೆಳ್ಳಿ ಪರದೆ ಮೇಲೂ ಕಾಣಿಸಿಕೊಳ್ಳಲಿದ್ದಾರೆ.

  ನಗು ನಗುತ್ತಿರುವ ಮೇಘಾ ಶೆಟ್ಟಿ ನೋವಿನ ಸಂಗತಿ ನಿಮಗೆ ಗೊತ್ತಿದ್ಯಾ?ನಗು ನಗುತ್ತಿರುವ ಮೇಘಾ ಶೆಟ್ಟಿ ನೋವಿನ ಸಂಗತಿ ನಿಮಗೆ ಗೊತ್ತಿದ್ಯಾ?

  ನಟಿ ಮೇಘಾ ಶೆಟ್ಟಿ ಈಗ ಮುಟ್ಟಿದ್ದೆಲ್ಲವೂ ಚಿನ್ನವಾಗುವ ಸಮಯ. ಅವರು ನಟಿಸಿದ ಮೊದಲ ಧಾರಾವಾಹಿಯೇ ಹಿಟ್ ಆಗಿದ್ದು, ಮೇಘಾ ಶೆಟ್ಟಿ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಹತ್ತು ಹಲವು ಆಫರ್‌ಗಳು ಬರುತ್ತಿವೆ. ಈ ನಡುವೆ ಮೇಘಾ ಶೆಟ್ಟಿ ಅವರು ಧಾರಾವಾಹಿಯೊಂದಕ್ಕೆ ಪ್ರೊಡ್ಯುಸರ್ ಕೂಡ ಆಗಿದ್ದಾರೆ.

   ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಬ್ಯುಸಿ

  ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಬ್ಯುಸಿ

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ಆಗಿ ಮೇಘಾ ಮೋಡಿ ಮಾಡಿದ್ದಾರೆ. ಇನ್ನು 20ರ ಆಸು-ಪಾಸಿನ ಹುಡುಗಿ 45 ವಯೋಮಾನದ ಆರ್ಯವರ್ಧನನ್ನು ಪ್ರೀತಿಸಿ ಮದುವೆಯಾಗಿರುವ ಕಥೆ. ಇದರಲ್ಲಿ ಅನುಳದ್ದು ಎರಡನೇ ಜನ್ಮ. ಈ ಕಥೆ ಅದ್ಭುತವಾಗಿದ್ದು, ಅನು ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇನ್ನು ಅನು ನಟನೆಯ ಜೊತೆಗೆ ಧಾರಾವಾಹಿಯೊಂದನ್ನು ಪ್ರೊಡ್ಯೂಸ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇಷ್ಟೇ ಅಲ್ಲದೇ, ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಿದ್ದು, ಈಗ ಮೇಘಾ ಶೆಟ್ಟಿ ಅವರು ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಬ್ಯುಸಿಯಾಗಿದ್ದಾರೆ.

  ಆರ್ಯವರ್ಧನ್‌ಗೆ ಆಕ್ಸಿಡೆಂಟ್ ಆಗಿದ್ದು ಬದುಕುಳಿಯುತ್ತಾನಾ..?ಆರ್ಯವರ್ಧನ್‌ಗೆ ಆಕ್ಸಿಡೆಂಟ್ ಆಗಿದ್ದು ಬದುಕುಳಿಯುತ್ತಾನಾ..?

   ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ವೀಟ್

  ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ವೀಟ್

  ಮೇಘಾ ಶೆಟ್ಟಿ ಅವರಿಗೆ ಇನ್ ಸ್ಟಾಗ್ರಾಂನಲ್ಲಿ ದೊಡ್ಡ ಸಂಖ್ಯೆಯಲ್ಲಿ ಫಾಲೋವರ್ಸ್ ಇದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮೇಘಾ ಶೆಟ್ಟಿ, ತಾವು ಮಾಡುವ ಯೋಗ, ವರ್ಕೌಟ್, ರೀಲ್ಸ್ ಹಾಗೂ ಫೋಟೋ ಶೂಟ್, ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಮೂಲಕ ಆಗಾಗ ತಮ್ಮ ಫ್ಯಾನ್ಸ್‌ಗೆ ಖುಷಿ ಕೊಡುತ್ತಿರುತ್ತಾರೆ. ಇನ್ನು ತಮ್ಮ ಹೊಸ ಪ್ರಾಜೆಕ್ಟ್‌ಗಳ ಬಗ್ಗೆಯೂ ಅಪ್ ಲೋಡ್ ಮಾಡುತ್ತಿರುತ್ತಾರೆ.

   4 ಚಿತ್ರಗಳಲ್ಲಿ ನಟಿಸ್ತಿರುವ ಮೇಘಾ

  4 ಚಿತ್ರಗಳಲ್ಲಿ ನಟಿಸ್ತಿರುವ ಮೇಘಾ

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸಿದ ಕೆಲವೇ ತಿಂಗಳಲ್ಲಿ ಸಿನಿಮಾದಲ್ಲೂ ಚಾನ್ಸ್ ಗಿಟ್ಟಿಸಿಕೊಂಡ ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ನಟಿಸಿಯೇ ಬಿಟ್ಟರು. ಇದು ಇವರ ಮೊದಲ ಚಿತ್ರ. ಆದರೆ, ಇನ್ನೂ ಚಿತ್ರದ ರಿಲೀಸ್ ಆಗಿಲ್ಲ. ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಸಕತ್ ಸದ್ದು ಮಾಡುತ್ತಿದೆ. ಇನ್ನು ಇದಾದ ಬಳಿಕ ಡಾರ್ಲಿಂಗ್ ಕೃಷ್ಣ ಅವರೊಂದಿಗೆ 'ದಿಲ್ ಪಸಂದ್' ಚಿತ್ರದಲ್ಲೂ ಮೇಘಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇದರ ಶೂಟಿಂಗ್ ಕೂಡ ಮುಗಿದಿದ್ದು, ನವೆಂಬರ್‌ನಲ್ಲಿ ಚಿತ್ರ ತೆರೆ ಕಾಣಲಿದೆ. ಇತ್ತೀಚೆಗಷ್ಟೇ 'ಆಫ್ಟರ್ ಆಪರೇಷನ್ ಲಂಡನ್ ಕೆಫೆ' ಎಂಬ ಚಿತ್ರದಲ್ಲಿ ನಟಿಸಿದ್ದು, ಇದರ ಶೂಟಿಂಗ್ ಮುಗಿದಿದೆ. ಈ ಯಾವ ಚಿತ್ರಗಳೂ ರಿಲೀಸ್ ಆಗಿಲ್ಲ. ಅಷ್ಟರಲ್ಲಾಗಲೇ ಮೇಘಾ ಶೆಟ್ಟಿ ಅವರು ಮತ್ತೊಂದು ಚಿತ್ರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅದೇ 'ಕೈವಾ' ಚಿತ್ರ.

   ಪ್ಯಾನ್ ಇಂಡಿಯಾ ಚಿತ್ರದಲ್ಲಿ ಮೇಘಾ ಶೆಟ್ಟಿ

  ಪ್ಯಾನ್ ಇಂಡಿಯಾ ಚಿತ್ರದಲ್ಲಿ ಮೇಘಾ ಶೆಟ್ಟಿ

  'ಆಫ್ಟರ್ ಆಪರೇಷನ್ ಲಂಡನ್ ಕೆಫೆ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕವಿ ಶೆಟ್ಟಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದು ಆಕ್ಷನ್ಸ್ ಥ್ರಿಲ್ಲರ್ ಸಿನಿಮಾ. ಸಡಗರ ರಾಘವೇಂದ್ರ ಅವರೇ ಲಂಡನ್ ಕೆಫೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದು ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ. ಇನ್ನು 'ಕೈವಾ' ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು, ಅಭಿಮಾನಿಗಳು ಮೇಘಾ ಶೆಟ್ಟಿ ಅವರನ್ನು ತೆರೆಮೇಲೆ ನೋಡಲು ಕಾತುರರಾಗಿದ್ದಾರೆ.

  English summary
  Actress Megha Shetty gets Busy with Back to Back movies. Know More.
  Monday, September 19, 2022, 19:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X