Megha Shetty: ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಮೇಘಾ ಶೆಟ್ಟಿ, ಬೇಸರಗೊಂಡ ಫ್ಯಾನ್ಸ್!
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಗ್ರ್ಯಾಂಡ್ ಆಗಿ ಕಿರುತೆರೆಗೆ ಕಾಲಿಟ್ಟ ನಟಿ ಮೇಘಾ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ಮೇಘಾ ಶೆಟ್ಟಿ, ಒಂದಲ್ಲ ಒಂದು ಸುದ್ದಿಯಲ್ಲಿ ಜನರಿಗೆ ಮತ್ತಷ್ಟು ಹತ್ತಿರ ಆಗಲು ಬಯಸುತ್ತಾರೆ. ಕಿರುತೆರೆ ಚೆಲುವೆ ಮೇಘಾ ಶೆಟ್ಟಿ ಸಿನಿಮಾಗಳಲ್ಲೂ ಕೂಡ ಸಖತ್ ಬ್ಯುಸಿ ಆಗಿ ಇದ್ದಾರೆ. ಈ ಮಧ್ಯೆ ಅವರು ಹೊಸ ಫೋಟೋಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಆ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ಆ ಫೋಟೋ ನೋಡುತ್ತಿದ್ದ ಹಾಗೆಯೇ ಮೇಘಾ ಅಭಿಮಾನಿಗಳು ನಮಗೆ ಹಳೆಯ ಮೇಘಾ ಶೆಟ್ಟಿ ಬೇಕು.. ಇಂಥ ಬಟ್ಟೆ ಹಾಕುವ ಮೇಘಾ ಶೆಟ್ಟಿ ಬೇಡ ಎಂದು ಹೇಳುತ್ತಿದ್ದಾರೆ. ಫೋಟೋಗಳಲ್ಲಿ ಮೇಘಾ ಶೆಟ್ಟಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಂಡ ನಟಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.

ಫೋಟೋಗೆ ಕಾಮೆಂಟ್ ಮಾಡಿರುವ ಹಲವು ಅಭಿಮಾನಿಗಳು ಇದು ತುಂಬಾ ಓವರ್ ಆಯ್ತು ಎಂದು ಹೇಳಿದ್ದಾರೆ. ಇನ್ನು ಕೆಲವರು ಇದೇನು ಇಷ್ಟು ಗಲೀಜಾಗಿ ಫೋಟೋಶೂಟ್ ಮಾಡಿಸಿಕೊಂಡು ಇದ್ದೀರಾ ಎಂದೆಲ್ಲ ಪ್ರಶ್ನೆ ಮಾಡುತ್ತಾ ಇದ್ದರೆ, ಕೆಲವರು ಮಾತ್ರ ಹಾರ್ಟ್ ಸಿಂಬಲ್ ಕಳುಹಿಸಿ ಖುಷಿ ಪಟ್ಟಿದ್ದಾರೆ. ಇನ್ನೂ ಹಿರಿತೆರೆಯಲ್ಲಿ ಬಹಳ ಬ್ಯುಸಿಯಾಗಿರುವ ನಟಿ ಮೇಘಾ ಶೆಟ್ಟಿ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ.
ಗ್ಲಾಮರಸ್ ಆಗಿ ಕಾಣಿಸಿಕೊಂಡ ನಟಿ ಮೇಘಾ ಶೆಟ್ಟಿ
ಮೇಘಾ ಶೆಟ್ಟಿ ಹೊಸ ಫೋಟೋಗಳಲ್ಲಿ ಗ್ಲಾಮರಸ್ ಆಗಿ ಸಖತಾಗಿ ಕಾಣಿಸಿಕೊಂಡಿದ್ದಾರೆ. ನಟಿ ಮೇಘಾ ಶೆಟ್ಟಿ ವಿನಯ್ ರಾಜ್‌ಕುಮಾರ್ ನಟನೆಯ ಗ್ರಾಮಾಯಣ ಸಿನಿಮಾಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಈ ಸಿನಿಮಾ ಸಲುವಾಗಿ ಮೂಗಿಗೆ ಮೂಗುತಿಯನ್ನೂ ಚುಚ್ಚಿಸಿಕೊಂಡು ಬಹಳ ಸುದ್ದಿಯಲ್ಲಿದ್ದಾರೆ. ಹಾಗೆಯೇ ಮೂಗು ಬುಟ್ಟು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.

ಹಲವು ಸಿನಿಮಾಗಳಲ್ಲಿ ಮೋಡಿ ಮಾಡಿದ್ದ 'ಅನು ಸಿರಿಮನೆ'
ಇನ್ನೂ ಹಿಂದೆ ಕೂಡ ಹಲವು ಸಿನಿಮಾದಲ್ಲಿ ಮೇಘಾ ಶೆಟ್ಟಿ ನಟನೆ ಮಾಡಿದ್ದರು. ಥ್ರಿಬಲ್ ರೈಡಿಂಗ್ ಅನ್ನೋ ಸಿನಿಮಾದಲ್ಲಿ ಅಭಿನಯಿಸಿದ್ದರು. ಹಾಗೆಯೇ ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್ ಸಿನಿಮಾದಲ್ಲೂ ಮೇಘಾ ಅಭಿನಯಿಸಿ ಎಲ್ಲರ ಮನ ಗೆದ್ದಿದ್ದರು. ಹಾಗೆಯೇ ಮೇಘಾ ಶೆಟ್ಟಿಗೆ ಬೇರೆ ಭಾಷೆಯಲ್ಲು ನಟನೆ ಮಾಡಲು ಅವಕಾಶ ಸಿಕ್ಕಿದೆ. ಮರಾಠಿ ಭಾಷೆಯ ಸಿನಿಮಾದಲ್ಲಿ ಅಭಿನಯ ಮಾಡಲು ಮೇಘಾ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.
ಕಿರುತೆರೆಯಲ್ಲಿ ಕೂಡ ಅದ್ಭುತ ನಟನೆ
ಜೊತೆ ಜೊತೆಯಲಿ ಬಳಿಕ ಮೇಘಾ ಶೆಟ್ಟಿ ಸಿನಿಮಾಗಳನ್ನು ಮಾಡುವತ್ತ ಗಮನ ಹರಿಸಿದ್ದಾರೆ. ಮೇಘಾ ಶೆಟ್ಟಿ ಕಿರುತೆರೆಯಲ್ಲಿ ಕೂಡ ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನ ಗೆದ್ದಿದ್ದರು. ಹಾಗೆಯೇ ಹಲವು ಸಿನಿಮಾಗಳಎಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ ಎಂದರೆ ತಪ್ಪಾಗದು. ಜೊತೆ ಜೊತೆಯಲಿ ಧಾರಾವಾಹಿಯ ಅನು ಸಿರಿಮನೆ ಪಾತ್ರ ಕಿರುತೆರೆ ವೀಕ್ಷಕರಲ್ಲಿ ಹೊಸ ಸಂಚಲನ ಮೂಡಿಸಿತ್ತು.


Click it and Unblock the Notifications