"ಸಲ್ಮಾ' ಪಾತ್ರ ನಿಜಕ್ಕೂ ಚಾಲೆಂಜಿಗ್ ಆಗಿತ್ತು" ಎಂದ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ
'ಜೊತೆ ಜೊತೆಯಲಿ' ಧಾರಾವಾಹಿಯಿಂದ ಬಹಳ ಜನಪ್ರಿಯತೆ ಪಡೆದ ನಟಿ ಮೇಘ ಶೆಟ್ಟಿಯವರು 'ಕೈವ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಇದೀಗ ಬಹಳಷ್ಟು ಹೆಸರು ಮಾಡಿದ್ದಾರೆ. ಈಗಾಗಲೇ ಸಿನಿಮಾ ರಿಲೀಸ್ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಕೂಡ ಬಂದಿದೆ. ಈ ಸಿನಿಮಾದಲ್ಲಿ ಒಬ್ಬ ಮುಸ್ಲಿಂ ಹುಡುಗಿಯ ಪಾತ್ರವನ್ನು ಮಾಡಿರುವ ನಟಿ ಮೇಘಾ ಶೆಟ್ಟಿ ತಮ್ಮ ಪಾತ್ರಕ್ಕೆ ಬೇಕಾದಂತಹ ತಯಾರಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮುಸ್ಲಿಂ ಪಾತ್ರವನ್ನು ಮಾಡುವುದು ಸುಲಭವಾಗಿರಲಿಲ್ಲವಂತೆ. ಬಹಳ ಕಷ್ಟದ ಚಾಲೆಂಜಿಂಗ್ ವಿಚಾರವಾಗಿತ್ತಂತೆ. 'ಕೈವ' ಸಿನಿಮಾದಲ್ಲಿ ಸಲ್ಮಾ ಎಂಬ ಪಾತ್ರಕ್ಕೆ ಜೀವ ತುಂಬಿರುವ ಈ ನಟಿ ಹೊಸದೊಂದು ಸಂಸ್ಕೃತಿಯನ್ನು, ಭಾಷೆ, ಬಟ್ಟೆ, ಹಾವ-ಭಾವವನ್ನು ಅಳವಡಿಸಿಕೊಳ್ಳಲು ಬಹಳಷ್ಟು ಟ್ರೈನಿಂಗ್ ಪಡೆದಿದ್ದರಂತೆ. ಲುಕ್ ಟೆಸ್ಟ್‌ನಲ್ಲಿಯೂ ಆಕೆ ಮುಸ್ಲಿಂ ಹುಡುಗಿಯ ಹಾಗೆ ಕಾಣಬೇಕಿತ್ತಂತೆ. ಅದಕ್ಕೂ ಬಹಳಷ್ಟು ತಯಾರಿಗಳಾಗಿದ್ದವಂತೆ.

ನಿರ್ದೇಶಕ ಜಯತೀರ್ಥ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಒಂದು ನೈಜ ಘಟನೆ ಆಧಾರಿತವಾಗಿದ್ದು 1983 ರ ಕಥೆಯಾಗಿದೆ. ನಿರ್ದೇಶಕರು ಬಹಳ ತಾಳ್ಮೆ ಹಾಗೂ ಸಹನೆಯಿಂದ ಪ್ರತಿ ಸೀನ್ ಅನ್ನು ನಟರಿಗೆ ಅರ್ಥೈಸಿ ಕೊಡುತ್ತಿದ್ದರಂತೆ. ಜೊತೆಗೆ ತಮ್ಮ ಸಹ ನಟರಾದ ಸಿನಿಮಾ ನಾಯಕ ಧನವೀರ್ ಬಗ್ಗೆಯೂ ಮಾತನಾಡಿರುವ ನಟಿ ಮೇಘಾ ಶೆಟ್ಟಿ ಬಹಳ ಹಾಗೂ ತಾಳ್ಮೆಯ ನಟ ಎಂದು ಹೊಗಳಿದ್ದಾರೆ.
ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಎರಡು ಪ್ರಮುಖ ಪಾತ್ರಗಳು ನಿಜ ಜೀವನದ ಪಾತ್ರಗಳೇ ಆಗಿದ್ದು ಇಂದಿಗೂ ಜೀವಂತವಾಗಿದ್ದಾರಂತೆ. ಒಟ್ಟಿನಲ್ಲಿ ನಟಿ ಮೇಘ ಶೆಟ್ಟಿಗೆ ಬಿಗ್ ಬ್ರೇಕ್ ಕೊಡುವ ಎಲ್ಲಾ ಸಾಧ್ಯತೆಗಳು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ನಟಿಗೆ ಸಲ್ಮಾ ಎಂಬ ಪಾತ್ರ ಮನಸ್ಸಿಗೆ ಬಹಳ ಹತ್ತಿರವಾದದ್ದು ಎಂದು ಹೇಳಿಕೊಂಡಿದ್ದಾರೆ.

ಇನ್ನು ಪ್ಯಾನ್ ಇಂಡಿಯಾ ಸಿನಿಮಾ 'ಆಫ್ಟರ್ ಆಪರೇಶನ್ ಲಂಡನ್ ಕೆಫೆ' ಸಿನಿಮಾದಲ್ಲಿ ನಟಿಸಿರುವ ಮೇಘಾ ಶೆಟ್ಟಿ ಪ್ರಜ್ವಲ್ ದೇವರಾಜ್ ಅಭಿನಯದ 'ಚೀತಾ'ದಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೇ ವಿನಯ್ ರಾಜ್ ಕುಮಾರ್ ನಟನೆಯ 'ಗ್ರಾಮಾಯಣ'ದಲ್ಲಿ ನಾಯಕಿಯಾಗಿ ನಟಿಸಲಿರುವ ಮೇಘಾ ಶೆಟ್ಟಿ ಮತ್ತೆ ಕಿರುತೆರೆಗೆ ಮರಳುತ್ತಾರಾ? ಅನ್ನೋ ಪ್ರಶ್ನೆಯಂತೂ ಎದ್ದಿದೆ.


Click it and Unblock the Notifications











