ಡಿಫರೆಂಟ್ ಆಗಿ ಸೀರೆಯುಟ್ಟು ನವಿಲಾಗಿ ನಲಿದ ಮೇಘಾ ಶೆಟ್ಟಿ, ನವರಾತ್ರಿಯ ನವತಾರೆ ಎಂದ ಫ್ಯಾನ್ಸ್!
ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನವರಾತ್ರಿ ಹಬ್ಬವನ್ನು ಅನೇಕ ಮಂದಿ ನಟ ನಟಿಯರು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅವರಲ್ಲಿ ಒಬ್ಬರು ಮೇಘಾ ಶೆಟ್ಟಿ ಕೂಡ ಒಬ್ಬರು. ನಟಿ ಮೇಘಾ ಶೆಟ್ಟಿ ತಮ್ಮ ಅದ್ಭುತ ನಟನೆಯಿಂದ ನೋಡುಗರ ಮನ ಗೆದ್ದಿದ್ದಾರೆ. ಇದೀಗ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮೇಘಾ ಶೆಟ್ಟಿ ಫೋಟೋಶೂಟ್ ಮಾಡಿಸಿಕೊಂಡು ನೋಡುಗರಿಗೆ ಬಹಳ ಖುಷಿ ನೀಡಿದೆ.
ಮೇಘಾ ಶೆಟ್ಟಿ ಸೀರೆಯುಟ್ಟು ಬಹಳ ಅದ್ಭುತವಾಗಿ ಕಾಣಿಸುತ್ತ ಇದ್ದಾರೆ. ನವರಾತ್ರಿಯ 8ನೇ ದಿನ ಎಂದು ಟೈಟಲ್ ನೀಡಿ ರೇಷ್ಮೇ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಫಿದಾ ಆಗಿದ್ದಾರೆ.

ಈ ಫೋಟೋಗಳಲ್ಲಿ ಮೇಘಾ ಶೆಟ್ಟಿ ಬಹಳ ಡಿಫರೆಂಟ್ ಆಗಿ ಸೀರೆಯುಟ್ಟಿದ್ದಾರೆ. ಮೇಘಾ ಶೆಟ್ಟಿ ಸೀರೆಯುಟ್ಟ ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೇಘಾ ಶೆಟ್ಟಿ ಫೋಟೋ ನೋಡಿ ಅಭಿಮಾನಿಗಳು ಹಲವಾರು ಕಾಮೆಂಟ್ ಮಾಡುತ್ತಿದ್ದು ಸೂಪರ್, ನೈಸ್ ಎಂದು ಮೆಚ್ಚುಗೆ ಸುರಿಸಿದ್ದಾರೆ.
ಮೇಘಾ ಶೆಟ್ಟಿ ಫೋಟೋ ನೋಡಿ ಅಭಿಮಾನಿಗಳು ಫಿದಾ
ಇನ್ನೂ ಮೇಘಾ ಶೆಟ್ಟಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಡಿಫರೆಂಟ್ ಸ್ಟೈಲ್ ನಲ್ಲಿ ಸೀರೆಯುಟ್ಟ ಮೇಘಾ ಶೆಟ್ಟಿ ಬಹಳ ಸುಂದರವಾಗಿ ಕಾಣಿಸುತ್ತಿದ್ದು ನೋಡುಗರ ಮನದಲ್ಲಿ ಕಚಗುಳಿ ಇಡುವ ಹಾಗೆ ಆಗುತ್ತಿದೆ. ಮೇಘಾ ಶೆಟ್ಟಿ ಇದೀಗ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಗಳು ಮಾತ್ರ ಬಹಳ ಖುಷಿ ಪಟ್ಟಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಮೇಘಾ ಶೆಟ್ಟಿ ನಟನೆಗೆ ಅನೇಕ ಜನ ಫಿದಾ ಆಗಿದ್ದಾರೆ. ಜೊತೆ ಜೊತೆಯಲಿ ಧಾರವಾಹಿ ಹಿಟ್ ಆದ ಬಳಿಕ ಹಲವು ಸಿನಿಮಾದಲ್ಲಿ ನಟನೆ ಮಾಡುವ ಆಫರ್ ಸಿಗುತ್ತದೆ. ಗಣೇಶ್ ಜೊತೆಗಿನ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ ನಟಿ
ಇದೀಗ ಹಲವು ಸಿನಿಮಾಗಳಲ್ಲಿ ನಟನೆ ಮಾಡುವತ್ತ ಮೇಘಾ ಚಿತ್ತ ಹರಿಸಿದ್ದಾರೆ . ಇನ್ನೂ ಮೇಘಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ . ಆಗಾಗ ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ. ಹಾಗೆಯೇ ಟಿಕ್ ಟಾಕ್ ಗಳನ್ನೂ ಮಾಡುತ್ತಾ ಅಭಿಮಾನಿಗಳ ಮನದಲ್ಲಿ ನೆಲೆಸಿದ್ದಾರೆ.
ಮೇಘಾ ಶೆಟ್ಟಿ ಸೀರೆಯುಟ್ಟ ಸ್ಟೈಲ್ ನೋಡಿ ಫ್ಯಾನ್ಸ್ ಫಿದಾ
ಇನ್ನೂ ಸೀರೆಯುಟ್ಟ ಮೇಘಾ ಶೆಟ್ಟಿಯನ್ನು ನೋಡಿದ ಅನೇಕ ಜನರು ಬಹಳ ಖುಷಿ ಪಟ್ಟಿದ್ದಾರೆ. ಸೀರೆಯುಟ್ಟಿರುವ ಇದ್ಯಾವ ಸ್ಟೈಲ್ ಎಂದೆಲ್ಲ ಕಾಮೆಂಟ್ ಮಾದುತ್ತಿದ್ದು ಅಭಿಮಾನಿಗಳ ಪ್ರಶ್ನೆಗೆ ಮೇಘಾ ಇನ್ನಷ್ಟೇ ಉತ್ತರ ನೀಡಬೇಕಾಗಿದೆ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಕೂಡ ಈ ನಟಿ ಬಹಳ ಬ್ಯುಸಿ ಆಗಿದ್ದಾರೆ. ಸಿನಿಮಾಗಳಲ್ಲಿ ಸಖತ್ ಬ್ಯುಸಿ ಇರುವ ನಟಿಯನ್ನು ನೋಡಿದ ಅಭಿಮಾನಿಗಳು ಮೇಘಾ ಶೆಟ್ಟಿಯ ಇನ್ನೊಂದು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











