Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Megha Shetty : D Boss ಸಫಾರಿಯಲ್ಲಿ ಸ್ನೇಹಿತರೊಂದಿಗೆ ಮೇಘಾ ಶೆಟ್ಟಿ ಪಾರ್ಟಿ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಾಮಾನ್ಯ ಜನರಷ್ಟೇ ಅಲ್ಲ ನಟ-ನಟಿಯರು ಕೂಡ ಅಭಿಮಾನಿಗಳೆ. ಇಂಡಸ್ಟ್ರಿ ಒಳಗಿರುವ ಎಷ್ಟೋ ಕಲಾವಿದರು ದರ್ಶನ್ ಅವರಿಗೆ ಅಭಿಮಾನಿಗಳಾಗಿದ್ದಾರೆ. ಅದರಲ್ಲಿ ಮೇಘಾ ಶೆಟ್ಟಿ ಕೂಡ ಒಬ್ಬರು. ಆಗಾಗ ಫೋಟೋ ಹಾಕುವ ಮೂಲಕ ತಮ್ಮ ಅಭಿಮಾನವನ್ನು ತೋರಿಸುತ್ತಾ ಇರುತ್ತಾರೆ.
ಮೇಘಾ ಶೆಟ್ಟಿ 'ಜೊತೆ ಜೊತೆಯಲ್ಲಿ' ಧಾರಾವಾಹಿ ಮೂಲಕ ಎಲ್ಲರ ಮನ ಗೆದ್ದವರು. ಬಳಿಕ ಟಿವಿ ಫೇಮ್ ಸಿನಿಮಾ ರಂಗಕ್ಕೂ ಕರೆತಂದಿತ್ತು. ಒಂದೆರಡು ಸಿನಿಮಾಗಳಲ್ಲಿ ನಾಯಕಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೀಗ ಧಾರಾವಾಹಿ ಹಾಗೂ ಸಿನಿಮಾ ಎರಡು ಕಡೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಅದರ ಜೊತೆಗೆ ತನ್ನ ಫ್ಯಾನ್ಸ್‌ಗೆ ಆಗಾಗ ತಲೆಗೆ ಹುಳವನ್ನು ಬಿಡುತ್ತಾ ಇರುತ್ತಾರೆ.
ಜನ
ಇಂದಿಗೂ
ನನ್ನನ್ನು
ಧನ್ಯಾ
ಎಂದೇ
ಗುರುತಿಸುತ್ತಾರೆ
:
ದೀಪಿಕಾ

ಸ್ನೇಹಿತರೊಂದಿಗೆ ಪಾರ್ಟಿ ಮೂಡ್‌ನಲ್ಲಿ ಮೇಘಾ
ಮೇಘಾ ಶೆಟ್ಟಿ ಹೆಚ್ಚಾಗಿ ಫ್ರೆಂಡ್ಸ್ ಜೊತೆಗೆ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ. ಅಕ್ಕನ ಜೊತೆಗೆ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಅವರ ಸೋಶಿಯಲ್ ಮೀಡಿಯಾದಲ್ಲೆಲ್ಲಾ ಬರೀ ಅಕ್ಕನ ಜೊತೆಗೆ ಮಾಡಿರುವ ರೀಲ್ಸ್, ಅಕ್ಕನ ಜೊತೆಗೆ ಎಂಜಾಯ್ ವಿಡಿಯೋನೇ ಕಾಣಿಸುತ್ತದೆ. ಜೊತೆಗೆ 'ಜೊತೆ ಜೊತೆಯಲಿ' ಧಾರಾವಾಹಿಯ ರಮ್ಯಾ ಜೊತೆಗೂ ಹೆಚ್ಚು ಕ್ಲೋಸ್ ಆಗಿದ್ದಾರೆ. ಇದೀಗ ಫ್ರೆಂಡ್ಸ್ ಜೊತೆಗೆ ದೊಡ್ಡ ಪಾರ್ಟಿ ಮಾಡಿದ್ದಾರೆ.
ಕಿರುತೆರೆ
ನಂತರ
ಹಿರಿತೆರೆಗೆ
ಕಾಲಿಟ್ಟ
ನಿಶಾ
ಹೆಗಡೆ

ದರ್ಶನ್ ಸ್ಪೆಷಲ್ ಪ್ಲೇಸ್‌ನಲ್ಲಿ ಮೇಘಾ ಶೆಟ್ಟಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾವಿಷ್ಟಪಡುವ ಒಂದಷ್ಟು ಸ್ಥಳಗಳಿದ್ದಾವೆ. ಅದರಲ್ಲಿ ರಾಜರಾಜೇಶ್ವರಿ ನಗರದ ಸ್ಟೋನ್ ಬ್ರೂಕ್ ರೆಸ್ಟೊರೆಂಟ್ ಕೂಡ ಒಂದು ಎಂದು ಆಪ್ತ ಮೂಲಗಳು ತಿಳಿಸುತ್ತವೆ. ಆ ರೆಸ್ಟೊರೆಂಟ್‌ನಲ್ಲಿ ದರ್ಶನ್‌ಗಾಗಿಯೇ ಒಂದು ಸ್ಪೆಷಲ್ ಪ್ಲೇಸ್ ಕೂಡ ಇದೆ. ಅದರಲ್ಲಿ DBoss ಸಫಾರಿಯನ್ನು ಮಾಡಲಾಗಿದೆ. ಕಾಡಿನ ರೀತಿಯ ಸೆಟಪ್ ಹಾಕಲಾಗಿದೆ. ಮೊದಲೇ ದರ್ಶನ್‌ಗೆ ಕಾಡು, ಕಾಡಿನ ಪ್ರಾಣಿಗಳೆಂದರೆ ತುಂಬಾ ಇಷ್ಟ. ಹೀಗಾಗಿ ಕಾಡಿನ ರೀತಿಯೇ ಅಲಂಕಾರ ಮಾಡಲಾಗಿದೆ. ಇಲ್ಲಿಗೆ ಮೇಘಾ ಶೆಟ್ಟಿ ಭೇಟಿ ನೀಡಿ, ಫೋಟೊಗೆ ಪೋಸ್ ಕೂಡ ನೀಡಿದ್ದಾರೆ.

ದರ್ಶನ್ ಜೊತೆ ಫೋಟೋ ಹಾಕಿದ್ದ ನಟಿ
ಮೇಘಾ ಶೆಟ್ಟಿ ಕಳೆದ ಕೆಲವು ತಿಂಗಳ ಹಿಂದಷ್ಟೆ ಒಂದಷ್ಟು ಸ್ಪೆಷಲ್ ಫೋಟೋಗಳನ್ನು ಹಂಚಿಕೊಂಡಿದ್ದರು. ಅದುವೇ ದರ್ಶನ್ ಜೊತೆಗಿನ ಫೊಟೋ. ಮೊದಲಿಗೆ ದರ್ಶನ್ ಜೊತೆಗಿದ್ದ ಫೋಟೋ ಹಂಚಿಕೊಂಡು ಒಂದಷ್ಟು ಕುತೂಹಲವನ್ನು ಮೂಡಿಸಿದ್ದರು. ಕ್ಯಾಪ್ಶನ್ ಕೂಡ ಹಾಕದೆ ಫೋಟೋ ಹಂಚಿಕೊಂಡಿದ್ದರು. ಇದನ್ನು ನೋಡಿ ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದಾರಾ ಎಂಬ ಪ್ರಶ್ನೆಯನ್ನು ಹುಟ್ಟಾಕಿದ್ದರು. ಬಳಿಕ ಅದೇ ದಿನಾಂಕ, ಅದೇ ತಿಂಗಳು ಮತ್ತೊಂದು ಫೋಟೋ ಹಂಚಿಕೊಂಡಿದ್ದರು. ಅದು ಕೂಡ ಮತ್ತಷ್ಟು ಕುತೂಹಲವನ್ನು ಕೆರಳಿಸಿತ್ತು.

ಡಿಸೈನರ್ ಪವಿತ್ರಾ ಬರ್ತ್ ಡೇ ಪಾರ್ಟಿ
ಮಾಡೆಲ್ ಕಮ್ ಫ್ಯಾಷನ್ ಡಿಸೈನರ್ ಪವಿತ್ರಾ ಗೌಡ ಗ್ರ್ಯಾಂಡ್ ಆಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಬರ್ತ್ ಡೇ ಪಾರ್ಟಿಯನ್ನು ಸ್ಟೋನ್ ಬ್ರೂಕ್ ರೆಸ್ಟೊರೆಂಟ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಮೇಘಾ ಶೆಟ್ಟಿ ಸೇರಿದಂತೆ ಸೋನಲ್ ಹಾಗೂ ಇನ್ನಿತರೆ ನಟಿಯರು ಹಾಜರಿದ್ದರು. ಮೇಘಾ ಶೆಟ್ಟಿ ಈ ಹಿಂದೆ ಪವಿತ್ರಾ ಗೌಡ ಅವರ ಮಾಡೆಲ್ ಕೂಡ ಆಗಿದ್ದರು.