Bhagyalakshmi:'ಭಾಗ್ಯಲಕ್ಷ್ಮೀ' ಸೀರಿಯಲ್‌ಗೆ ಬಿಗ್ ಬಾಸ್ ಖ್ಯಾತಿಯ ಮೇಘಾಶ್ರೀ ಎಂಟ್ರಿ; ಹೊರಬಿತ್ತು ಆದಿ ಬದುಕಿನ ಕಹಿ ಸತ್ಯ
ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮೀ' ಸೀರಿಯಲ್ ಕೂಡ ಒಂದು. ದಿನದಿಂದ ದಿನಕ್ಕೆ ಕಥೆ ಹೊಸ ಹೊಸ ತಿರುವು ಪಡೆಯುತ್ತಿದೆ. ವೀಕ್ಷಕರನ್ನು ಹಿಡಿದಿಡಲು ಈಗ ಒಂದು ಸೂಪರ್ ಟ್ವಿಸ್ಟ್ ಕೊಟ್ಟಿದ್ದಾರೆ. ಕಿರುತೆರೆ ಮತ್ತು ಬಿಗ್ ಬಾಸ್ ಖ್ಯಾತಿಯ ನಟಿ ಮೇಘಾಶ್ರೀ ಅವರು ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೀರಿಯಲ್‌ಗೆ ಹೊಸ ಕಳೆ ಬಂದಂತಾಗಿದೆ.
ಈಗ ಧಾರಾವಾಹಿಯಲ್ಲಿ ಆದಿ ಮತ್ತು ಭಾಗ್ಯಾ ನಡುವೆ ಸ್ನೇಹ ಗಟ್ಟಿಯಾಗಿದೆ. ಇತ್ತ ಆದಿ ಮತ್ತು ಭಾಗ್ಯಾ ಮಧ್ಯೆ ಪ್ರೀತಿ ಚಿಗುರುತ್ತಿದೆ. ಇಂತಹ ಸಮಯದಲ್ಲಿ ಮೇಘಾಶ್ರೀ ಎಂಟ್ರಿ ಕೊಟ್ಟಿದ್ದು ದೊಡ್ಡ ಸಂಚಲನ ಮೂಡಿಸಿದೆ. ಇದು ಸೀರಿಯಲ್ ಕಥೆಯನ್ನು ಬೇರೊಂದು ದಿಕ್ಕಿಗೆ ತೆಗೆದುಕೊಂಡು ಹೋಗುವ ಸಾಧ್ಯತೆಯಿದೆ.

ಕುಟುಂಬದವರು ಆದಿಗೆ ಮದುವೆ ಮಾಡಿಸಲು ನಿರ್ಧರಿಸಿದ್ದಾರೆ. ಮದುವೆಗಾಗಿ ಹುಡುಗಿಯನ್ನು ನೋಡಲು ಹೋಗಿದ್ದಾರೆ. ಆ ಹುಡುಗಿಯೇ ಮೇಘಾಶ್ರೀ. ಈ ಮದುವೆಯ ಪ್ರಸ್ತಾಪ ಈಗ ಆದಿಯ ಮುಂದೆ ದೊಡ್ಡ ಸವಾಲಾಗಿದೆ. ಇಷ್ಟವಿಲ್ಲದ ಮದುವೆಯನ್ನು ಆದಿ ತಳ್ಳಿ ಹಾಕುವುದಕ್ಕೆ ಏನೆಲ್ಲ ಪ್ರಯತ್ನ ಮಾಡಬಹುದು. ಮನೆಯವರು ಆದಿ ಒತ್ತಡ ಹಾಕಿದಾಗ ಏನೆಲ್ಲ ಆಗುತ್ತೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಆದಿಯ ಬಾಯಲ್ಲಿ 'ಪಾಸ್ಟ್ ಲೈಫ್' ಸೀಕ್ರೆಟ್
ಆದಿಗೆ ಮೇಘಶ್ರೀ ಜೊತೆ ಮದುವೆ ಆಗೋದು ಇಷ್ಟವಿರಲಿಲ್ಲ. ಆದಿಗೆ ವಿಷಯ ಗೊತ್ತಾಗುತ್ತಿದ್ದಂತೆ ನೇರವಾಗಿ ಹುಡುಗಿ (ಮೇಘಾಶ್ರೀ) ಬಳಿ ಹೋಗಿ ಮಾತನಾಡಿದ್ದಾನೆ. "ನನಗೆ ಈ ಮದುವೆ ಬೇಡ. ನನ್ನ ಜೀವನದಲ್ಲಿ ಈಗಾಗಲೇ ಒಂದು ಕಹಿ ಘಟನೆ ನಡೆದಿದೆ," ಎಂದು ಆದಿ ನೇರವಾಗಿ ಹೇಳಿದ್ದಾನೆ. 'ಪಾಸ್ಟ್ ಲೈಫ್' ರಹಸ್ಯವನ್ನು ಹೊರ ಹಾಕಿದ್ದಾನೆ.
ಮದುವೆ ಮುರಿಯಲು ಆದಿ ಒಂದು ಐಡಿಯಾ ಕೊಟ್ಟಿದ್ದಾನೆ. "ನಾನು ಇಷ್ಟ ಆಗಿಲ್ಲ ಅಂತ ನೀವೇ ಹೇಳಿ," ಎಂದು ಆದಿ ಮೇಘಶ್ರೀ ಬಳಿ ಮನವಿ ಮಾಡಿದ್ದಾನೆ. ಇದರಿಂದ ಇಬ್ಬರ ಲೈಫ್ ಕೂಡ ಉಳಿಯುತ್ತೆ ಎಂಬುದು ಆದಿಯ ಮಾತು. ಆದಿ ಮತ್ತು ಹುಡುಗಿ ಮಾತನಾಡುತ್ತಿದ್ದಾಗ, ಆ ಕಹಿ ಸತ್ಯವನ್ನು ಭಾಗ್ಯಾ ಮತ್ತು ಕುಸುಮಾ ಕೇಳಿಸಿಕೊಂಡಿದ್ದಾರೆ. ಇದರಿಂದ ಇಬ್ಬರಿಗೂ ದೊಡ್ಡ ಶಾಕ್ ಆಗಿದೆ. ಆದಿಯ ಹಿಂದಿನ ಜೀವನದ ಕಥೆ ಈಗ ಭಾಗ್ಯಳಿಗೆ ತಿಳಿದುಬಿಟ್ಟಿದೆ.

ಮುಂದೆ ಏನು?
ನಟಿ ಮೇಘಾಶ್ರೀ ಎಂಟ್ರಿಯಿಂದ ಆದಿ ಮತ್ತು ಭಾಗ್ಯಾಳ ಬಾಂಧವ್ಯಕ್ಕೆ ಕುತ್ತು ಬರುತ್ತಾ? ಭಾಗ್ಯಾ ಮದುವೆ ನಿರಾಕರಿಸುವಂತೆ ಆದಿಗೆ ಸಹಾಯ ಮಾಡುತ್ತಾಳಾ? ಕುಸುಮಾ ಮಗನ ಮದುವೆಯನ್ನು ತಪ್ಪಿಸಲು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ? ಆದಿಯ ಈ ಮನವಿಗೆ ಮೇಘಾಶ್ರೀ ಒಪ್ಪಿಗೆ ನೀಡುತ್ತಾರಾ? ಅಥವಾ ತಮ್ಮ ಮದುವೆ ಮಾತುಕತೆಯನ್ನು ಮುಂದುವರೆಸುತ್ತಾರಾ? ಮುಂದಿನ ಎಪಿಸೋಡ್‌ಗಳಲ್ಲಿ ಗೊತ್ತಾಗಲಿದೆ.
ಒಟ್ಟಿನಲ್ಲಿ, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ, ನೀವು 'ಭಾಗ್ಯಲಕ್ಷ್ಮೀ' ಧಾರಾವಾಹಿಯ ಮುಂದಿನ ಎಪಿಸೋಡ್ಗಳನ್ನು ತಪ್ಪದೇ ನೋಡಬೇಕು. ಕಳೆದ ಕೆಲವು ತಿಂಗಳಿನಿಂದ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್ ಅಂಡ್ ಟರ್ನ್‌ಗಳು ಸಿಗುತ್ತಿವೆ. ವೀಕ್ಷಕರಿಗೆ ಇದು ಮನರಂಜನೆಯನ್ನು ನೀಡುತ್ತಲೇ ಬರುತ್ತಿದೆ. ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ವೀಕ್ಷಕರಿ ಬಯಸಿದಂತೆ ಆಗುತ್ತಾ? ಅನ್ನೋದು ನೋಡಬೇಕಿದೆ.


Click it and Unblock the Notifications











