ಮಗಳೊಂದಿಗಿನ ಫೋಟೊ ಶೇರ್ ಮಾಡಿದ ಮಿಲನಾ ನಾಗರಾಜ್; "ಮಗುವಿನ ದೃಷ್ಟಿ ತೆಗೆಯಿರಿ ಮೇಡಂ" ಎಂದ ಫ್ಯಾನ್ಸ್
ಮಿಲನಾ ನಾಗರಾಜ್ ಇದೀಗ ತಾಯ್ತನದ ಸಂಭ್ರಮದಲ್ಲಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿದ್ದು ನಿಮಗೆಲ್ಲರಿಗೂ ಗೊತ್ತಿದೆ. ಮಗುವಿನ ಫೋಟೋವನ್ನು ಈಗಾಗಲೇ ರಿವೀಲ್ ಮಾಡಿದ್ದು ಮುದ್ದು ಮಗಳಿಗೆ ಪರಿ ಎಂದು ಹೆಸರಿಟ್ಟಿದ್ದಾರೆ. ಇದೀಗ ಮತ್ತೊಮ್ಮೆ ಅಭಿಮಾನಿಗಳ ಜೊತೆ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಹೌದು, ನಟಿ ಮಿಲನಾ ನಾಗರಾಜ್ ಮಗಳ ಜೊತೆಗೆ ಇರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಅಭಿಮಾನಿಗಳಿಗೆ ಬಹಳಷ್ಟು ಖುಷಿಯನ್ನು ನೀಡಿದೆ. ಪುತ್ರಿ ಜನಿಸಿದ ಬಳಿಕ ನಟಿ ಮಿಲನಾ ನಾಗರಾಜ್ ಹೆಚ್ಚಾಗಿ ಮಗಳ ಜೊತೆ ಕಾಲ ಕಳೆಯುತ್ತಿದ್ದಾರೆ.

ಇತ್ತೀಚಿಗೆ ತನ್ನ ಮಗಳ ಜೊತೆ ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಅದು ವೈಟ್ ಅಂಡ್ ವೈಟ್ ಥೀಂನಲ್ಲಿ. ಈಗ ಮತ್ತೆರಡು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಪುಟ್ಟ ಕಂದನ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅದರ ಮುಂದುವರೆದ ಭಾಗದಂತೆ ಇದೀಗ ಮಿಲನಾ ನಾಗರಾಜ್ ತನ್ನ ಮಗಳ ಮುಖವನ್ನು ನೋಡುತ್ತಿರುವ ಫೋಟೋ ಹಾಗೆಯೇ ಪರಿ ಕೆನ್ನೆಗೆ ಮುತ್ತು ಕೊಡುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಫೋಟೋಗಳನ್ನು ನೋಡಿದ ಅಭಿಮಾನಿಗಳು ಬಹಳಷ್ಟು ಖುಷಿ ಪಟ್ಟಿದ್ದಾರೆ.
ಮಗಳೊಂದಿಗೆ ಮಿಲನಾ ನಾಗರಾಜ್ ತೆಗೆಸಿಕೊಂಡ ಫೋಟೋಗಳಿಗೆ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ. "ಮಗುವಿನ ದೃಷ್ಟಿ ತೆಗೆಯಿರಿ ಮೇಡಂ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು "ಸೋ ಕ್ಯೂಟ್, ಮಗು ತುಂಬಾ ಮುದ್ದಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಪರಿ ಎಂಬ ಹೆಸರಿನ ಅರ್ಥ ಹಿಂದಿಯಲ್ಲಿ ಅಪ್ಸರೆ ಎಂದಿದ್ದು, ಮಿಲನಾ ಫ್ಯಾನ್ಸ್ ಎಲ್ಲಾ ನಿಮ್ಮ ಮಗಳು ಅಪ್ಸರೆಯೇ ಎಂದು ಹೇಳುತ್ತಿದ್ದಾರೆ. ಇನ್ನೂ ಮಿಲನಾ ಹಾಗೂ ಕೃಷ್ಣ 2021 ರಲ್ಲಿ ಅದು ಕೂಡ ಫೆಬ್ರವರಿ 14 ರಂದು ಪ್ರೀತಿಸಿ ಮದುವೆಯಾದ ಜೋಡಿ ಇದೀಗ ಮನೆಗೆ ಮಹಾಲಕ್ಷ್ಮೀಯನ್ನೇ ಬರ ಮಾಡಿಕೊಂಡಿದ್ದಾರೆ.
ಮಿಲನಾ ಅವರ ಬೇಬಿ ಬಂಪ್ ಫೋಟೋ ಶೂಟ್‌ಗೆ ಕೂಡ ಸಾಕಷ್ಟು ಕಾಮೆಂಟ್‌ಗಳು ಹರಿದು ಬಂದಿತ್ತು. ಇದೀಗ ಪರಿ ಜೊತೆ ಫೋಟೋಶೂಟ್ ಮಾಡಿಸಿಕೊಂಡಿರುವ ತಮ್ಮ ಫೇವರಿಟ್ ನಟ, ನಟಿಯ ಫೋಟೋಗಳನ್ನು ನೋಡಿ ಎಲ್ಲರೂ ಬಹಳಷ್ಟು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಇವರಿಬ್ಬರೂ ಜೋಡಿಯಾಗಿ ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. 'ಲವ್ ಮಾಕ್ಟೆಲ್', 'ಕೌಸಲ್ಯಾ ಸುಪ್ರಜಾ ರಾಮ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹಾಗೆಯೇ ಮಿಲನಾ ನಾಗರಾಜ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ನಮ್ಮ ದುನಿಯಾ ನಮ್ ಸ್ಟೈಲ್' ನಟಿಸಿದ ಬಳಿಕ 'ಬೃಂದಾವನ' ಸಿನಿಮಾದಲ್ಲಿ ದರ್ಶನ್ ಜೊತೆ ನಟನೆ ಮಾಡಿ ಸಿನಿಪ್ರಿಯರಿಗೆ ಇಷ್ಟ ಆಗಿದ್ದರು. ಮಿಲನಾ ನಾಗರಾಜ್‌ಗೆ ಸಿಕ್ಕಾಪಟ್ಟೆ ಹಿಟ್ ಕೊಟ್ಟ ಸಿನಿಮಾ ಅಂದರೆ 'ಲವ್ ಮಾಕ್ಟಲ್'. ಇತ್ತೀಚೆಗೆ ದಿಯಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ಜೊತೆ 'ಫಾರ್ ರಿಜಿಸ್ಟ್ರೇಷನ್' ಸಿನಿಮಾದಲ್ಲಿ ನಟಿಸಿದ್ದರು.


Click it and Unblock the Notifications











