For Quick Alerts
  ALLOW NOTIFICATIONS  
  For Daily Alerts

  ಅರ್ಧಕ್ಕೆ ಧಾರಾವಾಹಿಯಿಂದ ಹೊರ ನಡೆದ ಮೋಕ್ಷಿತಾ ಪೈ! ಅಭಿಮಾನಿಗಳಲ್ಲಿ ಬೇಸರ

  By ಪ್ರಿಯಾ ದೊರೆ
  |

  ನಟಿ ಮೋಕ್ಷಿತಾ ಪೈ ಪಾರು ಧಾರಾವಾಹಿ ಮೂಲಕ ಕರುನಾಡಿನ ಮನೆ ಮಗಳಾಗಿದ್ದಾಳೆ. ಸೀರಿಯಲ್ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ಮೋಕ್ಷಿತಾ ಇತ್ತೀಚೆಗಷ್ಟೇ ತಮಿಳು ಕಿರುತೆರೆಗೂ ಎಂಟ್ರಿ ಕೊಟ್ಟಿದ್ದರು. ಆದರೆ, ಈಗ ಅಭಿಮಾನಿಗಳಿಗೆ ಬೇಸರದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

  ಈಗಾಗಲೇ ಮೋಕ್ಷಿತಾ ಅವರು ನಟಿಸಿದ ಚಿತ್ರವೊಂದು ರಿಲೀಸ್ ಗೆ ಸಜ್ಜಾಗಿದೆ. ಇನ್ನೂ ಒಂದು ಚಿತ್ರದಲ್ಲಿ ನಟಿಸಲಿದ್ದು, ಅದರ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬಿದ್ದಿಲ್ಲ. ಇದರ ಜೊತೆಗೆ ಪರಭಾಷೆಯಲ್ಲೂ ಅಭಿಮಾನಿಗಳನ್ನು ಗಳಿಸಿದ್ದರು.

  ಕಳೆದ ಎರಡು ವರ್ಷಗಳ ಹಿಂದೆ ಪಾರು ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮೋಕ್ಷಿತಾ ಪೈ ಅವರಿಗೆ ಈಗ ಸಿನಿಮಾ ಹಾಗೂ ಇತರೆ ಸೀರಿಯಲ್ ಗಳಲ್ಲಿ ನಟಿಸುವ ಅವಕಾಶಗಳು ಒದಗಿ ಬರುತ್ತಿವೆ. ಆದರೆ, ಕಥೆ, ಪಾತ್ರಗಳ ಬಗ್ಗೆ ಮೋಕ್ಷಿತಾ ಪೈ ಅವರು ಬಹಳ ಕಾಳಜಿ ವಹಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

  ಹಿಟ್ ಆದ ಧಾರಾವಾಹಿ

  ಹಿಟ್ ಆದ ಧಾರಾವಾಹಿ

  ಮೋಕ್ಷಿತಾ ಪೈ ಅವರು ಬಣ್ಣದ ಲೋಕಕ್ಕೆ ಆಸೆ ಪಟ್ಟೇನು ಬಂದಿರಲಿಲ್ಲ. ಅವಕಾಶ ತಾನಾಗಿಯೇ ಮೋಕ್ಷಿತಾ ಅವರ ಮನೆ ಬಾಗಿಲಿಗೆ ಬಂದಿತ್ತು. ಅವಕಾಶವನ್ನು ಅಲ್ಲಗಳೆಯದೇ ಒಪ್ಪಿಕೊಂಡು ಈಗ ಪಾರು ಆಗಿ ಮಿಂಚುತ್ತಿದ್ದಾರೆ. ಮೋಕ್ಷಿತಾ ಪೈ ನಟಿಸಿದ ಮೊದಲ ಧಾರಾವಾಹಿಯೇ ಪಾರು. ಈ ಧಾರಾವಾಹಿ ಹಿಟ್ ಆಗಿದ್ದು, ಪಾರು ಎಂದೇ ಚಿರಪರಿಚಿತರಾಗಿದ್ದಾರೆ. ವಿನಯಾ ಪ್ರಸಾದ್, ಎಸ್ ನಾರಾಯಣ್ ಸೇರಿದಂತೆ ಈ ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವಿದೆ. ಮೋಕ್ಷಿತಾ ಪೈ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮನೆ ಮಗಳಾಗಿದ್ದಾರೆ.

  ಎರಡು ಚಿತ್ರದಲ್ಲಿ ನಟನೆ

  ಎರಡು ಚಿತ್ರದಲ್ಲಿ ನಟನೆ

  ಕಿರುತೆರೆಯಲ್ಲಿ ಸಿಕ್ಕ ಬೆಂಬಲದಿಂದಲೇ ಪಾರು ಈಗ ಸ್ಯಾಂಡಲ್ ವುಡ್ ಜೊತೆಗೆ ತಮಿಳು ಕಿರುತೆರೆಗೂ ಪಾದಾರ್ಪಣೆ ಮಾಡಿದ್ದಾರೆ. ಈಗಾಗಲೇ ಮೋಕ್ಷಿತಾ ಪೈ ಅವರು ನಿರ್ಭಯಾ 2 ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದರ ಶೂಟಿಂಗ್ ಮುಗಿದಿದ್ದು, ರಿಲೀಸ್ ಗೆ ಸಜ್ಜಾಗಿದೆ. ಇನ್ನು ಅದಾಗಲೇ ವಿಜಯ್ ದುನಿಯಾ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಮೋಕ್ಷಿತಾ ಪೈ ಅವರು ನಟಿಸಲಿದ್ದಾರೆ ಎಂಬ ಮಾಹಿತಿ ಇದೆ. ಇದರ ಜೊತೆಗೆ ತಮಿಳಿನಲ್ಲೂ ತಮ್ಮ ಛಾಪು ಮೂಡಿಸಿದ್ದರು.

  ಶಾಕಿಂಗ್ ಸುದ್ದಿ ಕೊಟ್ಟ ಮೋಕ್ಷಿತಾ

  ಶಾಕಿಂಗ್ ಸುದ್ದಿ ಕೊಟ್ಟ ಮೋಕ್ಷಿತಾ

  ಕನ್ನಡದಲ್ಲಿ ಮೂಡಿ ಬರುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈಗಾಗಲೇ ಸೂಪರ್ ಡೂಪರ್ ಆಗಿ ಹಿಟ್ ಆಗಿದೆ. ಈ ಧಾರಾವಾಹಿ ತೆಲುಗು, ತಮಿಳು, ಮಲಯಾಳಂ ಹಾಗೂ ಬಂಗಾಲಿಯಲ್ಲಿ ರಿಮೇಕ್ ಆಗಿದೆ. ತೆಲುಗಿನಲ್ಲಿ ರಾಧಮ್ಮ ಕೂತುರು, ತಮಿಳಿನಲ್ಲಿ ಮೀನಾಕ್ಷಿ ಪೊಣ್ಣುಂಗ ಎಂದು ಈ ಧಾರಾವಾಹಿ ಕಳೆದ ಎರಡು ತಿಂಗಳ ಹಿಂದೆ ಪ್ರಸಾರ ಆರಂಭಿಸಿತ್ತು. ಮೋಕ್ಷಿತಾ ಪೈ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿ ತಮಿಳಿನ ಝೀ ವಾಹಿನಿಯಲ್ಲಿ ಮೂಡಿ ಬರುತ್ತಿದೆ. ಇದರಲ್ಲಿ ಶಕ್ತಿ ಎಂಬ ಪಾತ್ರವನ್ನು ನಿರ್ವಹಿಸಿದ್ದರು. ತಮಿಳಿನಲ್ಲೂ ಅಭಿಮಾನಿಗಳನ್ನು ಗಳಿಸಿದ್ದ ಮೋಕ್ಷಿತಾ ಪೈ ಈಗ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ.

  ಮೋಕ್ಷಿತಾ ಕಠಿಣ ನಿರ್ಧಾರಕ್ಕೆ ಕಾರಣವೇಣು..?

  ಮೋಕ್ಷಿತಾ ಕಠಿಣ ನಿರ್ಧಾರಕ್ಕೆ ಕಾರಣವೇಣು..?

  ಪಾರು ಧಾರಾವಾಹಿಯಲ್ಲಿ ಸಾಫ್ಟ್ ಆಗಿ ಕಾಣಿಸಿಕೊಂಡಿದ್ದ ಮೋಕ್ಷಿತಾ ಪೈ ಅವರು, ತಮಿಳಿನಲ್ಲಿ ರಗಡ್ ಲುಕ್ ನಲ್ಲಿ ಮಿಂಚಿದ್ದರು. ಮೀನಾಕ್ಷಿ ಪೊಣ್ಣುಂಗ ಧಾರಾವಾಹಿಯಲ್ಲಿ ಎರಡನೇ ಮಗಳ ಪಾತ್ರದಲ್ಲಿ ನಟಿಸಿ, ಬಜ್ಜಾರಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಈ ಮೂಲಕ ತಮಿಳಿಗರ ಪ್ರೀತಿಯ ಮಗಳಾಗಿದ್ದರು. ಆದರೆ, ಮೋಕ್ಷಿತಾ ಅವರಿಗೆ ಕನ್ನಡ ಧಾರಾವಾಹಿ, ಸಿನಿಮಾ ಹಾಗೂ ತಮಿಳು ಧಾರಾವಾಹಿ ಮೂರಕ್ಕೂ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವರು ಮೀನಾಕ್ಷಿ ಪೊಣ್ಣುಂಗ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಸ್ವತಃ ಅವರ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

  English summary
  actress mokshitha pai acting in tamil serial meenakshi ponnunga. And she left this serial in middle.
  Wednesday, December 7, 2022, 17:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X