BBK 11 Grand Finale ; ಕೊನೆ ಹಂತದಲ್ಲಿ ಕೈ ತಪ್ಪಿದ ಟ್ರೋಫಿ, ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೋಕ್ಷಿತಾ !
ಬಿಗ್ ಬಾಸ್ ಮನೆಗೆ ಹೋಗಬೇಕು ಬಿಗ್ ಬಾಸ್ ಕಪ್ ಗೆಲ್ಲಬೇಕು ಎನ್ನುವುದು ಕನ್ನಡ ಚಿತ್ರರಂಗದಲ್ಲಿ ಧಾರಾವಾಹಿ ಲೋಕದಲ್ಲಿ ಅನೇಕರ ಕನಸು. ಈ ಕನಸನ್ನು ಇವತ್ತು ನನಸು ಮಾಡಿಕೊಳ್ಳುವ ಅವಕಾಶ ಐದು ಜನರಿಗಿತ್ತು. ಆ ಪೈಕಿ ಮೋಕ್ಷಿತಾ ಪೈ ಕೂಡ ಒಬ್ಬರು. ಆದರೆ.. ದುರಾದೃಷ್ಟವಶಾತ್ ಮೋಕ್ಷಿತಾ ಅವಕಾಶವನ್ನು ಕಳೆದುಕೊಂಡಿದ್ದಾರೆ. ಮನೆಯಿಂದ ಹೊರ ಬಂದಿದ್ದಾರೆ.
ಹೌದು, ತಮ್ಮ ಮುಗ್ದ ನಗು ಮತ್ತು ನಡೆ ನುಡಿಯಿಂದ ಕರುನಾಡಿನ ಮನ ಗೆದ್ದ ಮೋಕ್ಷಿತಾ ಬಿಗ್ ಬಾಸ್ ಮನೆಯ ಕೊನೆಯ ಹಂತದವರೆಗೆ ಹೋಗಿ ಎಡವಿದ್ದಾರೆ. ಮನೆಯಲ್ಲಿ ಇಲ್ಲಿಯವರೆಗೆ ಇದ್ದು ಒಮ್ಮೆಯೂ ಕ್ಯಾಪ್ಟನ್ ಆಗದ ಮೋಕ್ಷಿತಾ ಕಪ್ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ. ಭವ್ಯಾ ಗೌಡ ಅವರ ನಂತರ ಮನೆಯಿಂದ ಹೊರ ಬಂದಿದ್ದಾರೆ.

ಹಾಗೇ ನೋಡಿದರೆ ಭವ್ಯಾ ಗೌಡ ಹೊರ ಹೋದ ನಂತರ ಮೋಕ್ಷಿತಾ ಅವರೇ ಈ ಬಾರಿಯ್ ಬಿಗ್ ಬಾಸ್ ವಿನ್ನರ್ ಎಂದು ಎಲ್ಲರು ಅಂದುಕೊಂಡಿದ್ದರು. ಯಾಕೆಂದರೆ ಈ ಸೀಸನ್ ಹೊರತು ಪಡಿಸಿದರೆ ಬಿಗ್ ಬಾಸ್ ಇಲ್ಲಿಯವರೆಗೆ ಕನ್ನಡದಲ್ಲಿ ಹತ್ತು ಬಾರಿ ಪ್ರದರ್ಶನಗೊಂಡಿದೆ. ಇಲ್ಲಿಯವರೆಗೆ ಹಲವಾರು ಸ್ಫರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದಿದ್ದಾರೆ. ಆ ಪೈಕಿ ಶ್ರುತಿ ಅವರನ್ನು ಹೊರತು ಪಡಿಸಿದರೆ ಇಲ್ಲಿಯವರೆಗೆ ಬೇರೆ ಯಾವ ಮಹಿಳೆಗೆ ಕೂಡ ಬಿಗ್ ಬಾಸ್ ಒಲಿದಿಲ್ಲ. ಈ ಬಾರಿ ಕೂಡ ಒಲಿಯಲಿಲ್ಲ. ಬಿಗ್ ಬಾಸ್‌ನ ಈ ನಿರ್ಧಾರದಿಂದ ಸಹಜವಾಗಿ ಅನೇಕರಿಗೆ ಬೇಸರವಾಗಿದೆ.


Click it and Unblock the Notifications











