'ಪಾರು' ಧಾರಾವಾಹಿಯಲ್ಲಿ ಮೋಕ್ಷಿತಾ ಧರಿಸುತ್ತಿದ್ದ ಬ್ಲೌಸ್‌ಗಳನ್ನು ಸಿದ್ಧಪಡಿಸಿದ್ಯಾರು?

By ಎಸ್ ಸುಮಂತ್

ಸುಮಾರು ಜನರಿಗೆ 'ಪಾರು' ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ಉಡುತ್ತಿದ್ದ ಸೀರೆ ಮೇಲೆ ಹಾಗೂ ಆಕೆ ಧರಿಸುತಿದ್ದ ಬ್ಲೌಸ್ ಮೇಲೆ ಕಣ್ಣಿತ್ತು. ಬ್ಲೌಸ್ ಕೂಡ ಸಿಂಪಲ್ ಆಗಿದ್ದರು, ಆಕರ್ಷಣೀಯವಾಗಿದ್ದವು. ಹೀಗಾಗಿ ಅವನ್ನೆಲ್ಲ ಪಾರು ಅಲಿಯಾಸ್ ಮೋಕ್ಷಿತಾ ಎಲ್ಲಿ ಸ್ಟಿಚ್ ಮಾಡಿಸುತ್ತಾರೆ ಎಂಬ ಪ್ರಶ್ನೆ ಇದ್ದವು. ಅಥವಾ ರೆಡಿಮೇಡ್ ಏನಾದ್ರೂ ಹಾಕುತ್ತಾರಾ? ಎಂಬ ಅನುಮಾನವೂ ಇತ್ತು.

ಅಷ್ಟೊಂದು ಬ್ಲೌಸ್ ಸ್ಟಿಚ್ ಮಾಡಿಸುವುದು ಅಂದ್ರೆ ಸುಲಭದ ಮಾತಲ್ಲ. ಇದೀಗ ಮೋಕ್ಷಿತಾ ಆ ಎಲ್ಲಾ ಬ್ಲೌಸ್ ಸ್ಟಿಚ್ ಮಾಡಿದ್ದು ಯಾರು ಎಂಬುದನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಹಾಗೇ ಮೋಕ್ಷಿತಾ ಬಳಿ ರಾಶಿ ರಾಶಿ ಸೀರೆಗಳು ಇದಾವೆ. ಅದಕ್ಕೆ ತಕ್ಕ ಬ್ಲೌಸ್ಗಳು ಕೂಡ ಇದಾವೆ.

Actress Mokshitha Pai introduced her blouse designer for Paaru serial

ಇದೀಗ ಮೋಕ್ಷಿತಾ ಆ ಬ್ಲೌಸ್‌ಗಳನ್ನು ತಮ್ಮ ಅಭಿಮಾನಿಗಳಿಗೆ, ಸೀರೆ ಪ್ರಿಯರಿಗೆ ಪ್ರದರ್ಶಿಸಿದ್ದಾರೆ. ಹಾಗೇ ಬ್ಲೌಸ್ ತಯಾರು ಮಾಡಿದ ಭಾರ್ಗವಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಮೋಕ್ಷಿತಾ ಅದನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿಯೇ ಹಾಕಿದ್ದಾರೆ.

ಮೈಸೂರ್ ಸಿಲ್ಕ್ ಸೀರೆ ಹಾಕಿದ್ದ ಪಾರು

ಸೀರಿಯಲ್ ಅಂದ್ರೆ ಅದು ಪ್ರತಿದಿನ ಎಪಿಸೋಡ್. ಸೀರೆ ಉಡುವವರಿಗೆ ಪ್ರತಿ ಎಪಿಸೋಡಿಗೂ ಹೊಸ ಹೊಸ ಸೀರೆ ತರಬೇಕೆಂಬ ಚಿಂತೆ. ಕ್ಯಾಮೆರಾ ಚೆನ್ನಾಗಿ ಕಾಣುವ ಸೀರೆಗಳನ್ನೇ ಹೆಚ್ಚು ಹಾಕುತ್ತಾರೆ. ಆದರೆ ಪಾರು ಆರಂಭದಲ್ಲಿ ಸಿಂಪಲ್ ಸೀರೆಗಳನ್ನೇ ಹಾಕುತ್ತಿದ್ದರು. ಆಮೇಲೆ ಅಖಿಲಾಂಡೇಶ್ವರಿ ಸೊಸೆಯಾದ ಮೇಲೆ ಕಾಸ್ಟ್ಲೀ ಸೀರೆಗಳ‌ನ್ನೇ ಹಾಕಬೇಕಾಗಿದ್ದ ಕಾರಣ, ಮೈಸೂರು ಸಿಲ್ಕ್ ಸೀರೆಯನ್ನೇ ಹಾಕಿದ್ದಾರೆ. ಈ ಸೀರೆಗೆ ಬ್ಲೌಸ್‌ಗಳನ್ನೆಲ್ಲಾ ರತಮ್ ಡಿಸೈನರ್ ಸ್ಟುಡಿಯೋದ ಭಾರ್ಗವಿ ಅವರ ಬೂಟಿಕ್‌ನಲ್ಲಿಯೇ ಮೋಕ್ಷಿತಾ ಅವರು ರೆಡಿ ಮಾಡಿಸಿರುವುದು.

ಬ್ಲೌಸ್ ಡಿಸೈನ್ ಮಾಡಿದ್ದೇಗೆ..?

ಮೈಸೂರು ಸಿಲ್ಕ್ ಪಿಂಕ್ ಕಲರ್ ಬ್ಲೌಸ್ ಅನ್ನ ಭಾರ್ಗವಿ ಅವರು ಕಂಪ್ಲೀಟ್ ಥ್ರೆಡ್‌ನಲ್ಲಿಯೇ ಮಾಡಿದ್ದಾರೆ. ಇನ್ನೊಂದು ಬ್ಲೂ ಕಲರ್ ಬ್ಲೌಸ್ ಅನ್ನ ಕ್ಲಿಪ್ ಸ್ಟೋನ್ ವರ್ಕ್ ಅಂತಾನೇ ಕರೆಯುತ್ತಾರೆ. ಮಗ್ಗಮಲ್ ಕ್ಯಾಟಗರಿ ಮೇಲೆ ವರ್ಕ್ ಮಾಡಿದ್ದಾರೆ.

Actress Mokshitha Pai introduced her blouse designer for Paaru serial

ತಾಯಿ ಕೂಡ ಇಲ್ಲೇ ಸ್ಟಿಚ್ ಮಾಡಿಸುವುದು

ಭಾರ್ಗವಿ ಅವರ ಬಳಿ ಪಾರು ಮಾತ್ರ ಅಲ್ಲ ಅವರ ತಾಯಿ ಕೂಡ ಬ್ಲೌಸ್‌ಗಳನ್ನ ಸ್ಟಿಚ್ ಮಾಡಿಸುತ್ತಾರೆ. ಅದರಲ್ಲೂ ಮರೂನ್ ಕಲರ್ ಬ್ಲೌಸ್ ಮಾಡಿಸಿದ್ದಾರೆ. ಅವರ ತಾಯಿಗೂ ಸಿಂಪಲ್ ಆಗಿ, ಚೆನ್ನಾಗಿ ಕಾಣುವಂತ ಬ್ಲೌಸ್‌ಗಳನ್ನಷ್ಟೇ ಹಾಕುವುದು. ಇನ್ನು ಪಾರು ತನ್ನ ಮದುವೆ ಸಮಯದಲ್ಲಿ ಹಾಕಿದ್ದಂತ ಬ್ಲೂ ಕಲರ್ ಬ್ಲೌಸ್‌ಗೆ ಪರ್ಲ್ ಬಳಕೆ ಮಾಡಿದ್ದಾರೆ.

ಬಿಗ್ ಬಾಸ್‌ಗೆ ಹೋಗ್ತಾರಾ ಮೋಕ್ಷಿತಾ?

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 ಈಗಾಗಲೇ ತಯಾರಿ ನಡೆಯುತ್ತಿದೆ. ಸಂಭಾವ್ಯ ಪಟ್ಟಿ ಕೂಡ ವೈರಲ್ ಆಗ್ತಾ ಇದೆ. ಪಾರು ಖ್ಯಾತಿಯ ಮೋಕ್ಷಿತಾ ಪೈ ಕೂಡ ಹೋಗ್ತಾ ಇದಾರೆ ಎಂಬ ಸುದ್ದಿ ಇದೆ. ಹೀಗಾಗಿ ಆ ವಿಡಿಯೋದಲ್ಲಿಯೇ ಅಭಿಮಾನಿಯೊಬ್ಬರು ಕಮೆಂಟ್ ಹಾಕಿದ್ದಾರೆ. ಈ ಬಾರಿಯ ಬಿಗ್ ಬಾಸ್‌ಗೆ ಹೋಗ್ತೀರಾ ಅಂತ. ಆದರೆ ಅದಕ್ಕೆ ಯಾವುದೇ ರಿಯಾಕ್ಷನ್ ಬಂದಿಲ್ಲ. ಇನ್ನು ಬ್ಲೌಸ್‌ಗಳ ವಿಡಿಯೋ ಮಾಡಿದ್ದಕ್ಕೆ ಮಹಿಳಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

More from Filmibeat

English summary
Zee kannada serial Paaru Written Update on blouse secret video. Here is the details about Mokshitha made a video about her blouse design;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X