ಹೊಸ ಸಾಹಸಕ್ಕೆ ಕೈ ಹಾಕಿದ ಪಾರು ಅಲಿಯಾಸ್ ನಟಿ ಮೋಕ್ಷಿತಾ ಪೈ ...!

By ಪ್ರಿಯಾ ದೊರೆ

ಮಾರ್ಚ್ ಹದಿನಾರನೇ ತಾರೀಖು ಪಾರು ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರವಾದ ಬೆನ್ನಲ್ಲಿ, ಪಾರು ಧಾರಾವಾಹಿ ಖ್ಯಾತಿಯ ನಟಿ ಮೋಕ್ಷಿತಾ ಪೈ ಅವರು ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಆದಷ್ಟು ಬೇಗ ಮೋಕ್ಷಿತಾ ಅವರು ಮತ್ತೊಂದು ಸೀರಿಯಲ್ ಮಾಡಲಿ ಎಂದು ಬಯಸಿದ್ದ ಅಭಿಮಾನಿಗಳಿಗೆ ಹೊಸ ನ್ಯೂಸ್ ಒಂದನ್ನು ಮೋಕ್ಷಿತಾ ಪೈ ನೀಡಿದ್ದಾರೆ.

ಹೊಸ ಯೂಟ್ಯೂಬ್ ಚಾನೆಲ್ ತೆರೆದ ನಟಿ

ಪಾರು ಧಾರಾವಾಹಿ ಬಳಿಕ ಈಗ ನಟಿ ಮೋಕ್ಷಿತಾ ಪೈ ಅವರು ನೂತನ ಸಾಹಸಕ್ಕೆ ಮುಂದಾಗಿದ್ದು, ತಮ್ಮ ಹಿತೈಶಿಗಳ ಬೇಡಿಕೆ ಮೇರೆಗೆ ಹೊಸ ಯೂಟ್ಯೂಬ್ ಚಾನೆಲ್ ನ ಪ್ರಾರಂಭಿಸಿದ್ದಾರೆ. ಈ ಬಗ್ಗೆ ನಟಿ ಮೋಕ್ಷಿತಾ ಪೈ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನ ಸ್ಟೋರಿಯಲ್ಲಿ ಲಿಂಕ್ ಶೇರ್ ಮಾಡಿಕೊಂಡಿದ್ದಾರೆ.

Actress Mokshitha Pai new youtube channel

ತಮ್ಮದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನ ತೆರೆದಿರುವ ಮೋಕ್ಷಿತಾ, ಈಗಾಗಲೇ 440ಕ್ಕೂ ಅಧಿಕ ಸಬ್ಸ್ ಕ್ರೈಬರ್ಸ್ ಗಳನ್ನ ಹೊಂದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಕೇವಲ ಒಂದು ವೀಡಿಯೋವನ್ನು ಅಪ್ ಲೋಡ್ ಮಾಡಿರುವ ಮೋಕ್ಷಿತಾ ಗೆ 200ಕ್ಕೂ ಅಧಿಕ ಜನ ವಿಡಿಯೋ ಲೈಕ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. 3000ಕ್ಕೂ ಅಧಿಕ ಜನ ಈ ವಿಡಿಯೋವನ್ನ ನೋಡಿದ್ದಾರೆ. ಮೋಕ್ಷಿತಾ ಅವರ ಯೂಟ್ಯೂಬ್ ಚಾನೆಲ್ ನ ಪ್ರೊಮೋ ಇದಾಗಿದ್ದು, 3 ನಿಮಿಷಗಳ ಕಾಲ ಇದೆ. ವೀಡಿಯೋ ಅಪ್ ಲೋಡ್ ಮಾಡಿದ ಕೇವಲ ಐದು ದಿನದಲ್ಲಿ ಇಷ್ಟೊಂದು ವ್ಯೂವ್ಸ್ ಹಾಗೂ ಲೈಕ್ಸ್ ಗಳನ್ನು ಪಡೆದಿದ್ದಾರೆ.

ಖುಷಿಯಾದ ಪಾರು ಅಭಿಮಾನಿಗಳು

ಪಾರು ಧಾರಾವಾಹಿ ಮುಗಿದ ಬಳಿಕ ಮೋಕ್ಷಿತಾ ಅವರು ಕಿರುತೆರೆಯಿಂದ ದೂರ ಉಳಿದರೆ ಅವರ ಬಗ್ಗೆ ಮಾಹಿತಿ ಪಡೆಯುವುದು ಹೇಗೆ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಆದರೆ, ಈಗ ಯೂಟ್ಯೂಬ್ ಚಾನೆಲ್ ಅನನು ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Actress Mokshitha Pai new youtube channel

ಪಾರು ಸೀರಿಯಲ್ ಮುಗಿದ ಬಳಿಕ ಅಭಿಮಾನಿಗಳು, ನಿತ್ಯ ಮೋಕ್ಷಿತಾ ಅವರ ಸೋಶಿಯಲ್ ಪೇಜ್ ಹಾಗೂ ಸ್ಟೋರಿಯನ್ನು ನೋಡುತ್ತಾ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.ಇನ್ನೂ ಮೋಕ್ಷಿತಾ ತಮ್ಮ ಯುಟ್ಯೂಬ್ ನಲ್ಲಿ ಮೂರು ಶಾರ್ಟ್ಸ್ ಗಳನ್ನು ಕೂಡ ಅಪ್ ಲೋಡ್ ಮಾಡಿದ್ದಾರೆ.

ಇನ್ನು ಮುಂದೆ ಮೋಕ್ಷಿತಾ ಅವರ ದಿನಚರಿ, ಅವರ ಶಾಪಿಂಗ್, ಶೂಟಿಂಗ್, ಬ್ಯೂಟಿ ಕೇರ್, ಫಿಟ್ನೆಸ್ ಎಲ್ಲಾ ವಿಚಾರದ ಮಾಹಿತಿಯನ್ನು ಯೂಟ್ಯೂಬ್ ಮೂಲಕವೇ ಪಡೆಯಬಹುದು ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೆ, ಮೊಕ್ಷಿತಾ ಅವರು ಯಾವಾಗ ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

Actress Mokshitha Pai new youtube channel

ಪ್ರವಾಸ ಪ್ರಿಯೆ ಮೋಕ್ಷಿತಾ ಪೈ

ಇನ್ನು ಪಾರು ಧಾರಾವಾಹಿ ಮುಗಿದ ಬಳಿಕ ಮೋಕ್ಷಿತಾ ಅವರು ತಮ್ಮ ಕಸಿನ್ಸ್ ಜೊತೆಗೆ ಪ್ರವಾಸ ಕೈಗೊಂಡಿದ್ದಾರೆ. ಇತ್ತೀಚೆಗೆ ಮೋಕ್ಷಿತಾ ಅವರು ಹೆಚ್ಚು ಹೆಚ್ಚು ಪ್ರವಾಸಗಳನ್ನು ಮಾಡುತ್ತಿದ್ದಾರೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಈಶಾ ಫೌಂಡೇಶನ್ ಗೆ ಭೇಟಿ ಕೊಟ್ಟಿದ್ದರು. ಇದಕ್ಕೂ ಮುನ್ನ ದುಬೈಗೆ ಹೋಗಿ ಎಂಜಾಯ್ ಮಾಡಿದ್ದರು. ಅಲ್ಲದೇ, ಕುಕ್ಕೆ ಸುಬ್ರಮಣ್ಯ, ಮೈಸೂರು, ಹಿಮಾಚಲ ಪ್ರದೇಶ, ವಯನಾಡು ಹೀಗೆ ಪ್ರವಾಸ ಮಾಡುತ್ತಿರುತ್ತಾರೆ. ಇದೀಗ ಕಸಿನ್ಸ್ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ.

ಕಥೆ, ಪಾತ್ರದ ಬಗ್ಗೆ ಹೆಚ್ಚು ಕಾಳಜಿ

ಮುಗ್ಧ ಮನಸ್ಸಿನ ಮೋಕ್ಷಿತಾ ಅವರು ಕುಟುಂಬಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಪಾರು ಧಾರಾವಾಹಿ ಹೊರತು ಪಡಿಸಿ, ಮೋಕ್ಷಿತಾ ಅವರಿಗೆ ಇತರೆ ಸೀರಿಯಲ್ ಗಳಲ್ಲಿ ನಟಿಸುವ ಅವಕಾಶಗಳು ಒದಗಿ ಬರುತ್ತಿವೆ. ಆದರೆ, ಕಥೆ, ಪಾತ್ರಗಳ ಬಗ್ಗೆ ಮೋಕ್ಷಿತಾ ಪೈ ಅವರು ಬಹಳ ಕಾಳಜಿ ವಹಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತಮಿಳಿನ ಧಾರಾವಾಹಿಯೊಂದರಲ್ಲಿ ಕೆಲ ಸಮಯ ನಟಿಸಿ ಅರ್ಧದಲ್ಲೇ ಹೊರ ನಡೆದಿದ್ದರು ಮೋಕ್ಷಿತಾ.

More from Filmibeat

English summary
actress mokshitha pai started new youtube channel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X