Mokshitha Pai: ಧರೆಗಿಳಿದ ರಂಭೆಯಂತೆ ಕಂಗೊಳಿಸಿದ ಹಳ್ಳಿ ಹುಡುಗಿ ಪಾರು
ತಮ್ಮ ಸೌಮ್ಯ ಸ್ವಭಾವದಿಂದಲೇ ಜನರನ್ನು ಸೆಳೆದಿರುವ 'ಪಾರು', ಧಾರಾವಾಹಿಯಲ್ಲಿ ನಟಿಸುವಂತೆಯೇ ನಿಜ ಬದುಕಿನಲ್ಲೂ ನಟಿ ಮೋಕ್ಷಿತಾ ಪೈ ಕರುಣಾಮಯಿ ಎಂಬುದು ಎಲ್ಲರಿಗೂ ಗೊತ್ತಿದೆ.
ಜೀವನದಲ್ಲಿ ಏಳು ಬೀಳುಗಳನ್ನು ನೋಡಿರುವ ನಟಿ ಮೋಕ್ಷಿತಾ ಪೈ ಅವರು 'ಪಾರು' ಧಾರಾವಾಹಿ ಮೂಲಕವೇ ಜನಪ್ರಿಯತೆಯನ್ನು ಪಡೆದಿದ್ದಾರೆ. ನಟಿ ಮೋಕ್ಷಿತಾ ಪೈ 'ಪಾರು' ಧಾರಾವಾಹಿ ಮೂಲಕ ಕರುನಾಡಿನ ಮನೆ ಮಗಳಾಗಿದ್ದಾಳೆ.

ಸೀರಿಯಲ್ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿರುವ ಮೋಕ್ಷಿತಾ ಇತ್ತೀಚೆಗಷ್ಟೇ ಪರಭಾಷೆಯ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದರು. ಈ ಮೂಲಕ ಪರಭಾಷೆಯಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ.
ಹಳ್ಳಿ ಹುಡುಗಿ ಪಾರು
ಕಳೆದ ಮೂರು ವರ್ಷಗಳಿಂದ 'ಪಾರು' ಧಾರಾವಾಹಿಯಲ್ಲಿ ನಟಿ ಮೋಕ್ಷಿತಾ ಪೈ ಅವರು ನಟಿಸುತ್ತಿದ್ದಾರೆ. ಮೋಕ್ಷಿತಾ ಪೈ ಬಣ್ಣದ ಲೋಕಕ್ಕೆ ಆಸೆ ಪಟ್ಟೇನು ಬಂದಿರಲಿಲ್ಲ. ಅವಕಾಶ ತಾನಾಗಿಯೇ ಮೋಕ್ಷಿತಾ ಮನೆ ಬಾಗಿಲಿಗೆ ಬಂದಿತ್ತು. ಅವಕಾಶ ಬಿಡದೇ ಒಪ್ಪಿಕೊಂಡು ಈಗ 'ಪಾರು' ಆಗಿ ಮಿಂಚುತ್ತಿದ್ದಾರೆ. ಈ ಧಾರಾವಾಹಿ ಹಿಟ್ ಆಗಿದ್ದು, 'ಪಾರು' ಎಂದೇ ಚಿರಪರಿಚಿತರಾಗಿದ್ದಾರೆ. ವಿನಯಾ ಪ್ರಸಾದ್, ಎಸ್. ನಾರಾಯಣ್ ಸೇರಿದಂತೆ ಈ ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವಿದೆ. ಮೋಕ್ಷಿತಾ ಪೈ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ
ಕಿರುತೆರೆಯಲ್ಲಿ ಸಿಕ್ಕ ಬೆಂಬಲದಿಂದಲೇ ಮೋಕ್ಷಿತಾ ಕನ್ನಡ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಸಿನಿಮಾ ಹಾಗೂ ಇತರೆ ಸೀರಿಯಲ್‌ಗಳಲ್ಲಿ ನಟಿಸುವ ಅವಕಾಶಗಳು ಒದಗಿ ಬರುತ್ತಿವೆ. ಆದರೆ, ಕಥೆ, ಪಾತ್ರಗಳ ಬಗ್ಗೆ ಮೋಕ್ಷಿತಾ ಪೈ ಅವರು ಬಹಳ ಕಾಳಜಿ ವಹಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಮೋಕ್ಷಿತಾ ಪೈ ಅವರು 'ನಿರ್ಭಯಾ- 2' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಮೋಕ್ಷಿತಾ ಪೈ ಅವರು ನಟಿಸಲಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಇನ್ನಷ್ಟು ವಿಚಾರಗಳು ತಿಳಿದು ಬರಬೇಕಿದೆ.
ಮಾಡ್ರನ್ ಉಡುಗೆಯಲ್ಲೂ ಸೂಪರ್
ಇನ್ನು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ತಮಿಳಿನಲ್ಲಿ ರೀಮೇಕ್ ಆಗುತ್ತಿದೆ. ಇದರಲ್ಲಿ ನಟಿ ಮೋಕ್ಷಿತಾ ಪೈ ಅವರು ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ, ಈ ಧಾರಾವಾಹಿಯಿಂದ ಅರ್ಧಕ್ಕೆ ಹೊರ ನಡೆದಿದ್ದರು. ನನಗೆ ಕನ್ನಡ ಕಿರುತೆರೆಯೇ ಸಾಕು. ಪಾರು ಆಗಿಯೇ ಇರುತ್ತೇನೆ ಎಂದು ಹೇಳಿದ್ದರು. ಮೋಕ್ಷಿತಾ ಪೈ, ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. 'ಪಾರು' ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯಂತೆ ಕಾಣುವ ಇವರು, ಮಾಡ್ರನ್ ಉಡುಗೆಯಲ್ಲೂ ಮುದ್ದಾಗಿ ಕಾಣುತ್ತಾರೆ.

ಬೇಬಿ ರಂಬೆಯಾದ ಪಾರು
ಮೋಕ್ಷಿತಾ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಆಗಾಗ ನಟಿ ಮಾನಸ ಜೋಶಿ ಅವರೊಂದಿಗೆ ರೀಲ್ಸ್ ಮಾಡುತ್ತಿರುತ್ತಾರೆ. ಸೀರೆಯಲ್ಲಿ ಅಂದವಾಗಿ ಕಾಣುವ ಮೋಕ್ಷಿತಾ ಪೈ ಹೆಚ್ಚು ಲೈಟ್ ಕಲರ್ಸ್ ಇಷ್ಟ ಪಡುತ್ತಾರೆ. ಹಾಗಾಗಿ ಯಾವಾಗಲೂ ಬಿಳಿ, ಗುಲಾಬಿ, ಹಳದಿ, ತಿಳಿ ನೀಲಿ ಬಣ್ಣದ ಸೀರೆಗಳನ್ನು ಉಡುವ ಆಕೆ ಮುದ್ದಾಗಿ ಕಾಣುತ್ತಾರೆ. ಬಿಳಿ ಬಣ್ಣದ ಡಿಸೈನರ್ ಸೀರೆ ಧರಿಸಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಇದರಲ್ಲಿ ಧರೆಗಿಳಿದ ರಂಬೆಯಂತೆ ಕಂಗೊಳಿಸಿದ್ದಾರೆ. ಕ್ಯೂಟ್ ಕ್ಯೂಟ್ ಆಗಿ ಕಾಣಿಸಿಕೊಂಡಿರುವ ಮೋಕ್ಷಿತಾ ಬೇಬಿ ರಂಬೆಯಂತೆ ಕಾಣುತ್ತಿದ್ದಾರೆ. ಇವರ ಈ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











