ಎಂಜಾಯ್ ಮಾಡಲು ಗೋವಾ ಟ್ರಿಪ್ ಹೋಗಿ ಪಾಕೆಟ್ ಖಾಲಿ ಮಾಡಿಕೊಂಡ ಚಾರು

By ಪ್ರಿಯಾ ದೊರೆ

ನಟನೆಯ ಬಿಡುವಿನ ಸಮಯದಲ್ಲಿ ಕಿರುತೆರೆ ನಟಿಯರು ಹೆಚ್ಚಾಗಿ ಟ್ರಾವೆಲ್ ಮಾಡಲು ಬಯಸುತ್ತಾರೆ. ಬಾಲಿ, ಗೋವಾ, ಉತ್ತರ ಭಾರತ, ಅಂಡಮಾನ್, ದುಬೈ, ಹೀಗೆ ನಾನಕಡೆಗಳಲ್ಲಿ ಪ್ರವಾಸ ಕೈಗೊಳ್ಳುತ್ತಾರೆ.

ಕಿರುತೆರೆ ತಾರೆಯರಾದ ಅನುಪಮಾ ಗೌಡ, ನಮ್ರತಾ ಗೌಡ, ಸಂಜನಾ ಬುರ್ಲಿ, ದೀಪಿಕಾ ದಾಸ್, ಐಶ್ವರ್ಯ ಸಿಂಧೋಗಿ, ಸೇರಿದಂತೆ ಸಾಕಷ್ಟು ನಟಿಯರು ಪ್ರವಾಸ ಮಾಡಲು ಇಷ್ಟಪಡುತ್ತಾರೆ.

Actress mouna guddemane enjoys a vacation with friends in Goa

ಇದೀಗ ಇವರ ಸಾಲಿಗೆ ಮತ್ತೊಬ್ಬ ನಟಿ ಸೇರ್ಪಡೆಯಾಗಿದ್ದಾರೆ. ಅದು ಬೇರೆ ಯಾರೂ ಅಲ್ಲ. ವೀಕ್ಷಕರ ನೆಚ್ಚಿನ ಚಾರು. 'ರಾಮಾಚಾರಿ' ಧಾರಾವಾಹಿಯ ನಾಯಕಿ ನಟಿ ಮೌನ ಗುಡ್ಡೆಮನೆ.

20ರ ಹರೆಯದ ಚಾರು

ಚಿಕ್ಕ ವಯಸ್ಸಿಗೆ ಮಾಡೆಲಿಂಗ್‌ಗೆ ಪ್ರವೇಶ ಮಾಡಿದ ಮೌನ , ಕಿರುತೆರೆಯಲ್ಲಿ ಇದ್ದುಕೊಂಡೆ ತಮ್ಮ ವಿದ್ಯಾಭ್ಯಾಸ ಕೂಡ ಬ್ಯಾಲೆನ್ಸ್ ಮಾಡುತ್ತಿದ್ದಾರೆ. 'ರಾಮಾಚಾರಿ' ಧಾರಾವಾಹಿಗೆ ನಾಯಕಿ ನಟಿಯಾಗಿ ಎಂಟ್ರಿಕೊಟ್ಟು ಜನ ಮನ ಗೆದ್ದಿದ್ದಾರೆ. ಇನ್ನೂ 20ರ ಹರೆಯದ ಮೌನ ಗುಡ್ಡೆಮನೆ ಧಾರಾವಾಹಿಯಲ್ಲಿ ರಾಮಾಚಾರಿಯನ್ನು ಮದುವೆಯಾಗಿರುವ ಚಾರು ಈಗ ಸೀರೆಯಲ್ಲಿ ರಂಬೆ, ಊರ್ವಶಿಯ ಅಂದವನ್ನು ಮೀರಿಸುವಂತಿದ್ದಾರೆ. ಇನ್ನು ಕಳೆದ ತಿಂಗಳು ಅಭಿಮಾನಿಗಳಿಗೆ ಹತ್ತಿರವಾಗುವ ಸಲುವಾಗಿ ಮೌನ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಸಹ ತೆರೆದಿದ್ದರು. ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು.

Actress mouna guddemane enjoys a vacation with friends in Goa

ಗೆಳತಿಯರ ಜೊತೆಗೆ ಗೋವಾ ಟ್ರಿಪ್

ಯೂಟ್ಯೂಬ್ ಚಾನೆಲ್ ತೆರೆಯುತ್ತಿದ್ದಂತೆ ಸಾಕಷ್ಟು ಅಭಿಮಾನಿಗಳು ಸಬ್‌ಸ್ಕ್ರೈಬ್ ಆಗಿದ್ದಾರೆ. ಮೌನ ಶಾರ್ಟ್ಸ್ ಸೇರಿದಂತೆ ಒಟ್ಟು 15 ವೀಡಿಯೋಗಳನ್ನು ಅಪ್ ಲೋಡ್ ಮಾಡಿದ್ದಾರೆ. ಹೊಸ ವಿಡಿಯೋದಲ್ಲಿ ಸ್ನೇಹಿತೆಯರ ಜೊತೆಗೆ ಗೋವಾ ಪ್ರವಾಸ ಹೋಗಿರುವ ಬಗ್ಗೆ ಹೇಳಿದ್ದಾರೆ. ಮೌನ ಸಹೋದರಿ ಮೌಲ್ಯ ಕೂಡ ಈ ಟ್ರಿಪ್ ನಲ್ಲಿ ಭಾಗಿಯಾಗಿದ್ದಾರೆ. ಇದರ ವೀಡಿಯೋವನ್ನು ಮೌನ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎಸ್ಕೇಪ್ ಟು ಗೋವಾ, ಮೈ ಫಸ್ಟ್ ಟ್ರಾವೆಲ್ ವ್ಲಾಗ್ ಎಂದು ಪೋಸ್ಟ್ ಮಾಡಿದ್ದಾರೆ.

ಗೋವಾದ ಬಿಸಿಲಿಗೆ ಬೆಂದ ನಟೀಮಣಿ

ಮೌನ ಹಾಗೂ ಸಹೋದರಿ ಮೌಲ್ಯ ಸೇರಿದಂತೆ ಸುಶ್ಮಿತಾ ಗೌಡ ಮಲ್ನಾಡ್ ಹಾಗೂ ಅಕ್ಷತಾ ಎಂಬುವರು ಜೊತೆಗಿದ್ದಾರೆ. ಅಕ್ಷತಾ ಎಂಬಾಕೆ ದುಬೈನಲ್ಲಿ ಇದ್ದು, ಅಕ್ಷತಾ ಅವರೊಂದಿಗೆ ಗೋವಾ ಟ್ರಿಪ್ ಪ್ಲಾನ್ ಮಾಡಿರುವುದಾಗಿ ಮೌನ ತಿಳಿಸಿದ್ದಾರೆ. ಗೋವಾದಲ್ಲಿ ಮೌನ ಗುಡ್ಡೆ ಮನೆ ಬಿಳಿ ಬಣ್ಣದ ಬಟ್ಟೆ ಧರಿಸಿ ಸುಂದರವಾಗಿ ಕಂಡಿದ್ದಾರೆ. ಗೋವಾದ ಸೆಕೆಯಲ್ಲಿ ನರಳಿದ ಬೆಡಗಿಯರು, ಯಾರೂ ಈ ಟೈಂನಲ್ಲಿ ಗೋವಾಗೆ ಬರಬೇಡಿ, ಸಿಕ್ಕಾಪಟ್ಟೆ ಬಿಸಿಲಿದೆ ಎಂದು ಹೇಳಿದ್ದಾರೆ.

ಕಾಸು ಖಾಲಿ ಮಾಡಿಕೊಂಡ ಗೆಳತಿಯರು

ಗೋವಾ ಟ್ರಿಪ್‌ನಲ್ಲಿ ಎಂಜಾಯ್ ಮಾಡಿದ ಗೆಳತಿಯರು, ಅಷ್ಟೇ ಸುಸ್ತು ಕೂಡ ಆಗಿದ್ದಾರೆ. ಕಲಗುಂಟೆ ಬೀಚ್‌ನಲ್ಲಿ ಆಟವಾಡಿ, ಹ್ಯಾಮರ್ಸ್ ಪಬ್‌ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಎರಡು ದಿನಗಳ ಗೋವಾ ಟ್ರಿಪ್ ಚೆನ್ನಾಗಿತ್ತು ಎಂದು ಕೊನೆಯಲ್ಲಿ ಹೇಳಿದ್ದು, ಬಟ್ ತಮ್ಮ ಪಾಕೆಟ್ ಫುಲ್ ಖಾಲಿ ಆಗಿದೆ. ಕಾಸು ಖಾಲಿ ಮಾಡಿಕೊಂಡ್ವಿ. ಗೋವಾ ಸಿಕ್ಕಾಪಟ್ಟೆ ಕಾಸ್ಟ್ಲಿ ಎಂದಿದ್ದಾರೆ. ಒಂದು ಬಾಟಲ್ ನೀರಿಗೆ 200 ರೂಪಾಯಿ ಕೊಟ್ಟಿದ್ದು, 10 ನಿಮಿಷದ ಟ್ರಾವೆಲ್‌ಗೆ ಕ್ಯಾಬ್‌ನವರು 1000 ರೂಪಾಯಿಯನ್ನು ತೆಗೆದುಕೊಂಡಿದ್ದಾರೆ. ಯಾರಾದರೂ ಗೋವಾಗೆ ಬರುವುದಾದರೆ, ಸ್ವಂತ ವಾಹನ ಇಲ್ಲವೇ ಇಲ್ಲಿ ವಾಹನ ಬಾಡಿಗೆಗೆ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

More from Filmibeat

English summary
Actress mouna guddemane goa trip volg goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X