Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನನ್ನ ವೃತ್ತಿ ಜೀವನ ಹಾಳು ಮಾಡಿದರು: ಧಾರಾವಾಹಿ ಮೇಲೆ ನಟಿ ಆರೋಪ
ಸಿನಿಮಾ ರಂಗದಲ್ಲಿ ಇಂದು ಮಿಂಚುತ್ತಿರುವ ಹಲವು ತಾರೆಯರು ಧಾರಾವಾಹಿ ಅಥವಾ ಟಿವಿ ಹಿನ್ನೆಲೆಯಿಂದ ಬಂದವರು. ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಸಹ ಧಾರಾವಾಹಿಗಳಲ್ಲಿ ನಟಿಸಿ ಸಿನಿಮಾ ಅವಕಾಶ ಪಡೆದುಕೊಂಡವರು. ಕನ್ನಡದಲ್ಲಿಯೂ ಇಂಥಹಾ ಉದಾಹರಣೆಗಳು ಸಾಕಷ್ಟು.
ಆದರೆ ಹಿಂದಿ ಧಾರಾವಾಹಿ ನಟಿಯೊಬ್ಬರು ತಾವು ನಟಿಸಿದ ಧಾರಾವಾಹಿ ತನ್ನ ನಟನಾ ವೃತ್ತಿಯನ್ನು ಹಾಳು ಮಾಡಿತು ಎಂದು ದೂರಿದ್ದಾರೆ. ಅದೂ ಆಕೆ ನಟಿಸಿದ ಧಾರಾವಾಹಿ ಸಾಮಾನ್ಯದ್ದಲ್ಲ, ಸೂಪರ್ ಹಿಟ್ ಧಾರಾವಾಹಿ!
ನಟಿ ನೈನಾ ಸಿಂಗ್ ಜನಪ್ರಿಯ ಹಿಂದಿ ಧಾರಾವಾಹಿ 'ಕುಂಕುಮ್ ಭಾಗ್ಯ'ದಲ್ಲಿ ನಟಿಸುತ್ತಿದ್ದರು. ಆ ಧಾರಾವಾಹಿಯಿಂದ ಹಠಾತ್ತನೆ ಹೊರಗೆ ಬಂದರು. ಇದೀಗ ಮಾಧ್ಯಮವೊಂದರ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಮಾತನಾಡಿರುವ ನಟಿ ನೈನಾ ಸಿಂಗ್, ''ಧಾರಾವಾಹಿಯವರು ನನ್ನ ವೃತ್ತಿ ಜೀವನ ಹಾಳು ಮಾಡಿದರು'' ಎಂದಿದ್ದಾರೆ. ಅಲ್ಲದೆ ತಾವು ಭಾಗವಹಿಸಿದ್ದ ಜನಪ್ರಿಯ ರಿಯಾಲಿಟಿ ಶೋ ಒಂದನ್ನು ಸಹ ತೀವ್ರವಾಗಿ ಟೀಕಿಸಿದ್ದಾರೆ.

'ಎಲ್ಲೂ ಕೆಲಸ ಸಿಗದಂತೆ ಮಾಡುತ್ತೇನೆ' ಎಂದು ಬೆದರಿಕೆ
''ನಾನು 'ಕುಂಕುಮ್ ಭಾಗ್ಯ' ಧಾರಾವಾಹಿ ಬಿಟ್ಟಾಗ ಅವರು ಹೇಳಿದ್ದರು. ನನಗೆ ಎಲ್ಲೂ ಕೆಲಸ ಸಿಗದ ಹಾಗೆ ಮಾಡುತ್ತೇನೆಂದು. ಅವರು ಹಾಗೆಯೇ ಮಾಡಿದರು. ನಾನು ಈವರೆಗೆ ಹಲವು ಆಡಿಷನ್‌ಗಳನ್ನು ನೀಡಿದ್ದೇನೆ. ಆದರೆ ಅಲ್ಲಿ ಯಾರಾದರೊಬ್ಬರು ಅವರ ಕಡೆಯವರು ಇರುತ್ತಾರೆ. ಈವರೆಗೆ ಮೂರು ವೆಬ್ ಸೀರೀಸ್‌ನಿಂದ ನನ್ನನ್ನು ಹೊರಗೆ ಅಟ್ಟಲಾಗಿದೆ. ಅಥವಾ ನಾನು ನಟಿಸಿರುವ ದೃಶ್ಯಗಳನ್ನು ಕತ್ತರಿಸಿ ಬಿಸಾಡಲಾಗಿದೆ'' ಎಂದಿದ್ದಾರೆ ನೈನಾ ಸಿಂಗ್.

ಅವಕಾಶ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀನಿ: ನೈನಾ ಸಿಂಗ್
''ನಾನು ಸಾಕಷ್ಟು ಕಾಲ ಮೌನವಾಗಿದ್ದೇನೆ. ಈಗ ಮಾತನಾಡುವ ಸಮಯ ಬಂದಿದೆ. ಧಾರಾವಾಹಿಯವರನ್ನು ಎದುರು ಹಾಕಿಕೊಂಡಾಗ, ನನಗೆ ಪ್ರತಿಭೆ ಇದ್ದರೆ ಅವಕಾಶ ಸಿಕ್ಕೇ ಸಿಗುತ್ತದೆ ಎಂದುಕೊಂಡಿದ್ದೆ. ಆದರೆ ಈಗ ಹಾಗಾಗುತ್ತಿಲ್ಲ. ಪ್ರತಿಭೆ ಇದ್ದರೂ ಧಾರಾವಾಹಿಯವರ ಮೂಗು ತೂರಿಸುವಿಕೆಯಿಂದ ನನಗೆ ಕೆಲಸ ಸಿಗುತ್ತಿಲ್ಲ. ಆದರೆ ನಾನೂ ಪ್ರಯತ್ನ ಬಿಡುತ್ತಿಲ್ಲ. ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದೀನಿ. ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲು ಸಾಕಷ್ಟು ಯತ್ನಿಸುತ್ತಿದ್ದೀನಿ'' ಎಂದಿದ್ದಾರೆ ನೈನಾ ಸಿಂಗ್.

ರಿಯಾಲಿಟಿ ಶೋ ಬಗ್ಗೆಯೂ ಟೀಕೆ
ಧಾರಾವಾಹಿ ಮಾತ್ರವೇ ಅಲ್ಲದೆ ತಾವು ಭಾಗವಹಿಸಿದ್ದ ರಿಯಾಲಿಟಿ ಶೋ ಬಗ್ಗೆಯೂ ಟೀಕೆ ಮಾಡಿದ್ದಾರೆ ನೈನಾ ಸಿಂಗ್. ಆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದು ನನ್ನ ದೊಡ್ಡ ತಪ್ಪು. ಕೇವಲ ಎರಡೇ ವಾರದಲ್ಲಿ ಎಲಿಮಿನೇಟ್ ಆಗುವಂಥಹಾ ಸ್ಪರ್ಧಿ ನಾನಾಗಿರಲಿಲ್ಲ. ಅದಕ್ಕೆ ಮುನ್ನ ನಾನು ಎರಡು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದೆ. ಒಂದರಲ್ಲಿ ನಾನು ಪ್ರಶಸ್ತಿ ಗೆದ್ದಿದ್ದರೆ, ಮತ್ತೊಂದರಲ್ಲಿ ಫೈನಲಿಸ್ಟ್ ಆಗಿದ್ದೆ. 'ಕುಂಕುಮ ಭಾಗ್ಯ' ಧಾರಾವಾಹಿ ಬಿಟ್ಟಿದ್ದಕ್ಕೆ ನನಗೆ ಯಾವ ಪಶ್ಚಾತಾಪವೂ ಇಲ್ಲ. ಆದರೆ ಆ ರಿಯಾಲಿಟಿ ಶೋನ 14ನೇ ಸೀಸನ್‌ನಲ್ಲಿ ಭಾಗವಹಿಸಿದ್ದಕ್ಕೆ ನನಗೆ ಈಗಲೂ ಪಶ್ಚಾತಾಪವಿದೆ'' ಎಂದಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಎಂಬುದನ್ನು ನನಗೆ ಹೇಳಿರಲಿಲ್ಲ: ನೈನಾ ಆರೋಪ
''ನಾನು ಆ ಶೋಗೆ ಹೋಗಲೇ ಬಾರದಿತ್ತು. ನನ್ನನ್ನು ವೈಲ್ಡ್ ಕಾರ್ಡ್ ಮೂಲಕ ಕಳಿಸುತ್ತಿದ್ದಾರೆ ಎಂದು ಅವರು ಹೇಳಿರಲಿಲ್ಲ. ನಂತರ ನನ್ನನ್ನು ಮೂರು ವಾರಗಳ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಿದರು. ಯಾರಿಗೂ ನಾನು ಎಲ್ಲಿದ್ದೆನೆಂದು ಹೇಳುವಂತಿರಲಿಲ್ಲ. ಯಾರೊಂದಿಗೂ ಮಾತನಾಡುವಂತಿರಲಿಲ್ಲ. ಅದು ಬಹಳ ಹಿಂಸೆಯಾಗಿತ್ತು. ನಂತರ ನನ್ನನ್ನು ಶೋಗೆ ಕಳಿಸಲಾಯ್ತು. ನಂತರ ಎರಡೇ ವಾರಕ್ಕೆ ನನ್ನನ್ನು ಹೊರಗೆ ಕಳಿಸಿದರು. ಶೋನಲ್ಲಿ ಇರುವ ಸಮಯಕ್ಕಿಂತಲೂ ಹೆಚ್ಚು ಸಮಯ ನಾನು ಹೋಟೆಲ್‌ನಲ್ಲಿ ಕಳೆದೆ. ನಾನಂತೂ ಒಂದು ಸಮಯದಲ್ಲಿ ಶೋನ ಆಯೋಜಕರಿಗೆ ಹೇಳಿಬಿಟ್ಟೆ. ನನಗೆ ಇದೆಲ್ಲ ಸಾಧ್ಯವಿಲ್ಲವೆಂದು'' ಎಂದಿದ್ದಾರೆ ನೈನಾ ಸಿಂಗ್.

ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದರು: ನೈನಾ ಸಿಂಗ್
''ನಾನು ಈ ಮೊದಲು ಸ್ಪ್ಲಿಟ್ ವಿಲ್ಲಾ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದೆ. ಅಲ್ಲಿ ಸಾಕಷ್ಟು ಜಗಳವಾಡಿದ್ದೆ ಆದರೆ ಅವಕ್ಕೆಲ್ಲ ಒಂದು ಕಾರಣವಿತ್ತು. ಆದರೆ ಈ ರಿಯಾಲಿಟಿ ಶೋನಲ್ಲಿ ಎಲ್ಲ ಸ್ಪರ್ಧಿಗಳು ಕೇವಲ ತೋರಿಕೆಗಾಗಿ ಜಗಳ ಮಾಡುತ್ತಿದ್ದರು. ಅಥವಾ ಇನ್ನೊಬ್ಬರ ಮೇಲೆ ಕಾಳಜಿ ಮಾಡುತ್ತಿದ್ದರು. ನಾನು ಮಾಡಿದ ಜಗಳ, ಆಡಿದ ಮಾತುಗಳನ್ನು ರಿಯಾಲಿಟಿ ಶೋನವರು ಎಡಿಟ್ ಮಾಡಿಬಿಟ್ಟಿದ್ದರು. ನನ್ನ ಕೆಟ್ಟ ಮುಖವನ್ನಷ್ಟೆ ಅವರು ಟಿವಿಯಲ್ಲಿ ಪ್ರಸಾರ ಮಾಡಿದ್ದರು. ಇದರಿಂದ ವೀಕ್ಷಕರಿಗೆ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿತು. ಇದು ನನಗೆ ಬಹಳ ಬೇಸರವಾಯ್ತು. ಇನ್ನೊಮ್ಮೆ ಅವರೇ ಅವಕಾಶ ಕೊಟ್ಟರೂ ಆ ಶೋಗೆ ನಾನು ಹೋಗುವುದಿಲ್ಲ'' ಎಂದಿದ್ದಾರೆ ನೈನಾ ಸಿಂಗ್.