ಮದುವೆ ಗೆಟಪ್ನಲ್ಲಿ ಕಾರ್ತಿಕ್-ನಮ್ರತಾ ; ಹುಬ್ಬೇರಿಸಿದ ಅಭಿಮಾನಿಗಳು..!
ನಮ್ರತಾ ಗೌಡ ಮತ್ತು ನಟ ಕಾರ್ತಿಕ್ ಮಹೇಶ್ ಇಬ್ಬರೂ ಬಿಗ್ ಬಾಸ್ ಸೀಸನ್ 10 ರಲ್ಲಿ ಭಾಗವಹಿಸಿದ್ದರು. ಕಾರ್ತಿಕ್ ವಿನ್ನರ್ ಆಗಿ ಹೊರ ಹೊಮ್ಮಿದರು. ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಮಹೇಶ್ ಆಗಾಗ ನಮ್ರತಾ ಅವರ ಜೊತೆಗೆ ಪ್ಲರ್ಟ್ ಮಾಡಿಕೊಂಡು ಸಮಯ ಕಳೆಯುತ್ತಿದ್ದರು. ಈ ವಿಚಾರಕ್ಕೆ ನಮ್ರತಾ ಅವರು ಬೇಸರ ಮಾಡಿಕೊಂಡಿದ್ದೂ ಇದೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಕೆಟ್ಟದಾಗಿ ಟ್ರೋಲ್ ಆಗುತ್ತಿದೆ ಎಂದು ನಮ್ರತಾ ಅವರು ಬೇಸರ ಮಾಡಿಕೊಂಡಿದ್ದರು. ಇದರಿಂದ ಕಾರ್ತಿಕ್ ಅವರಿಗೂ ಬೇಸರವಾಗಿತ್ತು.
ಸ್ನೇಹಿತ್ ನ ಹಚ್ಚಿಕೊಂಡಿದ್ದ ನಮ್ರತಾ
ನಮ್ರತಾ ಗೌಡ ಅವರು ಬಗ್ ಬಾಸ್ ಮನೆಯಲ್ಲಿದ್ದಾಗ ಸ್ನೇಹಿತ್ ಅವರ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಸ್ನೇಹಿತ್ ಅವರಿಗೆ ನಮ್ರತಾ ಎಂದರೆ ಇಷ್ಟವಿತ್ತು. ಈ ಬಗ್ಗೆ ಓಪನ್ ಆಗಿ ಬಹಳಷ್ಟು ಸಲ ಹೇಳಿಕೊಂಡಿದ್ದರು. ಆದರೆ, ನಮ್ರತಾ ಗೌಡ ಅವರಿಗೆ ಸ್ನೇಹಿತ್ ಮೇಲೆ ಯಾವ ಫೀಲಿಂಗ್ಸ್ ಕೊಡ ಇರಲಿಲ್ಲ. ಆದರೆ ಒಳ್ಳೆಯ ಗೆಳೆಯ ಎನಿಸಿಕೊಂಡಿದ್ದರು. ಸ್ನೇಹಿತ್ ಎಲಿಮಿನೇಟ್ ಆದ ಬಳಿಕ ನಮ್ರತಾ ಅವರು ಒಂಟಿಯಾಗಿದ್ದರು. ಸ್ನೇಹಿತ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಇದೆಲ್ಲವೂ ನೋಡಿದವರು ಮುಂದೆ ಸ್ನೇಹಿತ್ ಹಾಗೂ ನಮ್ರತಾ ಮದುವೆಯಾಗಬಹುದು ಎಂದು ಭಾವಿಸಿದ್ದರು. ಆದರೆ ಕೆಲ ಸಣ್ಣ-ಪುಟ್ಟ ವಿಚಾರಗಳುಗೆ ಸ್ನೇಹಿತ್ ಮತ್ತು ನಮ್ರತಾ ಅವರ ನಡುವೆ ಮುನಿಸು ಕೂಡ ಇತ್ತು.

ಅಭಿಮಾನಿಗಳು ಇಷ್ಟಪಟ್ಟಿದ್ದ ಜೋಡಿ
ಇನ್ನು ಸ್ನೇಹಿತ್ ಬಿಗ್ ಬಾಸ್ ಮನೆಯಲ್ಲಿ ಇರಬೇಕಾದಲೇ ಕಾರ್ತಿಕ್ ಮಹೇಶ್ ಅವರು ಬೇಕಂತಲೇ ನಮ್ರತಾ ಅವರನ್ನು ಆಗಾಗ ಪ್ಲರ್ಟ್ ಮಾಡುತ್ತಿದ್ದರು. ಸ್ನೇಹಿತ್ ಮನೆಯಿಂದ ಹೊರ ನಡೆದ ನಂತರ ನಮ್ರತಾ ಮತ್ತು ಕಾರ್ತಿಕ್ ಅವರು ಹೆಚ್ಚು ಸಮಯ ಒಟ್ಟಿಗೆ ಕಳೆಯುತ್ತಿದ್ದರು. ಇವರಿಬ್ಬರ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಕಾರ್ತಿಕ್ ಹಾಗೂ ನಮ್ರತಾ ಬಹಳ ಕ್ಲೋಸ್ ಆಗಿ ಇದ್ದರು. ಇದು ಸ್ನೇಹಿತ್ ಅವರಲ್ಲೂ ಬೇಸರ ಮೂಡಿಸಿತ್ತು. ಈ ವಿಚಾರಕ್ಕೆ ಮನೆಯಲ್ಲಿ ವಿನಯ್ ಕೂಡ ಆಗಾಗ ನಮ್ರತಾ ಅವರನ್ನು ರೇಗಿಸುತ್ತಿದ್ದರು. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ನಡೆದ ಬಳಿಕ ನಮ್ರತಾ, ಸ್ನೇಹಿತ್, ವಿನಯ್, ಕಾರ್ತಿಕ್, ತನಿಷಾ ಎಲ್ಲರೂ ಕೂಡ ಒಂದೆರಡು ಬಾರಿ ಭೇಟಿಯಾಗಿದ್ದರು.
ನಟಿ ಪ್ರೇಮಾ ಜೊತೆಗೆ ಕಾಣಿಸಿಕೊಂಡ ಜೋಡಿ
ಕಾರ್ತಿಕ್ ಅವರು ಬಿಗ್ ಬಾಸ್ ನಲ್ಲಿ ಗೆದ್ದ ಬಳಿಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಕಾರ್ತಿಕ್ ಅವರು ನಟಿಸಿರುವ ಡೊಳ್ಳು ಸಿನಿಮಾ ನ್ಯಾಷನಲ್ ಫಿಲಂ ಅವಾರ್ಡ್ ಅನ್ನು ಪಡೆದುಕೊಂಡಿದೆ. ಸದ್ಯ ಕಾರ್ತಿಕ್ ಮತ್ತು ನಮ್ರತಾ ಜೋಡಿ ಒಟ್ಟಿಗೆ ಕಾಣಿಸಿಸಕೊಂಡಿದ್ದಾರೆ. ನಟಿ ಪ್ರೇಮಾ ಅವರ ಜೊತೆಗೆ ಟ್ರೆಡೀಷನಲ್ ಲುಕ್ ನಲ್ಲಿ ಮಿಂಚಿದ್ದಾರೆ.

ಆಡ್ ಶೂಟ್ ನಲ್ಲಿ ಭಾಗವಹಿಸಿರುವ ನಮ್ರತಾ-ಕಾರ್ತಿಕ್
ಕಾರ್ತಿಕ್ ಎಥ್ನಿಕ್ ವೇರ್ ನಲ್ಲಿ ಮಿಂಚಿದ್ದರೆ, ನಮ್ರತಾ ಅವರಂತೂ ಮದುಮಗಳಂತೆ ಸಿಂಗಾರ ಮಾಡಿಕೊಂಡಿದ್ದು, ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕೂಡ ಒಟ್ಟಿಗೆ ಇರುವುದನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನೂ ಈ ಫೋಟೋ ನೋಡಿದ ಫ್ಯಾನ್ಸ್ ಇಬ್ಬರು ಮದುವೆ ಆಗೇ ಬಿಟ್ರಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೋಡಿ ಸೂಪರ್ ಎಂದು ಅನೇಕರು ಕಮೆಂಟ್ ಮಾಡ್ತಿದ್ದಾರೆ. ಇನ್ನು ಕೆಲವರು ಕಾರ್ತಿಕ್ , ನಟಿ ಸಂಗೀತಾ ಶೃಂಗೇರಿಗೆ ಕೈ ಕೊಟ್ಟೇ ಬಿಟ್ರಾ ಎಂದು ಕಮೆಂಟ್ ಮಾಡಿದ್ದಾರೆ. ಅಂದ್ಹಾಗೇ ಇದೊಂದು ಆಡ್ ಶೂಟ್ ಆಗಿದ್ದು, ಯಾವ ಪ್ರಾಡಕ್ಟ್ ಗೆ ಎಂಬ ಮಾಹಿತಿ ಇಲ್ಲ.


Click it and Unblock the Notifications











