Naagini- 2: ಕೊನೆಗೂ 'ನಾಗಿಣಿ - 2' ಕಥೆ ಮುಗೀತು: ಹೊಸ ಕಥೆ ಯಾವುದು?
ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳು ಹಿಟ್ ಆಗಿವೆ. ಧಾರಾವಾಹಿಯ ಕಥೆಗಳಿಗೆ ಆರಂಭ ಹೇಗೆ ಇರುತ್ತದೋ ಹಾಗೆ ಕೊನೆ ಎಂಬುವುದು ಕೂಡ ಇದ್ದೆ ಇರುತ್ತದೆ.
ಜೀ ಕನ್ನಡದಲ್ಲಿ ಈಗಾಗಲೇ ಎರಡು ಧಾರಾವಾಹಿಗಳು ಪ್ರಸಾರ ಕಾಣಲು ಕಳೆದ ಎರಡು ತಿಂಗಳಿನಿಂದ ಕಾಯುತ್ತಿವೆ. ಈ ಧಾರಾವಾಹಿಗಳಿಗೆ ಸದ್ಯಕ್ಕೆ ಸ್ಲಾಟ್ ಇಲ್ಲ.
ಇದೀಗ 'ನಾಗಿಣಿ- 2' ಧಾರಾವಾಹಿ ಮುಗಿಯುವ ಹಂತ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಧಾರಾವಾಹಿ ಮುಕ್ತಾಯಗೊಳ್ಳಲಿದೆ. ಈ ಬಗ್ಗೆ ಕ್ಲೂ ಸಿಕ್ಕಿದೆ.

ನಮ್ರತಾ ಗೌಡ ನಟನೆಯ ಸೀರಿಯಲ್
ಏಳು ವರ್ಷಗಳ ಹಿಂದೆ ಪ್ರಾರಂಭವಾದ 'ನಾಗಿಣಿ' ಧಾರಾವಾಹಿ ಬಳಿಕ 'ನಾಗಿಣಿ- 2' ಕಥೆಯೂ ಮುಂದುವರಿದಿತ್ತು. ಇದೀಗ ಈ ಧಾರಾವಾಹಿ ಮುಕ್ತಾಯಗೊಳ್ಳುವ ಹಂತ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ 'ನಾಗಿಣಿ- 2' ಧಾರಾವಾಹಿ ಅಂತ್ಯವಾಗುತ್ತಿದೆ. ಈ ಬಗ್ಗೆ ನಟಿ ನಮ್ರತಾ ಗೌಡ ಅವರು ಬಿಗ್ ಅಪ್ ಡೇಟ್ ನೀಡಿದ್ದಾರೆ. ಹೌದು. ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ. ಕಳೆದ ವರ್ಷವೇ 'ನಾಗಿಣಿ- 2' ಧಾರಾವಾಹಿ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಆ ಸಂದರ್ಭದಲ್ಲಿ ಹೊಸ ಧಾರಾವಾಹಿಗಳು ಪ್ರಸಾರಕ್ಕೆ ಸಿದ್ಧವಾಗಿರಲಿಲ್ಲ. ಹೀಗಾಗಿ ಕತೆಯನ್ನು ಎಳೆದಿದ್ದರು. ಆದರೆ ಈಗ ಎರಡು ಹೊಸ ಧಾರಾವಾಹಿಗಳು ಪ್ರಸಾರಕ್ಕೆ ಸಜ್ಜಾಗಿವೆ. ಆ ಎರಡೂ ಧಾರಾವಾಹಿಗಳಲ್ಲಿ ಒಂದಕ್ಕೆ 'ನಾಗಿಣಿ- 2' ಸ್ಥಳಾವಕಾಶ ಮಾಡಿಕೊಡುತ್ತಿದೆ.
ಕ್ಲೂ ಕೊಟ್ಟ ನಮ್ರತಾ ಗೌಡ
ನಟಿ ನಮ್ರತಾ ಗೌಡ ಅವರು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ "ಶಿವಾನಿ ಪಾತ್ರದಿಂದ ಹೊರ ಬರುತ್ತಿದ್ದೇನೆ. ಎಲ್ಲರಿಗೂ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಐಶ್ವರ್ಯ ಸಿಂದೋಗಿ ಅವರು ಅದ್ಭುತವಾದ ಪ್ರಾಜೆಕ್ಟ್ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು 'ನಾಗಿಣಿ- 2' ಧಾರಾವಾಹಿ ಅಂತ್ಯಗೊಳ್ಳುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಇನ್ನು ಇದರೊಂದಿಗೆ ನಮ್ರತಾ ಗೌಡ ಅವರು ತಮ್ಮ ಸೀರಿಯಲ್ ಸೆಟ್ ತಂಡದ ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡಿದ್ದು, ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಧಾರಾವಾಹಿ ಯಾವಾಗ ಅಂತ್ಯವಾಗುತ್ತದೆ ಎಂಬುದು ಇನ್ನು ತಿಳಿದು ಬಂದಿಲ್ಲ.

ಎರಡು ಧಾರಾವಾಹಿ ಪ್ರಸಾರಕ್ಕೆ ಸಜ್ಜು
ಇನ್ನು ಈ ಧಾರಾವಾಹಿ ಅಂತ್ಯಗೊಂಡರೆ, ಇದರ ಜಾಗದಲ್ಲಿ 'ಸೀತಾ ರಾಮ' ಇಲ್ಲವೇ 'ಭೂಮಿಗೆ ಬಂದ ಭಗವಂತ' ಎಂಬ ಎರಡು ಧಾರಾವಾಹಿಗಳಲ್ಲಿ ಒಂದು ಪ್ರಸಾರವಾಗುತ್ತದೆ. 'ಭೂಮಿಗೆ ಬಂದ ಭಗವಂತ' ಧಾರಾವಾಹಿ ಮಧ್ಯಮ ವರ್ಗದ ಸಂಸಾರದ ಕಥೆಯಾಗಿದ್ದು, ನಾಯಕ ನಟನಿಗಾಗಿ ಭಗವಂತನೇ ಭೂಮಿಗೆ ಇಳಿದು ಬರುತ್ತಾನೆ. ಇದರಲ್ಲಿ ನಟ ನವೀನ್ ಕೃಷ್ಣ ನಾಯಕನ ಪಾತ್ರದಲ್ಲೂ, ನಟಿ ಕೃತಿಕಾ ರವೀಂದ್ರ ಅವರು ನಾಯಕಿಯ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಹಲವು ವರ್ಷಗಳ ಬಳಿಕ ಇಬ್ಬರೂ ನಟ-ನಟಿಯರು ಕಿರುತೆರೆಗೆ ರೀ-ಎಂಟ್ರಿ ಕೊಟ್ಟಿದ್ದಾರೆ.

ಕುತೂಹಲಗೊಂಡ ಪ್ರೇಕ್ಷಕರು
ಇನ್ನು ಮತ್ತೊಂದು ಧಾರಾವಾಹಿ 'ಸೀತಾ ರಾಮ'. ಈ ಧಾರಾವಾಹಿಯಲ್ಲಿ ನಾಯಕ ಹಾಗೂ ನಾಯಕಿ ಪ್ರೀತಿಗೆ ಸೇತುವೆಯಾಗಿ ಬರುವ ಪುಟಾಣಿ ಇರುವಂತಹ ಕಥೆಯಾಗಿದೆ. ಇದರಲ್ಲಿ ನಟ ಗಗನ್ ಚಿನ್ನಪ್ಪ ಅವರು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿ ವೈಷ್ಣವಿ ಗೌಡ ಅವರು ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಎರಡೂ ಧಾರಾವಾಹಿಯ ಪ್ರೋಮೋ ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡಿದ್ದು, ಯಾವುದು ಮೊದಲು ಶುರುವಾಗುತ್ತೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.


Click it and Unblock the Notifications











