Namratha Gowda: ಕೆಂಪು ಸೀರೆಯಲ್ಲಿ ಕಂಗೊಳಿಸಿದ ನಾಗಿಣಿ 2 ನಟಿ ನಮ್ರತಾ ಗೌಡ
ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ ಮತ್ತು ನಾಗಿಣಿ 2 ಧಾರಾವಾಹಿಗಳಿಂದ ಖ್ಯಾತಿ ಗಳಿಸಿದ ನಟಿ ನಮ್ರತಾ ಗೌಡ ಸದ್ಯ ಬೇರಾವ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿಲ್ಲ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಂಟೂವರೆ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುತ್ತಾರೆ.
ನಟಿ ಮಂಗಳವಾರ ಕೆಂಪು ಸೀರೆಯನ್ನು ಧರಿಸಿ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಲೈಕ್ ಒತ್ತುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಫೋಟೋಗಳಲ್ಲಿ ನಮ್ರತಾ ಸಿಲ್ವರ್ ಕಲರ್ ಬಾರ್ಡರ್ ಇರುವ ಕೆಂಪು ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಕೂದಲನ್ನು ಫ್ರೀ ಬಿಟ್ಟು ಫೋಟೋಗೆ ಫೋಸ್‌ಗಳನ್ನು ನೀಡಿದ್ದಾರೆ.

ಸರಳವಾಗಿ ಅಲಂಕಾರ ಮಾಡಿಕೊಂಡು, ಅತಿಯಾದ ಆಭರಣ ಧರಿಸದೆ ಸಹಜ ಸುಂದರಿಯಂತೆ ನಮ್ರತಾ ಕಾಣುತ್ತಿದ್ದಾರೆ. ನೆಲ ತಾಗುವಂತೆ ಸೆರಗು ಬಿಟ್ಟು ಮುದ್ದಾಗಿ ಕಾಣುತ್ತಿರುವ ನಮ್ರತಾ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಫೋಟೋಗಳಿಗೆ "Make peace with your broken pieces" ಎಂದು ಶೀರ್ಷಿಕೆ ನೀಡಿದ್ದಾರೆ. ಈ ಸುದ್ದಿ ಬರೆಯುವ ಅಷ್ಟರಲ್ಲಿ ನಟಿ ನಮ್ರತಾ ಗೌಡ ಅವರ ಫೋಟೋಗೆ ಸುಮಾರು ನಾಲ್ಕು ಸಾವಿರ ಮಂದಿ ಪ್ರತಿಕ್ರಿಯೆ ನೀಡಿದ್ದರು.
ಈ ಹಿಂದೆಯೂ ನಟಿ ನಮ್ರತಾ ಗೌಡ ಸಾಂಪ್ರದಾಯಿಕ ಉಡುಪಿನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಮಾಡ್ರನ್, ಟ್ರಡಿಷನಲ್ ಎರಡೂ ಬಟ್ಟೆಗಳಲ್ಲಿ ಅದ್ಭುತವಾಗಿ ಕಾಣುವ ನಮ್ರತಾ ಗೌಡ, ಈ ಹಿಂದೆ ಬಾಲಿ ಪ್ರವಾಸದಲ್ಲಿದ್ದ ಅವರು ಟೂ ಪೀಸ್‌ನಲ್ಲಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿ ವೈರಲ್ ಆಗಿದ್ದರು. ಅವರ ಬೋಲ್ಡ್ ಫೋಟೋಗಳಿಗೆ ಹಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದಾದ ನಂತರ ಅವರು ತಮ್ಮ ಫೋಟೋಗಳಿಗೆ ಕಾಮೆಂಟ್ ಮಾಡುವುದನ್ನು ನಿರ್ಬಂಧಿಸಿದ್ದಾರೆ.
ನಮ್ರತಾ ಗೌಡ ಅವರು ಬಾಲ ಕಲಾವಿದೆಯಾಗಿ ಟಿವಿ ಪರದೆಗೆ ಕಾಲಿರಿಸಿದರು. ಕಲರ್ಸ್ ಕನ್ನಡದ ಪುಟ್ಟ ಗೌರಿ ಮದುವೆ, ಸುಮರ್ಣದಲ್ಲಿ ಬರುತ್ತಿದ್ದ ಕೃಷ್ಣ ರುಕ್ಮಿಣಿಯಂತಹ ಹಲವಾರು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇದಾದ ನಂತರ ಮುಖ್ಯ ಪಾತ್ರ "ಶಿವಾನಿ" ಆಗಿ ಜೀ ಕನ್ನಡದ ನಾಗಿಣಿ 2 ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಂತರ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.


Click it and Unblock the Notifications










