Namratha Gowda: ಹಸಿರು ಸೀರೆಯುಟ್ಟು ಕಂಗೊಳಿಸಿದ ನಮ್ರತಾ ಗೌಡ ಫೋಟೋಗಳಿಗೆ ಫ್ಯಾನ್ಸ್ ಫಿದಾ!
ಕಿರುತೆರೆ ಮೂಲಕ ಸಖತ್ ಸದ್ದು ಮಾಡಿದ ನಟಿ ನಮ್ರತಾ ಗೌಡ ಬಾಲ ಕಲಾವಿದೆಯಾಗಿ ಕಿರುತೆರೆಗೆ ಕಾಲಿಟ್ಟವರು. ನಾಗಿಣಿ ಧಾರಾವಾಹಿ ಬಳಿಕ ಬಿಗ್ ಬಾಸ್ ವೇದಿಕೆಯಲ್ಲಿ ಮಿಂಚಿದ್ದ ಈಕೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ಟಿವ್ ಆಗಿರುತ್ತಾರೆ. ಹೊಸ ಹೊಸ ಫೋಟೋಗಳು, ರೀಲ್ಸ್‌ಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗುತ್ತಿರುತ್ತಾರೆ.
ಇನ್ನೂ ನಮ್ರತಾ ಗೌಡ ಒಂದಲ್ಲ ಒಂದು ವಿಷಯದಿಂದ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ನಮ್ರತಾ ಗೌಡ ಸೀರೆಯುಟ್ಟು ಬೆಳದಿಂಗಳ ಬಾಳೆಯ ಹಾಗೆ ಕಾಣಿಸುತ್ತಾ ಇದ್ದಾರೆ. ಇದಕ್ಕಿಂತ ಮುಂಚೆ ಟು ಪೀಸ್ ತೊಟ್ಟು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ನಟಿ ಇದೀಗ ಸೀರೆ ತೊಟ್ಟು ನೋಡುಗರ ಮನಸಿಗೆ ಮುದ ನೀಡುತ್ತಿದ್ದಾರೆ. ಇವರ ನೋಟಕ್ಕೆ ಫಿದಾ ಆಗದವರೆ ಇಲ್ಲ.. ಇದೀಗ ನಮ್ರತಾ ಗೌಡ ಹೊಸ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ನಮ್ರತಾ ಗೌಡ ನೋಟಕ್ಕೆ ಫಿದಾ ಆದ ಅಭಿಮಾನಿಗಳು
ಇತ್ತೀಚಿನ ದಿನಗಳಲ್ಲಿ ಸೀರೆಯುಟ್ಟು ಅದ್ಭುತವಾಗಿ ಕಂಡ ನಟಿ ಮನೆಯ ಗೃಹ ಪ್ರವೇಶವನ್ನು ಅಷ್ಟೇ ಅದ್ದೂರಿಯಾಗಿ ಮಾಡಿಕೊಂಡಿದ್ದರು. ಇದೀಗ ಹಸಿರು ಸೀರೆ ತೊಟ್ಟು ಅದ್ಭುತವಾಗಿ ಕಾಣಿಸುತಿದ್ದಾರೆ. ನಮ್ರತಾ ಗೌಡ ಪುಟ್ಟಗೌರಿ ಮದುವೆ ಮತ್ತು ನಾಗಿಣಿ 2 ಧಾರಾವಾಹಿ ಮೂಲಕ ಮಿಂಚಿ ಎಲ್ಲರಿಗೂ ಚಿರಪರಿಚಿತರು.
ಹಲವು ಪ್ರವಾಸ ಕೈಗೊಂಡ ನಟಿ
ಧಾರಾವಾಹಿ ಮುಗಿದ ಬಳಿಕ ಅವರು ಹಲವಾರು ಪ್ರವಾಸಗಳನ್ನು ಕೈಗೊಂಡರು. ಬೋಲ್ಡ್ ಫೋಟೋದ ಮೂಲಕ ಬಹಳ ಸುಂದರವಾಗಿ ಕಾಣಿಸಿಕೊಂಡ ಈಕೆಯ ಫೋಟೋ ನೋಡಿ ಅಭಿಮಾನಿಗಳಲ್ಲಿ ಕೊಂಚ ಬೇಸರ ಮೂಡಿತು. ಈಗ ಹಸಿರು ಬಣ್ಣದ ಸೀರೆಯುಟ್ಟ ನಟಿ ನಮ್ರತಾ ಗೌಡ ಮಿಂಚುತ್ತಿದ್ದು, ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಜಾತ್ರೆಲೂ, ಸಂತೇಲೂ, ನೀ ಕೈಯ್ಯ ಬಿಡದಿರು. ಆಗಾಗ ಕಣ್ಣಲ್ಲಿ, ಸಂದೇಶ ಕೊಡುತಿರು ಎಂದು ಹಾಡಿನ ಸಾಲುಗಳನ್ನು ಶೀರ್ಷಿಕೆಯಾಗಿ ಬರೆದುಕೊಂಡಿದ್ದಾರೆ.

ನಮ್ರತಾ ಫೋಟೋಗೆ ಅಭಿಮಾನಿಗಳ ಪ್ರೀತಿಯ ಸುರಿಮಳೆ
ಇನ್ನೂ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಮತ್ತಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ನಟಿ ಡಾ.ರಾಜ್‌ಕುಮಾರ್ ಅವರ ಹಾಡು ನೆನಪಾಗಿದ್ದು, ಸಂಜೆ ತಂಗಾಳಿ ತಂಪಾಗಿ ಬೀಸಿ, ಹೂವ ಕಂಪನ್ನು ಹಾದಿಗೆ ಹಾಸಿ, ತಂದಿದೆ ಹಿತವ ನಮಗಾಗಿ ಎಂದು ಬರೆದುಕೊಂಡಿದ್ದಾರೆ. ಹೊಸ ಫೋಟೋಗಳಲ್ಲಿ ನಟಿ ನಮ್ರತಾ ಗೌಡ ಅಷ್ಟಾಗಿ ಮೇಕಪ್ ಮಾಡಿಕೊಳ್ಳದೆ ಬಹಳ ಸುಂದರವಾಗಿ ಕಾಣಿಸುತ್ತ ಇದ್ದಾರೆ. ಈ ಸುಂದರ ಫೋಟೋಗಳನ್ನು ನೋಡಿದ ನಮ್ರತಾ ಗೌಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.


Click it and Unblock the Notifications











