'ನಾಗಿಣಿ 2' ತೆರೆ ಕಂಡು ಐದು ವರ್ಷ.. ಫೋಟೊ ಹಂಚಿಕೊಂಡ ನಮ್ರತಾ ಹೇಳಿದ್ದೇನು ಗೊತ್ತಾ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ನಾಗಿಣಿ 2' ಕೂಡಾ ಒಂದು. ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ 2' ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿದೆ. ಕನ್ನಡ ಕಿರುತೆರೆಯ ಜನಪ್ರಿಯ ನಿರ್ದೇಶಕ ಕೆ‌.ಎಸ್. ರಾಮ್ ಜೀ ನಿರ್ದೇಶನದಡಿಯಲ್ಲಿ ಪ್ರಸಾರಗೊಂಡ 'ನಾಗಿಣಿ 2' ಧಾರಾವಾಹಿಯು ಮುಕ್ತಾಯಗೊಂಡು ಎರಡು ವರ್ಷಗಳು ಕಳೆಯುತ್ತಾ ಬಂತು.

ಹೌದು, 2023 ಮಾರ್ಚ್ 3 ರಂದು ಮುಕ್ತಾಯಗೊಂಡ ಈ ಧಾರಾವಾಹಿ ಆರಂಭವಾಗಿದ್ದು ಅದು ಶುರುವಾಗಿದ್ದು 2020 ಫೆಬ್ರವರಿ 17 ರಂದು. ಬರೋಬ್ಬರಿ 762 ಸಂಚಿಕೆಗಳು ಪ್ರಸಾರ ಕಂಡ ಈ ಧಾರಾವಾಹಿ ಶುರುವಾಗಿ ಇಂದಿಗೆ ಐದು ವರ್ಷ. ಇನ್ನು ನಾಗಲೋಕದ ಕಥೆಯನ್ನು ಹೊಂದಿದ್ದ ಈ ಧಾರಾವಾಹಿಯಲ್ಲಿ ನಾಗಲೋಕದ ರಾಜಕುಮಾರಿ, ಇಚ್ಛಾಧಾರಿ ನಾಗಿಣಿ ಶಿವಾನಿಯಾಗಿ ಅಭಿನಯಿಸಿದ್ದರು ನಮ್ರತಾ ಗೌಡ.

Actress Namratha Gowda shared a post about Naagini 2 five years completion

'ನಾಗಿಣಿ 2' ಧಾರಾವಾಹಿಯ ಬಳಿಕ ಕಿರುತೆರೆಯಿಂದ ದೂರವಿರುವ ನಮ್ರತಾ ಗೌಡ ಇದೀಗ ಈ ಸುಂದರ ಗಳಿಗೆಯನ್ನು ಮೆಲುಕು ಹಾಕಿಕೊಂಡಿದ್ದಾರೆ. ಹೌದು, ನಾಗಿಣಿ ಧಾರಾವಾಹಿಗೆ ಸಂಬಂಧಿಸಿದ ಒಂದಷ್ಟು ಫೋಟೋಗಳನ್ನು ಅದರಲ್ಲೂ ಸೀರಿಯಲ್ ಮೇಕಿಂಗ್ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಮ್ರತಾ ಗೌಡ ಐದು ವರ್ಷದ ಹಿಂದೆ ಎಂದ ಕ್ಯಾಪ್ಶನ್ ಕೂಡಾ ಕೊಟ್ಟಿದ್ದಾರೆ.

ನಾಗಲೋಕದಲ್ಲಿ ದುಷ್ಟರ ಬಲೆಗೆ ಸಿಕ್ಕು ಸಾವನ್ನಪ್ಪಿದ ನಾಗರಾಜ, ಪುನರ್ಜನ್ಮ ಪಡೆದು ಭೂಮಿಗೆ ಮರಳುತ್ತಾನೆ. ಹಾಗೇ ಭೂಮಿಗೆ ಮರಳಿದ ನಾಗನನ್ನು ಹುಡುಕುವ ನಾಗಿಣಿಯ ಪಾತ್ರಕ್ಕೆ ಜೀವ ತುಂಬಿದ್ದರು ನಮ್ರತಾ ಗೌಡ ನಟಿಸಿದ್ದರು. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಈಕೆ ನಂತರ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದರು. ತಮ್ಮ ನಡೆ, ನುಡಿ, ಆಟಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ಈಕೆ 105 ನೇ ದಿನಕ್ಕೆ ಮನೆಯಿಂದ ಹೊರಬಿದ್ದಿದ್ದರು.

ಇನ್ನು ನಮ್ರತಾ ಗೌಡ ಅವರ ನಟನಾ ಜರ್ನಿ ಶುರುವಾಗಿದ್ದು ಬಾಲನಟಿಯಾಗಿ ಎಂಬ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಬಿ.ಸುರೇಶ್ ನಿರ್ದೇಶನದ 'ನಾಕುತಂತಿ' ಧಾರಾವಾಹಿಯಲ್ಲಿ ನಟಿಸಿದ್ದ ನಮ್ರತಾ 'ಎಕ್ಸ್ ಕ್ಯೂಸ್ ಮೀ', 'ಮಿಲನ', 'ತುತ್ತೂರಿ' ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 'ವಾತ್ಸಲ್ಯ', 'ಚೆಲುವಿ', 'ಸಿಲ್ಲಿ ಲಲ್ಲಿ', 'ಅಪಾರ್ಟ್ ಮೆಂಟ್' ಧಾರಾವಾಹಿಗಳಲ್ಲಿ ನಟಿಸಿರುವ ನಮ್ರತಾ ಗೌಡ ಮುಂದೆ ಓದಿನ ಸಲುವಾಗಿ ನಟನೆಗೆ ವಿದಾಯ ಹೇಳಿದರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕಾಶದೀಪ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ನಮ್ರತಾ ಗೌಡ ಮನೆಕೆಲಸದ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಮುಂದೆ 'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕ ಮಹೇಶನ ಪ್ರೇಯಸಿ ಹಿಮಾ ಆಗಿ ಕಾಣಿಸಿಕೊಂಡ ಈಕೆ ಆ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು.

ಇನ್ನು ನಟನೆಯ ಹೊರತಾಗಿ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ಬೆಡಗಿ ಈಕೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋವಿನಲ್ಲಿ ಭಾಗವಹಿಸಿರುವ ಈಕೆ ಪ್ರತಿವಾರವೂ ತಮ್ಮ ನೃತ್ಯದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದರ ಜೊತೆಗೆ ಕಿಶನ್ ಬಿಳಗಲಿ ಅವರೊಂದಿಗೆ ಸೇರಿ ಒಂದಷ್ಟು ನೃತ್ಯಗಳನ್ನು ಮಾಡಿರುವ ಈಕೆ ಇನ್ ಸ್ಟಾಗ್ರಾಂನಲ್ಲಿ ಅದನ್ನು ಪೋಸ್ಟ್ ಮಾಡಿದ್ದು ಈಕೆಯ ನೃತ್ಯ ಕಂಡು ನೆಟ್ಟಿಗರು ಮನ ಸೋತಿದ್ದೂ ಇದೆ.

More from Filmibeat

English summary
Actress Namratha shared a post about Naagini 2 five years completion
Read more about: actress serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X