Namratha Gowda: ಕಲಾವಿದರ ಹಣಕಾಸು ಸ್ಥಿತಿಯ ಬಗ್ಗೆ ಮಾತನಾಡಿದ ನಟಿ ನಮೃತಾ ಗೌಡ!

By ಅನಿತಾ ಬನಾರಿ

ನಟಿ ನಮೃತಾ ಗೌಡ ಕಿರುತೆರೆ ಪ್ರೇಕ್ಷಕರಿಗಂತೂ ಚೆನ್ನಾಗಿ ಪರಿಚಯ. 'ಪುಟ್ಟಗೌರಿ ಮದುವೆ' ಧಾರಾವಾಹಿಯ ಹಿಮಾ ಹಾಗೂ 'ನಾಗಿಣಿ' ಧಾರಾವಾಹಿಯ ಶಿವಾನಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದ ಬೆಡಗಿ ಈಕೆ.

ಇತ್ತೀಚೆಗೆ ನಡೆದ ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಭಾಗವಹಿಸಿ ಇನ್ನಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ ನಟಿ ನಮೃತಾ ಗೌಡ. ಬಿಗ್ ಬಾಸ್‌ನಿಂದ ಹೊರಬಂದ ನಂತರ ನಮೃತಾ ಗೌಡ ಅವರ ಫೇಮ್ ಇನ್ನಷ್ಟು ಹೆಚ್ಚಿದ್ದು, ಆಗಾಗ ಇಂಟರ್‌ವ್ಯೂಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

Actress Namratha Gowda spoke about the financial status of an artists

ಅಂದಹಾಗೆ ನಟಿ ನಮೃತಾ ಗೌಡ ಅವರು ಇತ್ತೀಚೆಗೆ ರಾಪಿಡ್ ರಶ್ಮಿ ಅವರೊಂದಿಗಿನ ಜಸ್ಟ್ ಕ್ಯೂರಿಯಸ್ ಎಂಬ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದು ಕಲಾವಿದರ ಹಣಕಾಸು ಸ್ಥಿತಿಯ ಬಗ್ಗೆ ಒಂದಷ್ಟು ಮಾಹಿತಿಯನ್ನು ಹೊರ ಹಾಕಿದ್ದಾರೆ.

ಕಲಾವಿದರು ಎಂದ ಮೇಲೆ ಒಮ್ಮೊಮ್ಮೆ ಪ್ರಾಜೆಕ್ಟ್‌ಗಳು ಇದ್ದಾಗ ಹಣ ಬರುತ್ತಿರುತ್ತದೆ. ಅದೇ ರೀತಿ ಕೆಲವೊಮ್ಮೆ ಪ್ರಾಜೆಕ್ಟ್‌ಗಳು ಇಲ್ಲದಿದ್ದಾಗ ಕೈ ಖಾಲಿ ಇರುತ್ತದೆ. ಇದೇ ಕಾರಣಕ್ಕೆ ಬ್ಯಾಂಕುಗಳು ಕಲಾವಿದರಿಗೆ ಸಾಲ ಕೊಡುವುದಿಲ್ಲವಂತೆ. ಈ ವಿಚಾರವನ್ನು ನಟಿನ ನಮೃತಾ ಗೌಡ ಅವರು ತಮ್ಮ ಮನೆಗೆ ಸಾಲ ಪಡೆಯುವ ಸಂದರ್ಭದಲ್ಲಿ ಅರಿತರಂತೆ.

ತಾವೇ ದುಡಿದ ಹಣದಲ್ಲಿ ಸ್ವಂತ ಮನೆ ಒಂದನ್ನು ಖರೀದಿಸಿದ್ದು, ಆ ಮನೆಗೆ ಒಂದಷ್ಟು ಸಾಲ ಮಾಡಬೇಕು ಎಂಬ ಯೋಚನೆ ಬಂದಾಗ ಹಲವಾರು ಬ್ಯಾಂಕ್‌ಗಳನ್ನು ಅಲೆದಿದ್ದಾರಂತೆ. ಆದರೆ ಆಕೆ ಕಲಾವಿದೆ ಆದ್ದರಿಂದ ಇತರೆ ವೃತ್ತಿಯಂತೆ ಸದಾ ಫಿಕ್ಸೆಡ್ ಸಂಬಳ ಬರುವುದಿಲ್ಲ ಎಂಬ ಕಾರಣಕ್ಕೆ ಹಲವಾರು ಬ್ಯಾಂಕ್ ಗಳು ಇವರಿಗೆ ಸಾಲ ಕೊಡುಲು ಒಪ್ಪಲಿಲ್ಲವಂತೆ.

ನಮೃತಾ ಗೌಡ ಅವರು ನಟನಾ ಜಗತ್ತಿನ ಈ ಕಹಿ ಸತ್ಯವನ್ನು ಹೊರಹಾಕಿದ್ದಾರೆ. ನಟಿ ನಮೃತಾ ಗೌಡ ಅವರಿಗಿಂತ ಮೊದಲು ಹಲವಾರು ನಟ ನಟಿಯರು ಕಲಾವಿದರು ಈ ವಿಚಾರವಾಗಿ ಮಾತನಾಡಿದ್ದಾರೆ.

ಕಲಾವಿದರು ಎಂದ ಮಾತ್ರಕ್ಕೆ ಟಿವಿಯಲ್ಲಿ ಪ್ರತಿದಿನ ಕಾಣಿಸಿಕೊಳ್ಳುತ್ತಾರೆ ಎಂದಾಗ ಪ್ರೇಕ್ಷಕರು ನೋಡುಗರು ಅವರನ್ನು ಶ್ರೀಮಂತರ ಎಂದೇ ಭಾವಿಸುತ್ತಾರೆ. ಆದರೆ ಕಲಾವಿದರಿಗೂ ಅವರದ್ದೇ ಆದ ಸಂಕಷ್ಟಗಳು ಇರುತ್ತವೆ. ಅದರಲ್ಲೂ ಕೈಯಲ್ಲಿ ಯಾವುದೇ ಪ್ರಾಜೆಕ್ಟ್ ಗಳಿಲ್ಲದಾಗ ಏನೂ ದುಡಿಮೆ ಇಲ್ಲದೆ ಮತ್ತಷ್ಟು ಕಷ್ಟಗಳು ಎದುರಾಗುತ್ತವೆ. ಜೊತೆಗೆ ಬ್ಯಾಂಕುಗಳು ಕೂಡ ಇವರ ವೃತ್ತಿ ಹಾಗು ಸಂಬಳಕ್ಕೆ ಯಾವುದೇ ರೀತಿಯ ನಿಖರ ಸೋರ್ಸ್ ಇಲ್ಲದ ಕಾರಣ ಸಾಲವನ್ನು ಕೊಡಲು ಮುಂದಾಗುವುದಿಲ್ಲವಂತೆ.

ಈ ಕಟು ಸತ್ಯವನ್ನು ಮಾತನಾಡಿರುವ ನಟಿ ನಮೃತಾ ಗೌಡ ಅವರು ಕಲಾವಿದರ ಜೀವನದ ಸಂಕಷ್ಟದ ಒಂದು ಚಿತ್ರಣವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. "ಕಲಾವಿದರು ಟಿವಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಅವರ ಬಳಿ ಸದಾ ಹಣವಿರುತ್ತದೆ ಎಂದಲ್ಲ. ಕೆಲವೊಮ್ಮೆ ತಿಂಗಳಲ್ಲಿ 15 ದಿನಗಳ ಕಾಲ ಮಾತ್ರ ಶೂಟಿಂಗ್ ಇರುತ್ತದೆ. ಉಳಿದ 15 ದಿನಗಳ ಕಾಲ ಏನು ಕೆಲಸವಿಲ್ಲದೆ ಮನೆಯಲ್ಲಿ ಕೂರುವ ಸ್ಥಿತಿ ಆಗಿರುತ್ತದೆ. ಹೀಗೆಲ್ಲ ಇರುವಾಗ ಕಲಾವಿದರಿಗೂ ಹಲವಾರು ಹಣಕಾಸು ಸಂಕಷ್ಟಗಳು ಎದುರಾಗುತ್ತವೆ" ಎಂದು ನಟಿ ನಮೃತ ಗೌಡ ಅವರು ಬಹಳ ಮುಕ್ತವಾಗಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Do you know what Namratha Gowda said about the difficulties of artists?|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X