ಮೈಸೂರ್ ಸಿಲ್ಕ್ ಸೀರೆ ಧರಿಸಿ ಮದುಮಗಳಂತೆ ಫೋಸ್ ಕೊಟ್ಟ ನಮ್ರತಾ ಗೌಡ, ಅಭಿಮಾನಿಗಳು ಹೇಳಿದ್ದೇನು?
ನಮ್ರತಾ ಗೌಡ ಇತ್ತೀಚಿಗಷ್ಟೇ ಬಹಳ ಸುದ್ದಿಯಲ್ಲಿ ಇದ್ದಾರೆ. ನಾಗಿಣಿ ಸೀರಿಯಲ್ 2 ಮೂಲಕ ಎಲ್ಲರ ಮನೆ ಮಾತಾಗಿದ್ದ ನಟಿ ನಮ್ರತಾ ಗೌಡ ತಾನು ಕಟ್ಟಿಸಿದ ಮನೆಯ ಗೃಹ ಪ್ರವೇಶ ಮಾಡಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಧಾರಾವಾಹಿಯಿಂದ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದ ಅವರು, ಇದೀಗ ಪಿಂಗ್ ಮೈಸೂರು ಸಿಲ್ಕ್ , ಹಸಿರು ಬಣ್ಣದ ಕುಪ್ಪಸ ಧರಿಸಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ.
ಸೀರೆಯಲ್ಲಿ ನಮ್ರತಾ ಗೌಡ ಥೇಟ್ ಮದುಮಗಳ ಹಾಗೆ ಕಾಣುತ್ತಾ ಇದ್ದಾರೆ. ಅವರನ್ನು ನೋಡಿದ ಅಭಿಮಾನಿಗಳು ಬಹಳ ಸಂತಸದಿಂದ ಕಾಮೆಂಟ್ ಮಾಡ್ತಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಅಷ್ಟರ ಮಟ್ಟಿಗೆ ನಮ್ರತಾ ಸೀರೆಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ನಮ್ರತಾರನ್ನು ಹಾಡಿ ಹೊಗಳಿದ್ದಾರೆ. ಹಲವು ಧಾರಾವಾಹಿಗಳಲ್ಲಿ ಮಿಂಚಿದ ನಟಿಯು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇದರಿಂದ ಅವರ ಅಭಿಮಾನಿಗಳು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ.

ನಮ್ರತಾ ಗೌಡ ಟ್ರೆಡಿಷನಲ್ ಲುಕ್‌ನಲ್ಲಿ ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಲೈಕ್ ಮಾಡಿ ತನ್ನ ಖುಷಿಯನ್ನು ಹಂಚಿಕೊಂಡಿದ್ದಾರೆ. ಇನ್ನೂ ಫೋಟೋಶೂಟ್ ಮಾಡಿಸಿಕೊಂಡ ನಮ್ರತಾ ಗೌಡ ಕೊನೆಗೆ ಮೈಸೂರು ರೇಷ್ಮೆ ಸೀರೆಗಳ ಮೇಲೆ ಕೊನೆಯಿಲ್ಲದ ಪ್ರೀತಿ ಎಂದು ಬರೆದುಕೊಂಡಿದ್ದಾರೆ.
ಸೀರೆಯಲ್ಲಿ ಮಿಂಚಿದ ನಮ್ರತಾ ಗೌಡ
ಮಾಡರ್ನ್ ಆಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದ, ಬಿಕಿನಿ ಫೋಟೋ ಹಂಚಿಕೊಂಡು ಟ್ರೋಲ್‌ಗೆ ಒಳಗಾಗಿದ್ದ ಅವರು ಹಲವಾರು ದಿನಗಳಿಂದ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಬಹಳ ಖುಷಿ ನೀಡಿದೆ. ಮೈಸೂರು ಸಿಲ್ಕ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ನಮ್ರತಾ. ಸಿಂಪಲ್ ಆಗಿ ಮದುವಣಗಿತ್ತಿಯ ಹಾಗೆ ಸಿಂಗಾರಗೊಂಡಿದ್ದಾರೆ 'ನಾಗಿಣಿ' .
ನಮ್ರತಾ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಫೋಟೋ ನೋಡಿದ ನಮ್ರತಾ ಗೌಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸೀರೆಯುಟ್ಟ ಇವರ ಫೋಟೋಗಳಿಗೆ ಲೈಕ್ಗಳ ಸುರಿಮಳೆಗೈದಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಅದ್ಭುತವಾಗಿ ನಟನೆ ಮಾಡಿ ನೋಡುಗರನ್ನು ಸೆಳೆದಿದ್ದರು. ಈ ಹಿಂದೆ ನಮ್ರತಾ ಬಿಕಿನಿಯಲ್ಲಿ ಫೋಟೋ ತೆಗೆಸಿಕೊಂಡಿದ್ದರು ಆ ಫೋಟೋಗೆ ಸಾಕಷ್ಟು ಕಾಮೆಂಟ್ ಗಳು ಬಂದಿದ್ದವು. ಜೊತೆಗೆ ಟ್ರೋಲ್‌ಗೂ ಒಳಗಾಗಿ ಕಾಮೆಂಟ್ ಬಾಕ್ಸ್ ಬ್ಲಾಕ್ ಮಾಡಿಕೊಂಡಿದ್ದರು.

ಬಿಕಿನಿ ಫೋಟೋಗಳಿಂದಾಗಿ ಅಭಿಮಾನಿಗಳಿಗೆ ನಮ್ರತಾ ಮೇಲೆ ಬೇಸರ ಮೂಡಿತ್ತು. ಆದರೆ ಈಗ ನಮ್ರತಾರನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ನೋಡಿದ ಅಭಿಮಾನಿಗಳು ಬಹಳಷ್ಟು ಖುಷಿ ಪಟ್ಟಿದ್ದಾರೆ. ನಮ್ರತಾ ಮೊದಲು ಪುಟ್ಟ ಗೌರಿ ಮದುವೆ ಮೂಲಕ ಕಿರುತೆರೆಗೆ ಕಾಲಿಟ್ಟರು. ಆ ಧಾರಾವಾಹಿಯಲ್ಲಿ ನಟನೆ ಬಳಿಕ ಅವರಿಗೆ ಸಾಕಷ್ಟು ಧಾರಾವಾಹಿಯಲ್ಲಿ ಅಭಿನಯ ಮಾಡಲು ಅವಕಾಶ ಒದಗಿ ಬಂದಿತ್ತು.


Click it and Unblock the Notifications











