ಊರ್ಮಿಳಾ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಲಿದ್ದಾರೆ ಗೌರಿಪುರದ ಗಯ್ಯಾಳಿ
ಕನ್ನಡದಲ್ಲಿ ಸದ್ಯ ಬ್ಯುಸಿಯಾಗಿರುವ ನಟಿಯರಲ್ಲಿ ನವ್ಯಾ ನಾರಾಯಣಗೌಡ ಕೂಡ ಒಬ್ಬರು. ಇದೀಗ 'ಗೌರಿಪುರದ ಗಯ್ಯಾಳಿಗಳು' ಮತ್ತು ತೆಲುಗಿನ 'ಅನು ಅನೆ ನೇನು'ನಲ್ಲಿ ಸಕ್ರಿಯರಾಗಿರುವ ನಟಿ ತಮ್ಮ ಪಾಕೆಟ್‌ಗೆ ಹೊಸತೊಂದು ಸೀರಿಯಲ್ ಅನ್ನು ಸೇರಿಸಿಕೊಂಡಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ'ದಲ್ಲಿ ಹೊಸ ಪಾತ್ರದ ಸೇರ್ಪಡೆಯಾಗಿದ್ದು, ಇದರಲ್ಲಿ ನವ್ಯಾ ನಾರಾಯಣ ಗೌಡ ಅಭಿನಯಿಸಲಿದ್ದಾರೆ.

ಊರ್ಮಿಳಾ ಅವತಾರದಲ್ಲಿ ಎಂಟ್ರಿ
ದಿನನಿತ್ಯ ಸಾವಿರಾರು ಜನ ವೀಕ್ಷಿಸುವ ಈ ಧಾರಾವಾಹಿಯಲ್ಲಿ ಯುವ ಹಳ್ಳಿ ಸುಂದರಿಯ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ. 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಚಿತ್ರದಲ್ಲಿ ನವ್ಯಾ ಅವರು 'ಊರ್ಮಿಳಾ' ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಇನ್ನೇನು ಮುಂಬರುವ ಸಂಚಿಕೆಯಲ್ಲಿ ನಟಿ ಊರ್ಮಿಳಾ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಅವರು ಈಗಾಗಲೇ ತಂಡವನ್ನು ಸೇರಿಕೊಂಡಿದ್ದು, ಹಲವು ಎಪಿಸೋಡ್‌ಗಳ ಶೂಟಿಂಗ್ ಅನ್ನೂ ಮುಗಿಸಿದ್ದಾರೆ. ಇವರ ಪ್ರವೇಶವು ಧಾರಾವಾಹಿಗೆ ಅಗತ್ಯ ಇರುವ ಕೆಲವು ಪ್ರಮುಖ ಘಟನೆಗಳನ್ನು ಪರಿಚಯಿಸಲಿದೆ ಮತ್ತು ಇದು ಸಂತ ಸಿದ್ಧಲಿಂಗೇಶ್ವರರು ಗ್ರಾಮಸ್ಥರ ಕಲ್ಯಾಣಕ್ಕಾಗಿ ಮಾತ್ರ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗುವಂತೆ ಮಾಡಲಿದೆಯಂತೆ.

ಶ್ರೀ ಸಿದ್ಧಲಿಂಗೇಶ್ವರ ಜೀವನಾಧಾರಿತ ಧಾರಾವಾಹಿ
ಶೈವ ಧರ್ಮ ನಿಷ್ಠರಾದ ಪೂಜ್ಯ ಶರಣ ಸಂತ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಅವರ ಜೀವನವನ್ನಾಧರಿಸಿ ಈ ಧಾರಾವಾಹಿಯನ್ನು ನಿರ್ಮಿಸಲಾಗಿದೆ. ಮುರುಗಮಠದ ಮುಖ್ಯಸ್ಥರಾಗಿದ್ದ ಮತ್ತು ಅನೇಕ ಶಿಷ್ಯರನ್ನು ಹೊಂದಿದ್ದ ಅವರ ಜೀವನ ಇಂದಿಗೂ ಹಲವರಿಗೆ ಸ್ಪೂರ್ತಿದಾಯಕವಾಗಿದೆ.
ನವೀನ್ ಕೃಷ್ಣ ನಿರ್ದೇಶನದ ಈ ಧಾರಾವಾಹಿಯಲ್ಲಿ ಹರೀಶ್ ರಾಜ್, ವಿನಯ್ ಗೌಡ, ವಲ್ಲಭ ಸೂರಿ, ನಯನಾ, ಹರ್ಷಲಾ ಹನಿ, ಜ್ಯೋತಿ ರೈ, ಜ್ಯೋತಿ ಕಿರಣ್ ಮತ್ತು ಅನೇಕರು ತಾರಾಗಣದಲ್ಲಿದ್ದಾರೆ. ಈಗ ಈ ಗುಂಪಿಗೆ ನವ್ಯನಾರಾಯಣಗೌಡ ಸೇರಿಕೊಳ್ಳುತ್ತಿರುವುದು ಸೀರಿಯಲ್ ಗೆ ಇನ್ನಷ್ಟು ಹುರುಪನ್ನು ತುಂಬಲಿದೆ.


Click it and Unblock the Notifications











