ಗಿಣಿರಾಮ ನಟಿ ನಯನಾ ನಾಗರಾಜ್ ಈಗ ಒಂಟಿ ಅಲ್ಲ ; ಕೈ ಹಿಡಿಯುವ ಹುಡುಗ ಯಾರು ಗೊತ್ತಾ ..?

By ಪ್ರಿಯಾ ದೊರೆ

ಗಿಣಿರಾಮ ಧಾರಾವಾಹಿಯಲ್ಲಿ ಮಹತಿ ಪಾತ್ರದ ಮೂಲಕ ಜನಪ್ರಿಯತೆಯನ್ನು ಪಡೆದ ನಟಿ ನಯನಾ ನಾಗರಾಜ್ ಸದ್ಯ ಜೀವನದಲ್ಲಿ ಬಡ್ತಿ ಪಡೆದಿದ್ದಾರೆ. ಹಾಡು, ನೃತ್ಯ, ನಿರೂಪಣೆ, ನಟನೆ ಯಾವುದರಲ್ಲೂ ಹಿಂದೆ ಸರಿಯದ ನಟಿ ನಯನಾ ನಾಗರಾಜ್ ಅವರ ಕುಟುಂಬದಲ್ಲಿ ಸಂಭ್ರಮ ಡಬಲ್ ಆಗಿದೆ. ಬದುಕಿನಲ್ಲಿ ಅಪ್ ಗ್ರೇಡ್ ಪಡೆದ ನಟಿ ನಯನಾ ಅವರು ಸೈಲೆಂಟ್ ಆಗಿಯೇ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡು ಸಂತಸ ಹಂಚಿಕೊಂಡಿದ್ದಾರೆ.

ಹೊಸ ಅಪ್ ಡೇಟ್ ಕೊಟ್ಟ ನಟಿ

ಮೊಲದ ರೀತಿಯಲ್ಲಿ ಮುದ್ದಾದ ಎರಡು ಹಲ್ಲುಗಳನ್ನು ಹೊಂದಿದ್ದ ನಯನಾ ಅವರನ್ನು ಹೆಚ್ಚು ಮಂದಿ ಗುರುತಿಸುತ್ತಿದ್ದದ್ದೇ ಅವರ ಹಲ್ಲುಗಳಿಂದ. ಆದರೆ 2023 ರ ರಲ್ಲೇ ಆ ಹಲ್ಲುಗಳಿಗೆ ಗುಡ್ ಬೈ ಹೇಳಿದ್ದರು. ತಮ್ಮ ಹಲ್ಲುಗಳಿಗೆ ನಯನಾ ಹೊಸ ರೂಪವನ್ನ ಕೊಟ್ಟಿದ್ದರು. ನಯನಾ ಅವರ ಮೊದಲ ಲುಕ್ ಗೂ ಈಗಿನ ಲುಕ್ ಗೂ ವ್ಯತ್ಯಾಸವಿದ್ದು, ಈಗಲೂ ನಯನಾ ಅವರು ಮುದ್ದಾಗಿ ಕಾಣುತ್ತಿದ್ದಾರೆ.

Actress nayana nagaraj got engaged

ಜಂಟಿಯಾದ ಒಂಟಿ ನಯನಾ..!

ಆದರೆ, ಇನ್ಮುಂದೆ ನಟಿ ನಯನಾ ಅವರು ತಮ್ಮ ಜೀವನದಲ್ಲಿ ಬಹಳ ಮುಖ್ಯವಾದ ವ್ಯಕ್ತಿಗೆ ಸ್ಪೆಷಲ್ ಸ್ಥಾನವನ್ನು ನೀಡಲಿದ್ದಾರೆ. ಒಂಟಿ ಜೀವನಕ್ಕೆ ಬ್ರೇಕ್ ಹಾಕಿದ ನಟಿ ನಯನಾ ಅವರು ಎಂಗೇಜ್ ಆಗಿದ್ದಾರೆ. ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ನಯನಾ ಅವರು ಸಿಂಪಲ್ ಎಂಗೇಜ್ ಮೆಂಟ್ ನ ಫೊಟೋ ಹಾಗೂ ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಪ್ ಗ್ರೇಡ್ ಇನ್ ಲೈಫ್ ಅಟೆಂಷನ್ ಎಂದು ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಸುಹಾಸ್ ಶಿವಣ್ಣ ಎಂಬುವರಿಗೆ ನಯನಾ ಅವರು ಉಂಗುರ ತೊಡಿಸಿದ್ದಾರೆ. ಮನೆಯಲ್ಲೇ ಕುಟುಂಬದವರೊಂದಿಗೆ ಎಂಗೇಜ್ ಮೆಂಟ್ ಕಾರ್ಯಕ್ರಮವನ್ನು ಸಿಂಪಲ್ ಆಗಿ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೋಗಳನ್ನು ನೋಡಿದವರೆಲ್ಲಾ ಶಾಕ್ ಆಗಿದ್ದು, ಖುಷಿಯನ್ನೂ ಪಟ್ಟಿದ್ದಾರೆ. ನಯನಾ ಅವರಿಗೆ ಅಭಿಮಾನಿಗಳು, ಸ್ನೇಹಿತರು, ಸಹ ಕಲಾವಿದರು ವಿಷ್ ಮಾಡಿದ್ದು ಶುಭ ಹಾರೈಸಿದ್ದಾರೆ.

ನಯನಾರದ್ದು ಏಳು-ಬೀಳಿನ ಬದುಕು..!

ನಟಿಸುವ ಆಸೆಯಿಂದ ನಯನಾ ಅವರು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಭರತನಾಟ್ಯ ಕಲಾವಿದೆಯಾಗಿರುವ ನಯನಾ ಅವರು ಗಾಯಕಿಯೂ ಹೌದು. ಕೆಲ ಕಾರ್ಯಕ್ರಮಗಳಲ್ಲಿ ಹಾಡು ಹಾಡುತ್ತಾರೆ. ಜೊತೆಗೆ ನಿರೂಪಣೆಯನ್ನೂ ಕೂಡ ಮಾಡುತ್ತಾರೆ. ನಯನಾ ನಟನೆಗೆ ಬರುವ ಮುನ್ನ ಜೀವನದಲ್ಲಿ ಬಹಳಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಕಷ್ಟಪಟ್ಟಿದ್ದಾರೆ. ಒಮ್ಮೆ ವರ್ಟಿಕಲ್ ಗಾರ್ಡನ್ ಮಾಡುವ ಸಲುವಾಗಿ ಒಂದು ಲಕ್ಷ ಇನ್ವೆಸ್ಟ್ ಮಾಡಿದ್ದರಂತೆ. ಆಗ ಮೋಸವಾಗಿದ್ದರಿಂದ ಅವರ ತಂದೆ ಈ ಕೆಲಸವನ್ನು ಕೈ ಬಿಡು ಎಂದಿದ್ದರಂತೆ.

Actress nayana nagaraj got engaged

ಯಾವಾಗ ನಯನಾ ಅವರ ಮದುವೆ..?

ಇನ್ನು ನಯನಾ ಅವರು ಶಾಂತಂ ಪಾಪಂ, ಪಾಪ ಪಾಂಡು ಹಾಗೂ ಗಿಣಿರಾಮ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪಾಪ ಪಾಂಡು ಹಾಗೂ ಗಿಣಿರಾಮ ಮೂಲಕ ಚಿರಪರಿಚಿತರಾಗಿದ್ದಾರೆ. ಸದ್ಯ ನಟನೆಯಿಂದ ಕೊಂಚ ಬ್ರೇಕ್ ಪಡೆದಿದ್ದ ನಯನಾ ಅವರು ತಮ್ಮ ಅಂದವನ್ನು ಹೆಚ್ಚಿಸಿಕೊಂಡಿದ್ದರು. ನಯನಾ ಅವರಲ್ಲಿನ ಈ ಬದಲಾವಣೆ ಅವರಿಗೆ ಬಣ್ಣದ ಲೋಕದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎನ್ನುವಾಗಲೇ ಈಗ ಒಂಟಿ ಬದುಕಿಗೆ ಗುಡ್ ಬೈ ಹೇಳಿ ಜಂಟಿ ಆಗಲು ಮುಂದಾಗಿದ್ದಾರೆ. ಮದುವೆಯ ಯಾವಾಗ ಅನ್ನುವುದಕ್ಕೆ ಉತ್ತರ ಸದ್ಯದಲ್ಲಿ ಸಿಗಲಿದೆ.

More from Filmibeat

English summary
actress nayana nagaraj new life. Engagement with suhas shivanna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X