'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಗೆದ್ದಿದ್ದ ನಯನಾ ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ ಗೊತ್ತಾ?

By ಅನಿತಾ ಬನಾರಿ

ಹೌದು, ದಶಕದ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್ ಒಂದರ ಸ್ಪರ್ಧಿಯಾಗಿ ಮಿಂಚಿದ ಪ್ಯಾಟೆ ಹುಡುಗಿ ನಯನಾ ಪುಟ್ಟಸ್ವಾಮಿಯವರು ಇದೀಗ ಅಮೆರಿಕದಲ್ಲಿ ನೆಲೆಸಿರವುದು ಎಲ್ಲರಿಗೂ ತಿಳಿದಿರುವ ವಿಚಾರ.

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಎಂಬ ವಿಭಿನ್ನ ಕಾರ್ಯಕ್ರಮವನ್ನು ಹೊರತಂದಾಗ ಸೀಸನ್ ಒಂದರಲ್ಲಿ ಈ ರಿಯಾಲಿಟಿ ಶೋ ಅನ್ನು ಗೆದ್ದ ಖ್ಯಾತಿ ನಯನಾ ಪುಟ್ಟಸ್ವಾಮಿಗೆ ಸೇರುತ್ತದೆ.

nayana-of-pyate-hudgir-halli-lifu

ರಿಯಾಲಿಟಿ ಶೋನಲ್ಲಿ ತಮಗೆ ಸಿಕ್ಕ ಬರೋಬ್ಬರಿ 20 ಲಕ್ಷ ಹಣವನ್ನು ತಮ್ಮ ಶಾಲೆಗೆ ನೀಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದರು. ತಮ್ಮ ಸಿಂಪಲ್ ಡೇರಿಂಗ್ ಹಾಗೂ ಹಾರ್ಡ್ ವರ್ಕ್‌ನಿಂದ ಈ ರಿಯಾಲಿಟಿ ಶೋ ಅನ್ನು ಗೆದ್ದಿದ್ದಲ್ಲದೆ, ಕನ್ನಡ ವೀಕ್ಷಕರ ಮನವನ್ನು ಗೆದ್ದಿದ್ದರು. ಅದಾದ ಮೇಲೆ ಇವರಿಗೆ ನಟನೆಗೆ ಬಹಳಷ್ಟು ಆಫರ್ ಬಂದಿತ್ತು. 'ಚಿಟ್ಟೆ ಹೆಜ್ಜೆ' ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದರು.

ಬಳಿಕ ಈ ಬಬ್ಲಿ ಕ್ವೀನ್ ನಯನಾ ನಟನೆಯಿಂದ ಮರೆಯಾದಗಿದ್ದರು. ಅವರ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಏನು ಎಂದು ಯಾರಿಗೂ ತಿಳಿಯಲಿಲ್ಲ. ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್‌ಗಳನ್ನು ಹಾಕಿಕೊಂಡಿರುವ ನಯನಾ ತಮ್ಮ ವೃತ್ತಿ ಜೀವನದ ಬಗ್ಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ನಟಿ ನಯನಾ ಪುಟ್ಟಸ್ವಾಮಿಯವರು ಇದೀಗ ಅಲ್ಲಿನ ಶಾಲೆ ಒಂದರಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ಈ ವಿಚಾರವನ್ನು ತಾವೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫಾಲೋವರ್ಸ್ ಹಾಗೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಕಮೆಂಟ್ ಸೆಕ್ಷನ್‌ನಲ್ಲಿ ಶುಭ ಹಾರೈಕೆ ಹಾಗೂ ಮೆಚ್ಚುಗೆಗಳ ಸುರಿಮಳೆಯ ಸುರಿದಿದೆ. "ನೀವೇ ನಿಜವಾದ ಕನ್ನಡತಿ" ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಅಂದ ಹಾಗೆ ತಮ್ಮ ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಜೊತೆಗೆ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡಿರುವ ನಟಿ ನಯನಾ ಪುಟ್ಟಸ್ವಾಮಿಯವರು ಆ ವಿಶೇಷ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಈ ಹೊಸ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ.

"ನಾನು ಅಮೆರಿಕದ ಶಾಲೆ ಒಂದರಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ನನ್ನ ಕೆಲಸ ಆರಂಭವಾಗಿ ಮೂರು ತಿಂಗಳು ಕಳೆದಿದೆ. ಲೀಡ್ ಟೀಚರ್ ಆಗಿ ಇಲ್ಲಿ ಕೆಲಸ ಆರಂಭಿಸಿದ್ದು ನನಗೆ ಬಹಳಷ್ಟು ಖುಷಿ ಕೊಟ್ಟಿದೆ. ಜೀವನದಲ್ಲಿ ಬಹಳಷ್ಟು ಟ್ವಿಸ್ಟ್ ಅಂಡ್ ಟರ್ನ್‌ಗಳ ನಂತರ ಇದೊಂದು ಹೊಸ ಜರ್ನಿ ಆರಂಭವಾಗಿದೆ" ಎಂದಿದ್ದಾರೆ.

ಇದರ ಜೊತೆಗೆ "ನಿಮ್ಮೆಲ್ಲರ ಹಾರೈಕೆ ಪ್ರೀತಿಯಿಂದಲೇ ನಾನು ಇಷ್ಟು ಒಳ್ಳೆಯ ಜೀವನವನ್ನು ನಡೆಸಲು ಸಾಧ್ಯವಾಗಿದೆ. ಟೀಚರ್ ಆಗಿ ಬರೀ ಕಲಿಸುವುದಷ್ಟೇ ಅಲ್ಲ ಬಹಳಷ್ಟು ನಾನು ಕಲಿತಿದ್ದೇನೆ. ನನ್ನ ವಯಕ್ತಿಕ ಜೀವನ ವ್ಯಕ್ತಿತ್ವದಲ್ಲೂ ಬಹಳಷ್ಟು ಟ್ರಾನ್ಸ್ಫರ್ಮೇಶನ್ ಆಗಿದೆ ಎಲ್ಲದರ ಬಗ್ಗೆ ನನಗೆ ತೃಪ್ತಿ ಹಾಗೂ ಹೆಮ್ಮೆ ಇದೆ " ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
Actress Nayana of Pyate hudgir Halli Lifu fame is now a teacher in USA
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X