ಅಧ್ಯಾಪಕಿಯಾಗಿದ್ದವರು ನಟನೆಗೊಸ್ಕರ ಕೆಲಸ ಬಿಟ್ಟು ಬಂದ್ರು..ಈ ನಟಿ ಹಿನ್ನೆಲೆಯೇನು?
'ಪುಟ್ಟಗೌರಿ' ಮದುವೆ ಧಾರಾವಾಹಿ ಯಾರಿಗೆ ನೆನಪಿಲ್ಲ ಹೇಳಿ? ಹೆಚ್ಚು ಕಮ್ಮಿ ಹತ್ತು ವರ್ಷಗಳ ಕಾಲ ಕನ್ನಡ ಕಿರುತೆರೆ ಪ್ರಿಯರನ್ನು ರಂಜಿಸಿರುವ ಈ ಧಾರಾವಾಹಿಯಲ್ಲಿ ಹಿಮ ಪಾತ್ರಧಾರಿಯಾಗಿ ನಯನಾ ಕೆಎಂ ನಟಿಸಿದ್ದರು. ಹಿಮಾ ಗೌರಿ ಹಾಗೂ ಮಹೇಶ್ ಇಬ್ಬರ ನಡುವಿನ ವಿಲನ್ ಪಾತ್ರ. ಮೊದಲ ಅದೆಷ್ಟೋ ಎಪಿಸೋಡ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ನಯನಾ ಅವರು ನಂತರ ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಗುಳಿದರು. ಅದಾದ ಮೇಲೆ ನಮೃತಾ ಗೌಡ ಆ ಪಾತ್ರವನ್ನು ನಿಭಾಯಿಸಿದರು.
ಈಗ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿ ಎನ್ನುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಯನಾ ನಿಜ ಜೀವನದಲ್ಲಿ ತಾಯಿಯಾಗಿಯೂ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗುತ್ತಿರುವುದು ಗಮನಾರ್ಹ. ಅಂದಹಾಗೆ ಆ್ಯಕ್ಟಿಂಗ್‌ಗಿಂತ ಮೊದಲು ನಯನಾ ಕೆಎಂ ಯಾವ ಕೆಲಸ ಮಾಡುತ್ತಿದ್ದರು ಅನ್ನೋದನ್ನು ತಿಳಿದರೆ ಕಂಡಿತಾ ಆಶ್ಚರ್ಯ ಪಡುತ್ತೀರಿ..

ಅಧ್ಯಾಪಕಿ ಆಗಿದ್ದರು ನಯನಾ
ಹೌದು! ನಯನಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೊದಲು ಬೆಂಗಳೂರಿನ ಕಾಲೇಜು ಒಂದರಲ್ಲಿ ಉಪನ್ಯಾಸಕಿಯಾಗಿ ಪಾಠ ಮಾಡುತ್ತಿದ್ದರು. ಕಾಮರ್ಸ್ ಸಬ್ಜೆಕ್ಟ್ ಗಳನ್ನು ತೆಗೆದುಕೊಳ್ಳುತ್ತಿದ್ದ ಇವರು, ಎಲ್ಲಾ ಮಕ್ಕಳ ನೆಚ್ಚಿನ ಲೆಕ್ಚರರ್ ಆಗಿಯೂ ಇದ್ದರು. ಲೆಕ್ಚರರ್ ವೃತ್ತಿಯಲ್ಲಿಯೂ ಬಹಳ ಆರಾಮಾಗಿದ್ದರು. ಆದರೆ, ನಟನೆಯಲ್ಲಿ ಅವಕಾಶ ಸಿಗುತ್ತಿದ್ದಂತೆ ಮನಸ್ಸು ಬದಲಾಯಿಸಿದ್ದರು. ಅದಕ್ಕೆ ಕಾರಣ ಆಸಕ್ತಿ.
ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ ಇದ್ದ ನಯನಾ 'ಪುಟ್ಟಗೌರಿ' ಮದುವೆ ಎಂಬ ದೊಡ್ಡ ಧಾರಾಹಿಯಲ್ಲಿ ಒಂದೊಳ್ಳೆಯ ಪಾತ್ರ ಸಿಕ್ಕಾಗ ಖಂಡಿತವಾಗಿಯೂ ಬರುವುದಾಗಿ ಹೇಳಿ ತಮ್ಮ ನೆಚ್ಚಿನ ವೃತ್ತಿಯನ್ನು ಬಿಟ್ಟುಕೊಂಡು ನಟನೆಗೆ ಹಾರಿದರು. ಈ ರೀತಿ ಶುರುವಾದ ಈಕೆಯ ನಟನಾ ಜರ್ನಿಯಲ್ಲಿ 'ಸತ್ಯಂ ಶಿವಂ ಸುಂದರಂ', 'ಇಂತಿ ನಿಮ್ಮ ಆಶಾ' ಇತ್ಯಾದಿ ಧಾರಾವಾಹಿಗಳಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಬಹಳಷ್ಟು ಜನಪ್ರಿಯತೆಯನ್ನು ಕೂಡಾ ಪಡೆದುಕೊಂಡರು.

ಖಳನಾಯಕಿಯಾಗಿ ಫೇಮಸ್ಸು!
ತಮ್ಮ ಈ ಎಲ್ಲಾ ಧಾರಾವಾಹಿ ಹಾಗೂ ಪಾತ್ರಗಳಿಂದ ಸಂತೋಷ ಹಾಗೂ ಯಶಸ್ಸನ್ನು ಪಡೆದಿರುವುದಾಗಿ ನಟಿ ನಯನಾ ಹೇಳಿಕೊಂಡಿದ್ದಾರೆ. ನಯನಾ ಸದ್ಯಕ್ಕಂತೂ 'ಜೊತೆ ಜೊತೆಯಲಿ' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಮಾನ್ಸಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಇನ್ನಷ್ಟು ಖುಷಿ ತಂದಿದೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದರು.
'ಚಿಕ್ಕಮ್ಮ' ಧಾರಾವಾಹಿಯ ಮೂಲಕ ನಟನಾ ಲೋಕದ ನಂಟು ಬೆಳೆಸಿಕೊಂಡಿದ್ದ ನಯನ ಮುಂದೆ 'ಗಾಳಿಪಟ', 'ಪುಟ್ಟ ಗೌರಿ ಮದುವೆ', 'ವಸುದೈವ ಕುಟುಂಬ', 'ಕನಕ', 'ಕರ್ಪೂರದ ಗೊಂಬೆ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ತದ ನಂತರ 'ವಾರಸ್ದಾರ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಖಳನಾಯಕಿಯಾಗಿ ಕಾಣಿಸಿಕೊಂಡ ಈಕೆ ಮುಂದೆ 'ಮನೆದೇವ್ರು' ಧಾರಾವಾಹಿಯಲ್ಲಿಯೂ ಅದೇ ಪಾತ್ರದ ಮೂಲಕ ಮೋಡಿ ಮಾಡಿದರು.


Click it and Unblock the Notifications











