ಫೇಸ್‌ಬುಕ್ ಮೂಲಕ ನೀತಾ ಅಶೋಕ್ ಮೊದಲ ಅವಕಾಶ ಪಡೆದಿದ್ದೇಗೆ?

By ಪ್ರಿಯಾ ದೊರೆ

ನಟಿ ನೀತಾ ಅಶೋಕ್ ಅವರ ಬಗ್ಗೆ ಹೊಸತಾಗಿ ಏನನ್ನೂ ಹೇಳುವ ಅಗತ್ಯವಿಲ್ಲ. ಈಗಾಗಲೇ ಹಲವು ವರ್ಷಗಳಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಕಡಿಮೆ ಕಾಣಿಸಿಕೊಂಡರೂ ಎಲ್ಲರ ಮನದಲ್ಲಿ ಉಳಿದುಕೊಂಡವರೇ. ಮಾಡೆಲಿಂಗ್, ಮದುವೆ ಎಂದು ಬ್ಯುಸಿಯಾಗಿದ್ದ ನಟಿ ನೀತಾ ಅಶೋಕ್ ಅವರು ಮತ್ತೆ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಪಾತ್ರ ಅಮ್ಮ. ಹಾಗಿದ್ದರೂ ಕೂಡ ನಟಿ ನೀತಾ ಅಶೋಕ್ ಅವರು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ 'ನಾ ನಿನ್ನ ಬಿಡಲಾರೆ' ಧಾರಾವಾಹಿ ಕಳೆದೆರಡು ತಿಂಗಳಿನಿಂದ ಪ್ರಸಾರವಾಗುತ್ತಿದೆ. ತಾಯಿ ಅಂಬಿಕಾ ಚಿಕ್ಕವಯಸ್ಸಿನಲ್ಲೇ ಸಾವನ್ನಪ್ಪಿತ್ತು. ಮಗಳು ಹಿತಾ ಸದಾ ಅಮ್ಮನ ಗುಂಗಿನಲ್ಲೇ ಇರುತ್ತಾಳೆ.

Actress Neetha Ashok got an acting opportunity through social media

ಇನ್ನು ಅಂಬಿಕಾಳ ಸಹೋದರಿ ದುರ್ಗಾ ಈಗ ಹಿತಾಳಿಗೆ ಹತ್ತಿರವಾಗಿದ್ದು, ಸದ್ಯ ಅಂಬಿಕಾ ಮತ್ತು ದುರ್ಗಾಳಿಗೆ ಅವರಿಬ್ಬರು ಅಕ್ಕ-ತಂಗಿಯರು ಎಂಬ ಸತ್ಯ ಗೊತ್ತಾಗಿಲ್ಲ.

ಆತ್ಮವಾಗಿರುವ ನಟಿ

ಅಂಬಿಕಾ ಸಾವನ್ನಪ್ಪಿರುವ ಕಾರಣ ಅವರು ದೆವ್ವವಾಗಿ ಓಡಾಡುತ್ತಿದ್ದಾಳೆ. ಕೇವಲ ದುರ್ಗಾ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದಾಳೆ. ಈಗ ಅಂಬಿಕಾ ಪಾತ್ರವನ್ನು ನಟಿ ನೀತಾ ಅಶೋಕ್ ಅವರು ನಿರ್ವಹಿಸುತ್ತಿದ್ದಾರೆ. ಈ ಹಿಂದೆಯೂ ನಟಿ ನೀತಾ ಅಶೋಕ್ ಅವರು 'ನಾ ನಿನ್ನ ಬಿಡಲಾರೆ' ಎಂಬ ಟೈಟಲ್‌ನ ಧಾರಾವಾಹಿಯಲ್ಲಿ ನಟಿಸಿದ್ದರು. ಇದೀಗ ಮತ್ತದೇ ಟೈಟಲ್ ಜೊತೆಗೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿರುವುದಕ್ಕೆ ಸಂತಸವನ್ನು ಕೂಡ ಹಂಚಿಕೊಂಡಿದ್ದಾರೆ.

ಸಿನಿಮಾ ಹಾಗೂ ಧಾರಾವಾಹಿ

ನಟಿ ನೀತಾ ಅಶೋಕ್ ಅವರು 'ಯಶೋದೆ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ನೀಲಾಂಬರಿ', 'ನಾ ನಿನ್ನ ಬಿಡಲಾರೆ', 'ಕಿನ್ನರಿ', 'ಒಲವಿನ ನಿಲ್ದಾಣ' ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದರು. 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ನೀತಾ ಅವರು ತಾರಿಣಿಯ ಗೆಳತಿ ಯಶೋದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯ 'ಆಶಾಯೇ' ಎಂಬ ಸರಣಿಯಲ್ಲೂ ನಟಿಸಿದ್ದರು. 'ಜಬರ್ದಸ್ತ್ ಶಂಕರ' ಎನ್ನುವ ತುಳು ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ಹಿಂದಿಯ ದೂರದರ್ಶನದಲ್ಲೂ ಪ್ರಸಾರವಾದ ಧಾರಾವಾಹಿಗಳಲ್ಲಿ ನೀತಾ ಅವರು ಅಭಿನಯಿಸಿದ್ದಾರೆ. ಮುಂಬೈನಲ್ಲಿ ಮಾಡೆಲಿಂಗ್‌ ಕ್ಷೇತ್ರದಲ್ಲಿದ್ದ ನೀತಾ 'ವಿಕ್ರಾಂತ್' ರೋಣ ಚಿತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು.

ಸೋಶಿಯಲ್ ಮೀಡಿಯಾ ಮೂಲಕ ನಟನೆ

ನೀತಾ ಅಶೋಕ್ ಹುಟ್ಟಿದ್ದು ಉಡುಪಿ ಹಾಗೂ ಕುಂದಾಪುರದ ಮಧ್ಯೆ ಇರುವ ಕೋಟಾ ಎಂಬ ಹಳ್ಳಿಯಲ್ಲಿ. ಇವರ ತಂದೆ ಅಶೋಕ್ ಬ್ಯಾಂಕ್ ಉದ್ಯೋಗಿ ಹಾಗೂ ತಾಯಿ ಗೃಹಿಣಿ. ನೀತಾ ಅವರಿಗೆ ಒಬ್ಬ ಸಹೋದರನಿದ್ದು, ಇವರು ಓದಿ ಬೆಳೆದಿದ್ದೆಲ್ಲಾ ಉಡುಪಿ, ಮಂಗಳೂರು, ದೆಹಲಿ ಹಾಗೂ ಬೆಂಗಳೂರಿನಲ್ಲಿ. ಎಂಬಿಎ ಓದಿರುವ ನೀತಾ ಅವರು ಎಂಎನ್ ಸಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಫೇಸ್ ಬುಕ್ ಮುಖಾಂತರ ನಟನೆಯ ಅವಕಾಶ ದೊರೆಯಿತು. 'ಯಶೋದ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು.

ಲವ್ ಕಮ್ ಅರೇಜ್ ಮ್ಯಾರೇಜ್

ಇನ್ನು ಮಂಡಲ ಚಿತ್ರವನ್ನು ಕೂಡ ಬಿಡಿಸುವ ನೀತಾ ಅವರು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಕಾಲೇಜ್ ದಿನಗಳಲ್ಲೇ ಗೆಳೆಯ ಸತೀಶ್ ಮೆಸ್ತಾ ಅವರನ್ನು ಪ್ರೀತಿಸುತ್ತಿದ್ದರು. ಮನೆಯಲ್ಲಿ ಒಪ್ಪಿಸಿ ಮದುವೆಯಾದರು. ಇದೀಗ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಆತ್ಮವಾಗಿ ಕಾಣಿಸಿಕೊಂಡಿದ್ದಾರೆ. ಅಕಸ್ಮಾತ್ ಆಗಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಬಣ್ಣದ ಲೋಕಕ್ಕೆ ಬಂದ ನಟಿ ನೀತಾ ಅಶೋಕ್ ಅವರು ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತಾರಂತೆ.

More from Filmibeat

English summary
Actress Neetha Ashok in Na ninna bidalare serial and her personal details;
Read more about: actress serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X