6 ವರ್ಷಗಳ ನಂತರ ಕಿರುತೆರೆಗೆ ಮರಳಿದ ನೀತಾ ಅಶೋಕ್; ನೆನಪಿದ್ದಾರಾ ಈ ನಟಿ?

By ಅನಿತಾ ಬನಾರಿ

ನೀತಾ ಅಶೋಕ್ ಎನ್ನುವುದಕ್ಕಿಂತ ಯಶೋದೆ ಎಂದರೆ ಕಿರುತೆರೆ ಪ್ರೇಕ್ಷಕರಿಗೆ ಸುಲಭವಾಗಿ ಪರಿಚಯ ಸಿಗಬಹುದು. ಹೌದು, ದಶಕಗಳ ಹಿಂದೆ ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಶೋದೆ' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಗೆದ್ದಿದ್ದ ನಟಿ ನೀತಾ ಅಶೋಕ್ ಇದೀಗ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿರೋ ಪ್ರಮುಖ ಪಾತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಆರು ವರ್ಷಗಳ ನಂತರ ಕಿರುತೆರೆ ನಟನೆಗೆ ವಾಪಸ್ ಆಗಿದ್ದಾರೆ ನಟಿ ನೀತಾ ಅಶೋಕ್.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಶೋದೆ' ಧಾರಾವಾಹಿಯಲ್ಲಿ ಯಶೋಧಾ ಪಾತ್ರದ ಮೂಲಕ ಜನಮನ ಗೆದ್ದಿದ್ದರು ಈ ನಟಿ. ಮುದ್ದು ಮುಖದ ಮುಗ್ಧ ಮನಸ್ಸಿನ ಯಶೋಧೆ ಧಾರಾವಾಹಿಯುದ್ದಕ್ಕೂ ಉಡುಪಿಯ ಗಲ್ಲಿ ಗಲ್ಲಿ ಸುತ್ತಿ ಉಡುಪಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು.

Actress Neetha Ashok returned to television after six years

ನಂತರ 'ನಾ ನಿನ್ನ ಬಿಡಲಾರೆ' ಎಂಬ ಹಾರರ್ ಧಾರವಾಹಿಯಲ್ಲಿ ನಂದಿನಿ ಪಾತ್ರದ ಮೂಲಕ ಮತ್ತೆ ಕಾಣಿಸಿಕೊಂಡಿದ್ದರು. ಅದಾದ ಮೇಲೆ 'ನೀಲಾಂಬರಿ' ಎಂಬ ಹಾರರ್ ಧಾರಾವಾಹಿಯಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ನಟಿ ನೀತಾ ಅಶೋಕ್ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.

ಕಿಚ್ಚ ಸುದೀಪ್ ಅವರ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಅಪರ್ಣಾ ಬಲ್ಲಾಳ್ ಆಲಿಯಾಸ್ ಪನ್ನಾ ಆಗಿ ಅಭಿನಯಿಸಿದ್ದಾರೆ ನೀತಾ ಅಶೋಕ್. 11ನೇ ಸೈಮ ಅವಾರ್ಡ್ಸ್ ನಲ್ಲಿ ಉತ್ತಮ ನಾಯಕ ನಟಿ ಪ್ರಶಸ್ತಿಯನ್ನು ತಮ್ಮ ಮುಡಿಗುರಿಸಿಕೊಂಡಿದ್ದಾರೆ. ಅಂದ ಹಾಗೇ ನೀತಾ ಅಶೋಕ್ ಅವರ ಹಿರಿತೆರೆ ಪಯಣ ಶುರುವಾಗಿದ್ದು ಕೋಸ್ಟಲ್‌ವುಡ್‌ನಿಂದ. ತುಳು ಸಿನಿಮಾ 'ಜಬರ್‌ದಸ್ತ್ ಶಂಕರ'ದಲ್ಲಿ ಪ್ರಮುಖ ಪಾತ್ರದಲ್ಲಿ ಈಕೆ ಕಾಣಿಸಿಕೊಂಡಿದ್ದಾರೆ.

ಪ್ರಸ್ತುತ 'ನಾ ನಿನ್ನ ಬಿಡಲಾರೆ' ಎಂಬ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟಿ ನೀತಾ ಅಶೋಕ್. ಹೌದು, ಹಾರರ್ ಧಾರಾವಾಹಿ ಆಗಿರುವ 'ನಾ ನಿನ್ನ ಬಿಡಲಾರೆ' ಕಥೆಯಲ್ಲಿ ತಾಯಿ ಪಾತ್ರದಲ್ಲಿ ನಟಿಸುತ್ತಿರುವ ನೀತಾ ಅಶೋಕ್ ಒಂದು ವಿಭಿನ್ನ ಕಥೆಯನ್ನು ಹೇಳ ಹೊರಟಿದ್ದಾರೆ.

Actress Neetha Ashok returned to television after six years

ಕರುಳ ಬಳ್ಳಿಯ ಕಾಪಾಡಲು ಹೋರಾಡೋ ಅಮ್ಮನ ಆತ್ಮಕಥೆ ನಾ ನಿನ್ನ ಬಿಡಲಾರೆ ಇದೇ ಜನವರಿ 27ರಿಂದ ಆರಂಭವಾಗಲಿದೆ. ಈಗಾಗಲೇ ಈ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು ಕಿರುತೆರೆ ಪ್ರೇಕ್ಷಕರಲ್ಲಂತೂ ಬಹಳಷ್ಟು ಕುತೂಹಲ ಕೆರಳಿಸಿದೆ. ಈ ಧಾರಾವಾಹಿಯಲ್ಲಿ ತನ್ನ ಮಗಳನ್ನು ಕಾಪಾಡುವ ತಾಯಿಯಾಗಿ ಕಾಣಿಸಿಕೊಳ್ಳುವ ಈ ನಟಿ ದೆವ್ವದ ಪಾತ್ರವನ್ನು ಮಾಡುತ್ತಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಈ ಧಾರಾವಾಹಿಯಲ್ಲಿ ನಟಿ ನೀತಾ ಅಶೋಕ್ ನಾಯಕ ನಟಿಯಾಗಿ ಕಾಣಿಸಿಕೊಂಡರೆ, ಪಾರು ಧಾರವಾಹಿ ಖ್ಯಾತಿಯ ಶರತ್ ಪದ್ಮನಾಭ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಚುಕ್ಕಿ ತಾರೆ ಧಾರಾವಾಹಿ ಖ್ಯಾತಿಯ ಬಾಲನಟಿ ಮಹಿತ ವಿ ಹಾಗೂ ನಟಿ ವೀಣಾ ಸುಂದರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿಯ ಪ್ರೋಮೋ ಕಿರುತೆರೆ ಪ್ರೇಕ್ಷಕರಲ್ಲಿ ಈಗಾಗಲೇ ಬಹಳಷ್ಟು ಕುತೂಹಲವನ್ನು ಕೆರಳಿಸಿದ್ದು ಯಾವ ರೀತಿ ತೆರೆ ಮೇಲೆ ಕಾಣಲಿದೆ ಹಾಗೂ ಪ್ರೇಕ್ಷಕರು ಇದನ್ನು ಹೇಗೆ ಮೆಚ್ಚಿಕೊಳ್ಳಲಿದ್ದಾರೆ ಎಂಬುದನ್ನು ನೋಡಬೇಕಿದೆ. ಒಟ್ಟಿನಲ್ಲಿ ಹೇಳುವುದಾದರೆ ನಟಿ ನೀತಾ ಅಶೋಕ್ ಹಲವು ವರ್ಷಗಳ ನಂತರ ಕಿರುತೆರೆಗೆ ಒಂದೊಳ್ಳೆ ಪಾತ್ರದ ಮೂಲಕ ಕಂ ಬ್ಯಾಕ್ ಮಾಡುತ್ತಿರುವುದಂತೂ ಖುಷಿಯ ವಿಚಾರವಾಗಿದೆ.

More from Filmibeat

English summary
Neetha Ashok is acting in a horror serial for the third time. Do you know which serial?
Read more about: actress serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X