ಸೀರಿಯಲ್ ಸೆಟ್‌ನಲ್ಲಿ ಬರೀ ಆಕ್ಟಿಂಗ್ ಅಲ್ಲ ಏನೆಲ್ಲಾ ಕೆಲಸ ಮಾಡ್ತಾರೆ ನೋಡಿ ಈ ನಟಿ
'ನಾ ನಿನ್ನ ಬಿಡಲಾರೆ' ಧಾರಾವಾಹಿ ಬಹಳ ಬೇಗನೇ ವೀಕ್ಷಕರ ಪಾಲಿಗೆ ಹತ್ತಿರವಾಗಿದೆ. ಅಂಬಿಕಾಳ ಅಸಹಾಯಕತೆ, ಮಾತೇ ಆಡದ ಮಗು, ಮಗಳ ಕ್ಷಮೆಗಾಗಿ ಹಂಬಲಿಸುತ್ತಿರೋ ಅಪ್ಪ, ಅಕ್ಕನ ಬರುವಿಕೆಗಾಗಿ ಕಾಯ್ತಿರೋ ತಂಗಿ, ಹುಚ್ಚನಂತಾಗಿರೋ ತಂದ, ಯಾವ್ಯಾವುದೋ ರಹಸ್ಯಗಳು ಹೀಗೆ ಒಂದಲ್ಲ ಎರಡಲ್ಲ ಹಲವು ಸಂಗತಿಗಳು ಸದ್ಯ ಧಾರಾವಾಹಿಯಲ್ಲಿ ಕುತೂಹಲವನ್ನ ಹುಟ್ಟು ಹಾಕುತ್ತವೆ.
ಈ ಧಾರಾವಾಹಿಯಲ್ಲಿ ಅಂಬಿಕಾ ಹಾಗೂ ದುರ್ಗಾಳನ್ನು ನೋಡುವುದೇ ವೀಕ್ಷಕರಿಗೆ ಖುಷಿ. ಆದರೆ ಈಗ ಸಂಕಷ್ಟದಲ್ಲಿರುವ ದುರ್ಗಾಳನ್ನ ಅಂಬಿಕಾಳೇ ಕಾಪಾಡಬೇಕಿದೆ. ಅಂಬಿಕಾ ನೋಡಿದರೆ ಆತ್ಮ. ದುರ್ಗಾ ಹಾಗೂ ಆಕೆಯ ತಂದೆ ಕಣ್ಣಿಗೆ ಬಿಟ್ಟರೆ ಬೇರೆ ಯಾರಿಗೂ ಕಾಣಿಸೋದಿಲ್ಲ. ಆದರೂ ದುರ್ಗಾಳ ಜವಾಬ್ದಾರಿಯನ್ನ ಹೊತ್ತುಕೊಳ್ಳುತ್ತಿದ್ದಾಳೆ. ಹೇಗೆ ನಿಭಾಯಿಸುತ್ತಾಳೆ ಅನ್ನೋದೆ ಕುತೂಹಲವಾಗಿದೆ.

ನಂಬರ್ ಒನ್ ಸ್ಥಾನ
ಈಗಿನ ಜನರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ಕೈಯಲ್ಲೇ ರಿಮೋಟ್ ಹಿಡಿದುಕೊಂಡು ಜನ ಕೂತಿರುತ್ತಾರೆ. ಹೀಗಾಗಿ ಮನಸ್ಸಿಗೆ ಮುಟ್ಟುವಂತ ಧಾರಾವಾಹಿಯನ್ನ ನೀಡಲೇಬೇಕಾಗುತ್ತದೆ. ಧಾರಾವಾಹಿಗೂ ಈಗಂತೂ ಸಿಕ್ಕಾಪಟ್ಟೆ ಕಾಂಪಿಟೇಶನ್ ಶುರುವಾಗಿದೆ. ಈ ಕಾಂಪಿಟೇಷನ್ ಸಮಯದಲ್ಲೂ ತಮ್ಮ ನಂಬರ್ ಒನ್ ಸ್ಥಾನವನ್ನ ಬಿಟ್ಟುಕೊಟ್ಟಿಲ್ಲ. ಆರಂಭವಾದ ಮೊದಲ ವಾರದಲ್ಲಿ ಗಮನ ಸೆಳೆದಿದ್ದ ಧಾರಾವಾಹಿ ಎರಡನೇ ವಾರಕ್ಕೆ ನಂಬರ್ ಒನ್ ಸ್ಥಾನಕ್ಕೇರಿತ್ತು. ಇದೀಗ ತನ್ನ ಸ್ಥಾನವನ್ನ ಭದ್ರ ಮಾಡಿಕೊಂಡಿದೆ.
ದುರ್ಗಾಳಿಗೆ ಸಿಕ್ತು ಸಿಟಿ ಸೂಚನೆ
ದುರ್ಗಾ ಈಗಾಗಲೇ ಹಲವು ಬಾರಿ ನಗರಕ್ಕೆ ಹೋಗುವ ನಿರ್ಧಾರ ಮಾಡಿದ್ದಳು. ಆದರೆ ಅದು ಸಾಧ್ಯವಾಗಿರಲಿಲ್ಲ. ತಂದೆಯ ಕವಡೆ ನಂಬಿಕೆ ಅವಳನ್ನ ಊರಿನಲ್ಲಿಯೇ ಉಳಿಯುವಂತೆ ಮಾಡಿತ್ತು. ಇದೀಗ ಕಷ್ಟದ ಸಮಯದಲ್ಲಿದ್ದಾಳ ದುರ್ಗಾ. ಈಗ ಸಿಟಿಗೆ ಹೋಗೋದಕ್ಕೆ ಮತ್ತೆ ಕವಡೆ ಹಾಕಿದ್ದಾಳೆ. ಒಂದೇ ಒಂದು ಕವಡೆಯಿಂದ ದುರ್ಗಾಳ ಬದುಕೇ ಬದಲಾಗಿದೆ. ದೇವಿಯೇ ಮಕಾಡೆ ಇದ್ದ ಕವಡೆಯನ್ನ ನೇರ ಮಾಡಿ, ಅಂಬಿಕಾಳ ಜೊತೆಗೆ ಹೋಗಲು ಸೂಚನೆ ನೀಡಿದ್ದಾಳೆ.
ನೀತಾಗಿದೆ ದೊಡ್ಡ ಅಭಿಮಾನಿ ಬಳಗ
ಈ ಧಾರಾವಾಹಿಯಲ್ಲಿ ಅಂಬಿಕಾ ಪಾತ್ರ ಮಾಡಿರುವವರು ನೀತಾ ಅಶೋಕ್. ಸಿಂಪಲ್ ಬ್ಯೂಟಿ. ಆಕೆಯ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಸೀರೆಯಲ್ಲಿ, ಲಾಂಗ್ ಹೇರ್ ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ದೆವ್ವ ಅನ್ನೋದಷ್ಟೇ ಬೇಸರ. ಒಬ್ಬಂಟಿಯಾಗಿದ್ದಾಗ ಸುತ್ತಲೂ ಹೊಗೆ ತುಂಬಿಕೊಂಡಿರುತ್ತಾರೆ. ದುರ್ಗಾ ಬಂದಾಗ ಅತ್ಯದ್ಭುತವಾಗಿ ಕಾಣಿಸುತ್ತಾರೆ. ಹೀಗಾಗಿ ಇವರ ಸೀರಿಯಲ್ ನೋಡಿದವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ.
ಆಕ್ಟಿಂಗ್ ಅಲ್ದೆ ಏನೆಲ್ಲಾ ಮಾಡ್ತಾರೆ?
ನೀತಾ ಅಶೋಕ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಅದು ಧಾರಾವಾಹಿ ಸೆಟ್‌ನಲ್ಲಿ ಹೇಗಿರ್ತಾರೆ ಎಂಬುದರ ವಿಡಿಯೋ. ಡೈಲಾಗ್ ಶೀಟ್ ಓದಿಕೊಳ್ಳುತ್ತಾ, ತಮ್ಮ ಹೇರ್ ಸ್ಟೈಲ್ ಆರ್ಟಿಸ್ಟ್‌ಗೆ ಕೂಡ ಸಪೋರ್ಟ್ ಮಾಡ್ತಾ ಇದಾರೆ. ಅದನ್ನ ವಿಡಿಯೋ ಹಾಕಿ, ನೋಡಿ ಏನೆಲ್ಲಾ ಮಾಡ್ತೀವಿ ಸೆಟ್ ನಲ್ಲಿ ಎಂಬುದನ್ನ ವಿವರಿಸಿದ್ದಾರೆ. ನೀತಾ ಅಶೋಕ್ ನೋಡಿದರೇನೆ ಅವರ ಗುಣವನ್ನು ಅರಿತುಕೊಳ್ಳಬಹುದು. ಸದಾ ಎಲ್ಲರ ಜೊತೆಗೆ ನಗುಮುಖದಿಂದಲೇ ಇರುತ್ತರೆ, ಜೊತೆಗಿರುವರನ್ನ ಖುಷಿ ಖುಷಿಯಾಗಿ ಇಟ್ಟುಕೊಳ್ಳುತ್ತಾರೆ. ಸೆಟ್‌ನಲ್ಲಿ ಕೂಡ ಖುಷಿ ಖುಸಿಯಾಗಿರುವ ಲಕ್ಷಣ ಕಾಣಿಸುತ್ತಿದೆ.


Click it and Unblock the Notifications











