Neha Gowda ; ಕಿರುತೆರೆ ಕಲಾವಿದರ ಜೊತೆ ಸೇರಿ ಸೀಮಂತ ಮಾಡಿಕೊಂಡ ನಟಿ ನೇಹಾ ಗೌಡ

By ಪ್ರಿಯಾ ದೊರೆ

ಕಳೆದ ವರ್ಷ ಕಿರುತೆರೆಯಲ್ಲಿ ಮದುವೆಯ ಸರಮಾಲೆಯೇ ನಡೆದಿತ್ತು. ಕಿರುತೆರೆ ನಟ-ನಟಿಯರ ಮದುವೆಗಳು ಸಾಲು ಸಾಲಾಗಿ ನಡೆದಿದ್ದವು.ಈ ವರ್ಷ ಕಿರುತೆರೆ ನಟಿಯರಲ್ಲಿ ಸಾಕಷ್ಟು ಮಂದಿ ತಾಯಿಯಾಗುವ ಆನಂದದಲ್ಲಿ ತೇಲಾಡುತ್ತಿದ್ದಾರೆ. 2024ರಲ್ಲಿ ಕನ್ನಡ ಕಿರುತೆರೆ ಹಾಗೂ ಹಿರಿತೆರೆಯ ನಟಿಯರು ತಮ್ಮ ಮುದ್ದಾದ ಮಗುವಿಗೆ ಕೆಲವರು ಜನ್ಮ ನೀಡಿದ್ದು, ಮತ್ತೂ ಕೆಲವರು ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.ಆ ಸಾಲಿಗೆ ಕಿರುತೆರೆ ನಟಿಯರಾದ ನೇಹಾ ಗೌಡ, ಕವಿತಾ ಗೌಡ ಕೆಲವೇ ದಿನಗಳ ಆಸು ಪಾಸಿನಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದು, ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.


ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿಯರು

ಇನ್ನು ಸ್ಯಾಂಡಲ್ ವುಡ್ ನಟಿಯರಾದ, ಮಿಲನಾ ನಾಗರಾಜ್, ಹರ್ಷಿಕಾ ಪೂಣಚ್ಚ ಮತ್ತು ಪ್ರಣಿತಾ ಸುಭಾಷ್ ಕೂಡ ಬೇಬಿ ಬಂಪ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಮಿಲನಾ ನಾಗರಾಜ್ ಅವರು ಸೀಮಂತ ಮಾಡಿಸಿಕೊಂಡಿದ್ದಾರೆ. ಪ್ರಣಿತಾ ಸುಭಾಷ್ ಹೊರತು ಪಡಿಸಿ ನಾಲ್ವರು ನಟಿಯರು ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟಿ ಪ್ರಣಿತಾ ಸುಭಾಷ್ ಅವರು 2022ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದು, ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ನಟಿ ನೇಹಾ ಗೌಡ ಅವರು ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಜ್ಜಾಗಿದ್ದು, ಅದ್ಧೂರಿಯಾಗಿ ಇಂದು ಸೀಮಂತ ಕಾರ್ಯಕ್ರಮವನ್ನು ಆಚರಿಸಿಕೊಂಡಿದ್ದಾರೆ.

actress neha gowda baby shower celebration

ಸಿಂಪಲ್ ಫೋಟೋಶೂಟ್

ಇನ್ನು ನಟಿ ನೇಹಾ ಅವರು ಸೀಮಂತಕ್ಕೆ ಗುಲಾಬಿ ಹಾಗೂ ಹಸಿರು ಬಣ್ಣದ ಸೀರೆಯಲ್ಲಿ ಸಿಂಗಾರ ಮಾಡಿಕೊಂಡು ಮುದ್ದಾಗಿ ಕಂಗೊಳಿಸುತ್ತಿದ್ದರು. ಇತ್ತೀಚೆಗಷ್ಟೇ ನಿ ನೇಹಾ ಅವರು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಇದರಲ್ಲಿ ಸಿಂಪಲ್ ಆಗಿ ಸೀರೆಯುಟ್ಟು ಪತಿ ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡಿದ್ದರು. ನವಿಲು ಗರಿಯನ್ನು ಮಗುವಿನಂತೆ ಕೈಯಲ್ಲಿ ಹಿಡಿದು ತೆಗೆಸಿಕೊಂಡ ಫೋಟೋ ಅದ್ಭುತವಾಗಿತ್ತು. ಇನ್ನು ನಟಿ ಅನುಪಮಾ ಗೌಡ ಹಾಗೂ ನೇಹಾ ಇಬ್ಬರೂ ಪ್ರಾಣ ಸ್ನೇಹಿತರಾಗಿದ್ದು, ನೇಹಾ ಅವರು ಹುಟ್ಟು ಹಬ್ಬದಂದು ಬೇಬಿ ಬಂಪ್ ಗೆ ಮುತ್ತು ನೀಡಿ ಅನುಪಮಾ ಗೌಡ ವಿಶ್ ಮಾಡಿದ್ದರು.

ನೇಹಾ ಪ್ರೆಗ್ನೆನ್ಸಿ ಜರ್ನಿ

ಇಷ್ಟೇ ಅಲ್ಲದೇ ನಟಿ ನೇಹಾ ಅವರು ತಮ್ಮ ಪ್ರೆಗ್ನೆನ್ಸಿ ಪಿರೀಯಡ್ ಅನ್ನು ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಆಗಾಗ ಫೊಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಮಗು ಹಾಗೂ ತಮ್ಮ ಆರೋಗ್ಯಕ್ಕಾಗಿ ನಿತ್ಯ ನೇಹಾ ಅವರು ಯೋಗ ಮಾಡುತ್ತಾರೆ. ಜೊತೆಗೆ ಖುಷಿ ಖುಷಿಯಾಗಿರುವ ನೇಹಾ ಅವರನ್ನು ಕಂಡು ಅಭಿಮಾನಿಗಳು ಫುಲ್ ಹ್ಯಾಪಿ ಆಗಿದ್ದಾರೆ. ಮುದ್ದು ಗೊಂಬೆ ಗರ್ಭದಲ್ಲಿ ಪುಟಾಣಿ ಗೊಂಬೆ ಬರುತ್ತಿರುವುದಕ್ಕೆ ನೇಹಾ ಕುಟುಂಬದಲ್ಲಿ ಇರುವಷ್ಟೇ ಸಂತಸ ಅಭಿಮಾನಿಗಳಲ್ಲೂ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X