Neha Gowda: 'ನಮ್ಮ ಲಚ್ಚಿ'ಯ ಗಿರಿಜಾ ಪಾತ್ರಕ್ಕೆ ನೇಹಾ ಗೌಡ ಭಾವುಕ ವಿದಾಯ; ನಟಿ ಹೇಳಿದ್ದೇನು?

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮ ಲಚ್ಚಿ' ಧಾರಾವಾಹಿ ಜನಮನ ಗೆದ್ದಿರುವುದಂತೂ ನಿಜ. 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ಸಿದ್ಧಾರ್ಥ ವಿಜಯ್ ಸೂರ್ಯ ನಾಯಕ ನಟನಾಗಿ ಹಾಗೆಯೇ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ಗೊಂಬೆ ಅಲಿಯಾಸ್ ನೇಹಾ ಗೌಡ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ 'ನಮ್ಮ ಲಚ್ಚಿ' ಎಂಬ ಧಾರಾವಾಹಿ ಕಳೆದ ವರ್ಷ ಆರಂಭವಾಗಿತ್ತು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಬೆಂಗಾಲಿ ಧಾರಾವಾಹಿ 'ಪೊಟೆಲ್ ಕುಮಾರ' ಎಂಬುದರ ರಿಮೇಕ್ ಆಗಿದೆ. ಅಪ್ಪ ಮಗಳ ಬಾಂಧವ್ಯವನ್ನು ಸಾರುವ ಈ ಧಾರಾವಾಹಿ ವಿಭಿನ್ನ ಕಥಾ ಅಂದರೆ ಬಹಳ ಚೆನ್ನಾಗಿ ಸಾಗಿದೆ.

Actress Neha Gowda gave an emotional farewell to her role Girija in the serial Namma Lacchi

ಕಳೆದ ವಾರವಷ್ಟೇ ಈ ಧಾರಾವಾಹಿ ಮುಕ್ತಾಯಗೊಂಡಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರ ಗಿರಿಜಾಗೆ ಜೀವ ತುಂಬುತ್ತಿದ್ದ ನಟಿ ನೇಹಾ ಗೌಡ ಬೇಸರದಿಂದ ಭಾವುಕ ವಿದಾಯ ನೀಡಿದ್ದಾರೆ.

"ಪ್ರೀತಿಯ ಗಿರಿಜಾ, ಬಹಳಷ್ಟು ವಿಚಾರಗಳನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ನಿನ್ನೆ ಎಷ್ಟೇ ನಾವು ನಿನ್ನ ಸ್ವಾಗತಿಸಿದ್ದೆವು. ಇಂದು ನಿನಗೆ ವಿದಾಯ ಹೇಳಬೇಕಾಗಿದೆ. ನೀನು ನಮ್ಮ ಗಿರಿಜಾ, ನಿನ್ನ ಮುಗ್ಧತೆ ನಮ್ಮೆಲ್ಲರ ಹೃದಯದಲ್ಲಿ ನಿನಗೊಂದು ಜಾಗ ಮಾಡಿಕೊಟ್ಟಿದೆ. ನೀನು ಒಂದು ಕೃತಕ ಪಾತ್ರಕ್ಕಿಂತಲೂ ಹೆಚ್ಚು. ನಿನ್ನ ವೈಬ್ ಅನ್ನು ನಾವೆಂದೂ ಮರೆಯುವುದಿಲ್ಲ. ನಿನ್ನ ಖುಷಿಯಲ್ಲಿ ನಾವೂ ಖುಷಿ ಕಂಡಿದ್ದೇವೆ." ಎಂದು ಬರೆದುಕೊಂಡಿದ್ದಾರೆ.

ಜೊತೆಗೆ "ಪ್ರೀತಿಯ ಗಿರಿಜಾ ನೀನು ಹೊರಗಿನಿಂದ ಬೆಂಕಿಯಂತೆ ಕಂಡರೂ ಒಳಗೆ ಮೃದುವಾದ ಮನಸ್ಸು ನಿನ್ನದು. ಯಾವತ್ತೂ ಎಂದಿಗೂ ಯಾರೊಂದಿಗೂ ಹತಾಶಳಾಗಲಿಲ್ಲ ನೀನು. ನಿನ್ನ ಅಂತರಾತ್ಮಕ್ಕೆ ನೀನೆಂದು ಮೋಸ ಮಾಡಿಕೊಳ್ಳಲಿಲ್ಲ. ನಮಗೆ ನಾವು ನಿಜವಾಗಿರುವುದೇ ಬಹು ದೊಡ್ಡ ಶಕ್ತಿ ಎಂದು ಅರ್ಥ ಮಾಡಿಸಿದ ವ್ಯಕ್ತಿ ನೀನು" ಎಂದಿದ್ದಾರೆ.

Actress Neha Gowda gave an emotional farewell to her role Girija in the serial Namma Lacchi

"ನಿನ್ನನ್ನು ಇನ್ನೆಂದು ಟಿವಿಯಲ್ಲಿ ನೋಡುವುದಿಲ್ಲ ಎಂಬುದೇ ಬಹುದೊಡ್ಡ ಕಷ್ಟದ ವಿಚಾರ ನಮಗೆ. ಆದರೆ, ನಿನ್ನ ಪಾತ್ರ ಹಾಗೂ ಅದರ ವ್ಯಕ್ತಿತ್ವ ಎಂದಿಗೂ ನಮ್ಮ ಹೃದಯದಲ್ಲಿ ಒಂದು ಭಾಗವಾಗಿರುತ್ತದೆ. ನಮಗೆ ನಿನ್ನನ್ನು ನೋಡಲು ಸಿಕ್ಕ ಅವಕಾಶಕ್ಕೆ ನಾವು ಸದಾ ಋಣಿ. ಗುಡ್ ಬೈ ಪ್ರೀತಿಯ ಗಿರಿಜಾ" ಎಂದು ನೇಹಾ ಗೌಡ ಬರೆದುಕೊಂಡಿದ್ದಾರೆ.

ಈ ರೀತಿಯಾಗಿ ತಾವು ನಟಿಸುತ್ತಿದ್ದ ಗಿರಿಜಾ ಪಾತ್ರಕ್ಕೆ ಪ್ರೀತಿಯ ಭಾವನಾತ್ಮಕ ವಿದಾಯವನ್ನು ನಟಿ ನೇಹಾ ಗೌಡ ಹೇಳಿದ್ದಾರೆ. ತಾವೇ ಜೀವ ತುಂಬಿದ ಪಾತ್ರವನ್ನು ಮನಸಾರೆ ಇಷ್ಟಪಟ್ಟು ಅದರ ಮುಕ್ತಾಯದ ಸಮಯದಲ್ಲಿ ಈ ರೀತಿ ಭಾವನಾತ್ಮಕವಾಗಿ ಮಾತನಾಡಿರುವುದು ಪ್ರೇಕ್ಷಕರ ಮನಕಲುಕಿದೆ.

" ನಮ್ಮ ಲಚ್ಚಿ" ಧಾರಾವಾಹಿ ಕಥೆಯಲ್ಲಿ ಪೇಟೆಯ ಗಾಯಕ ಸಂಗಮ್ ಎನ್ನುವವನ್ನೊಬ್ಬ ಸಂಪಿಗೆಪುರ ಎಂಬ ಹಳ್ಳಿಗೆ ಹೋದಾಗ ಅದೇ ಹಳ್ಳಿಯ ಹುಡುಗಿಯ ಪ್ರೀತಿಗೆ ಬೀಳುತ್ತಾನೆ. ನಂತರ ಆಕೆಯನ್ನು ಮದುವೆಯು ಆಗುತ್ತಾನೆ. ಮತ್ತೆ ಆಕೆಯನ್ನು ಕರೆದೊಯ್ಯುವುದಾಗಿ ಹೇಳಿ ಸಿಟಿ ಸೇರಿದವನು ತನ್ನದೇ ಜಂಜಾಟದಲ್ಲಿ ಮುಳುಗಿ ಬಿಡುತ್ತಾನೆ. ಅಣ್ಣ ಸಾಗರ್ ಮಾಡಿದ ಮೋಸದಿಂದ ಗಾಯನ ಬಿಟ್ಟು ಒಂದು ಕೇರಿಯರ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಇತ್ತ ಸಿಟಿಯ ಪ್ರಿಯಕರ ಸಂಗಮ್‌ಗಾಗಿ ಕಾಯುವ ಗಿರಿಜಾ ಅವನ ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ, ತನ್ನದೇ ವೈಯಕ್ತಿಕ ಜಂಜಾಟದಲ್ಲಿ ಹಳ್ಳಿಯ ಹೆಂಡತಿಯನ್ನು ಮರೆಯುವ ಸಂಗಮ್ ಶ್ರೀಮಂತ ಹುಡುಗಿ ದೀಪಿಕಾ ಎಂಬ ಹುಡುಗಿಯನ್ನು ಮದುವೆಯಾಗಿ ರಿಯಾ ಎಂಬ ಹೆಣ್ಣು ಮಗುವಿಗೆ ತಂದೆ ಆಗುತ್ತಾನೆ.

ಇತ್ತ ಸಂಪಿಗೆಪುರದಲ್ಲಿನ ಸಂಗಮ್ ಮಗಳು ಲಚ್ಚಿ ಅಪ್ಪನಂತೆ ಗಾಯಕಿ ಆಗಿರುತ್ತಾಳೆ. ಆದರೆ ಅತ್ತೆಯ ಕಾಟದಿಂದ ತಪ್ಪಿಸಿಕೊಳ್ಳಲು ಹುಡುಗನಂತೆ ವೇಷ ಮರಿಸಿಕೊಂಡು ತಾನೆಂದು ಕಾಣದ ತಂದೆಯನ್ನು ಹುಡುಕಿಕೊಂಡು ಸಿಟಿಗೆ ಬರುತ್ತಾಳೆ. ತನಗೆ ಗೊತ್ತಿಲ್ಲದೆ ಸಂಗಮ್‌ ಮನೆ ಸೇರುತ್ತಾಳೆ. ಆಕೆ ಹೆಣ್ಣು ಎಂದು ಗೊತ್ತಿಲ್ಲದೆ ಎಲ್ಲರೂ ಆಕೆಯನ್ನು ಹುಡುಗ ಎಂದೇ ಭಾವಿಸುತ್ತಾರೆ. ಕೆಲ ದಿನಗಳ ನಂತರ ಸಂಗಮ್‌ಗೆ ತನ್ನ ಹಳ್ಳಿಯ ಹೆಂಡತಿಯಿಂದ ಮಗುವಿದೆ ಎಂಬ ವಿಚಾರ ಗೊತ್ತಾಗಿ ಹಳ್ಳಿಗೆ ತೆರಳುತ್ತಾನೆ. ಅಲ್ಲಿ ತನ್ನ ಮಗಳು ಮತ್ತ್ಯಾರು ಅಲ್ಲದೆ ಲಚ್ಚಿ ಎಂಬ ವಿಚಾರ ಗೊತ್ತಾಗುತ್ತದೆ. ಜೊತೆಗೆ ಫಿಲಂ ಸ್ಟೈಲ್ ನಲ್ಲಿ ಒಂದಷ್ಟು ಫೈಟಿಂಗ್ ಆದ ಮೇಲೆ ತಂದೆ ಮಗಳಿಬ್ಬರು ಒಂದಾಗುತ್ತಾರೆ.

ಅದೇ ಸಂದರ್ಭದಲ್ಲಿ ನೆನಪಿನ ಶಕ್ತಿ ಕಳೆದುಕೊಂಡು ಜಾಜಿಯ ರೂಪದಲ್ಲಿದ್ದ ಗಿರಿಜಾಗೆ ನಿಧಾನವಾಗಿ ನೆನಪಿನ ಶಕ್ತಿ ಮರುಕಳಿಸುತ್ತದೆ. ಇತ್ತ ಪೇಟೆ ಹೆಂಡತಿ ದೀಪಿಕಾ ಮಾಡಿರುವ ಆಟ ಹಾಗೂ ಮೋಸಗೊಳನ್ನೆಲ್ಲ ತಿಳಿದ ಮೇಲೆ ಪೊಲೀಸರು ಆಕೆಯನ್ನು ಬಂಧಿಸುತ್ತಾರೆ. ಈ ರೀತಿ ಕಥೆಯಲ್ಲಿ ಒಳ್ಳೊಳ್ಳೆ ಅಂಶಗಳು ಬರುತ್ತಿದ್ದಂತೆಯೇ ಕಥೆ ಧಾರಾವಾಹಿ ಮುಗಿಯುವ ವಿಚಾರ ತಿಳಿದು ಪ್ರೇಕ್ಷಕರು ನೊಂದು ಭಾವನಾತ್ಮಕವಾಗಿ ಸಂದೇಶಗಳನ್ನು ಕಳಿಸಿದ್ದಾರೆ.

More from Filmibeat

English summary
Do you know what actress Neha Gowda said about the ending of Namma Lacchi serial:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X