ತಾಯ್ತನದ ಸಂಭ್ರಮದಲ್ಲಿ 'ಲಕ್ಷ್ಮಿ ಬಾರಮ್ಮ' ನಟಿ ನೇಹಾ ಗೌಡ; ಮನೆಯಲ್ಲಿ ಖುಷಿಯೋ ಖುಷಿ
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಮೂಲಕ ನಟಿ ನೇಹಾ ಗೌಡ ಕಿರುತೆರೆ ಪ್ರೇಕ್ಷಕರ ಮನೆಗೆದ್ದಿದ್ದರು. ಬರೋಬ್ಬರಿ ಆರು ವರ್ಷಗಳ ಕಾಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ ನೇಹಾ ಗೌಡ ಹಾಗೂ ಕವಿತಾ ಗೌಡ ಅವರ ಗೊಂಬೆ-ಚಿನ್ನು ಜೋಡಿ ಎಲ್ಲರನ್ನು ಮೋಡಿ ಮಾಡಿತ್ತು. ಇದೀಗ ಇಬ್ಬರು ತಮ್ಮ ರಿಯಲ್ ಲೈಫ್‌ನಲ್ಲಿ ತಾಯಿಯಾಗಿ ಮಗುವಿನ ಆರೈಕೆಯ ಖುಷಿಯಲ್ಲಿದ್ದಾರೆ.
ಹೌದು, ಇಬ್ಬರಿಗೂ ಮುದ್ದಾದ ಮಗುವಿದೆ. ಕಳೆದ ಅಕ್ಟೋಬರ್ 29ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ನೇಹಾ ಗೌಡ ಅವರ ಮಗಳಿಗೆ ಇನ್ನೂ ನಾಮಕರಣವಾಗಿಲ್ಲ. ಈಗಾಗಲೇ ಮಗಳ ಮುಖವನ್ನು ರಿವೀಲ್ ಮಾಡಿರುವ ನೇಹಾ ಗೌಡ ಸದ್ಯ ನಟನೆಯಿಂದ ದೂರ ಉಳಿದು ತಮ್ಮ ಸಮಯವನ್ನು ಮಗುವಿಗಾಗಿ, ಫ್ಯಾಮಿಲಿಗಾಗಿ ಮೀಸಲಿಟ್ಟಿದ್ದಾರೆ.

ನೇಹಾ ಗೌಡ ಬರಿಯ ಕನ್ನಡ ಕಿರುತೆರೆಯ ನಟಿ ಮಾತ್ರವಲ್ಲ. ಅನ್ಯ ಭಾಷಾ ಧಾರಾವಾಹಿಗಳಾದ 'ಸ್ವಾತಿ ಚಿನುಕುಲು', 'ಕಲ್ಯಾಣ ಪಾರಿಸು' ಹಾಗೂ 'ಪಾವಂ ಗಣೇಶನ್' ಅಲ್ಲೂ ಅಭಿನಯಿಸಿದ್ದಾರೆ. ಅಲ್ಲದೆ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್‌ನ 9ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು.
ಅಂದಹಾಗೆ ನೇಹಾ ಗೌಡರದ್ದು ಬಹುಕಾಲದ ಪರಿಪೂರ್ಣ ಲವ್ ಮ್ಯಾರೇಜ್. ತಾವು ಬಾಲ್ಯ ಕಾಲದಿಂದ ಪ್ರೀತಿಸುತ್ತಿದ್ದ ಹುಡುಗನನ್ನು ಮದುವೆಯಾಗಿ ಸುಂದರ ಸಂಸಾರವನ್ನು ನಡೆಸುತ್ತಿರುವ ನೇಹಾ ಅಭಿಮಾನಿಗಳ ನೆಚ್ಚಿನ ಜೋಡಿಗಳಲ್ಲಿ ಒಬ್ಬರು. ನೇಹಾ ತಮ್ಮ ಬಾಲ್ಯ ಕಾಲದ ಗೆಳೆಯ ಚಂದನ್ ಅವರನ್ನು ಪ್ರೀತಿಸಿ ಮದುವೆಯಾದವರು. ನೇಹಾ ನಟಿಯಾಗಿದ್ದರೆ ಚಂದನ್ ಉದ್ಯಮಿಯಾಗಿದ್ದರು.
2018ರಲ್ಲಿ ವಿವಾಹವಾದ ಇವರು ನಂತರ ಕಲರ್ಸ್ ಕನ್ನಡದ ರಾಜ ರಾಣಿ ಶೋನಲ್ಲಿ ಭಾಗವಹಿಸಿ ಗೆದ್ದಿದ್ದರು. ಉದ್ಯಮಿಯಾಗಿದ್ದ ಚಂದನ್ ನಟನೆಗೂ ಕಾಲಿಟ್ಟು 'ಅಂತರಪಟ' ಧಾರಾವಾಹಿಯ ಮೂಲಕ ಹೀರೋ ಆಗಿಯೂ ಮಿಂಚಿದರು.
ಇನ್ನು ನಟಿ ನೇಹಾ ಮತ್ತು ಕವಿತಾ ಗೌಡ ಒಂದೇ ಸಮಯದಲ್ಲಿ ತಾಯಿಯಾಗುವ ನಿರೀಕ್ಷೆಯಲ್ಲಿದ್ದವರು. ಜೊತೆಯಾಗಿ ಧಾರಾವಾಹಿಯಲ್ಲಿ ನಟಿಸಿದವರು ಜೊತೆಯಲ್ಲೇ ತಾಯಿಯಾಗುವ ಅವಕಾಶವು ದೊರೆತಿದ್ದು ಕಾಕತಾಳಿಯವೇ ಆದರೂ ಸಂಭ್ರಮ ಪಡುವ ವಿಷಯವೇ ಆಗಿತ್ತು. ಇಬ್ಬರಿಗೂ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್‌ನಲ್ಲಿ ಹಾಗೂ ಸುವರ್ಣ ವಾಹಿನಿಯಲ್ಲಿ ಅದ್ದೂರಿಯಾಗಿ ಸೀಮಂತ ಮಾಡಿದ್ದರು. ಅಲ್ಲದೆ ಅವರ ಸ್ನೇಹಿತರು, ಚಿತ್ರರಂಗದ ಗಣ್ಯರು ಸೇರಿದಂತೆ ಸಾಕಷ್ಟು ಹಿತೈಷಿಗಳು ಅವರಿಗೆ ಬೇಬಿ ಶೋವರ್ ಏರ್ಪಡಿಸಿದ್ದರು.
ಒಟ್ಟಿನಲ್ಲಿ ನೇಹಾ ಗೌಡ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಜೀವನದ ಹೊಸ ಅಧ್ಯಾಯವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ತಮ್ಮಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ಮಗುವಿನೊಂದಿಗೆನ ಫೋಟೋಗಳನ್ನು ಹಂಚುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿಯೂ ಇದ್ದಾರೆ. ಅವರ ಸಹೋದರಿ ಸೋನು ಗೌಡ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ನೇಹಾ ಅವರ ಮಗುವಿನೊಂದಿಗೆ ಸೋನು ಗೌಡ ಕೂಡ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇನ್ನು ವೈರಲ್ ಆಗಿತ್ತು.


Click it and Unblock the Notifications











