Don't Miss!
- Sports
ಬಾಲಿವುಡ್ ನಟಿಯರನ್ನು ಮದುವೆಯಾದ ಐವರು ಭಾರತೀಯ ಕ್ರಿಕೆಟಿಗರು
- Technology
ವಿವೋ Y35 ಫೋನ್ಗೆ ಸಖತ್ ಡಿಸ್ಕೌಂಟ್!..ಖರೀದಿಗೆ ಈ ಆಫರ್ ಉತ್ತಮವೇ?
- Finance
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕುಸಿತ ಕಂಡ ಅದಾನಿ, ಅಂಬಾನಿ: ಎಷ್ಟನೇ ಸ್ಥಾನ? ಯಾರು ಮುಂದಿದ್ದಾರೆ? ತಿಳಿಯಿರಿ
- News
Breaking; ಹಾಸನದ ಅಭ್ಯರ್ಥಿ, ಭವಾನಿ ರೇವಣ್ಣ ಮಹತ್ವದ ಘೋಷಣೆ
- Automobiles
ಶೀಘ್ರದಲ್ಲೇ 2023 ಹ್ಯುಂಡೈ ವೆನ್ಯೂ ಬಿಡುಗಡೆ... 4 ಏರ್ಬ್ಯಾಗ್, ಡೀಸಲ್ ಎಂಜಿನ್, ಹೊಸ ವೈಶಿಷ್ಟ್ಯಗಳು
- Lifestyle
ತನ್ನ ಪುರುಷನಲ್ಲಿ ಮಹಿಳೆ ಹುಡುಕುವ ಗುಣಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Namma Lacchi Serial:'ನಮ್ಮ ಲಚ್ಚಿ' ಜೊತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ನಟಿ ನೇಹಾಗೌಡ!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಹೊಸ ಧಾರಾವಾಹಿಗಳು ಮೂಡಿ ಬರುತ್ತಿವೆ. ಈಗಾಗಲೇ ಭಕ್ತಿ ಪ್ರಧಾನ 'ಎಡೆಯೂರು ಸಿದ್ದಲಿಂಗೇಶ್ವರ' ಧಾರಾವಾಹಿ, ಕೌಟುಂಬಿಕ ಸೀರಿಯಲ್ 'ಬೆಟ್ಟದ ಹೂ', 'ಜೇನುಗೂಡು', ಪ್ರೀತಿಯ ಅಲೆಯಲ್ಲಿ 'ಮರಳಿ ಮನಸಾಗಿದೆ' ಸೇರಿದಂತೆ ಹಲವು ಧಾರಾವಾಹಿಗಳು ಮೂಡಿ ಬರುತ್ತಿದೆ. ಇದರ ಜೊತೆಗೆ ಹೊಸದೊಂದು ಧಾರಾವಾಹಿ ಬರುತ್ತಿದೆ.
'ನಮ್ಮ ಲಚ್ಚಿ' ಎಂಬ ಧಾರಾವಾಹಿ ಆರಂಭವಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆಯೇ ಹೊಸ ಧಾರಾವಾಹಿಯ ಪ್ರೋಮೋ ರಿಲೀಸ್ ಮಾಡಿದ್ದರು. ಆಗನಿಂದಾನೂ ಜನರಿಗೆ ನಿರೀಕ್ಷೆ ಇದೆ. ಈ ಧಾರಾವಾಹಿ ವಿಭಿನ್ನವಾಗಿದೆ ಎಂಬ ಭರವಸೆ ಇದೆ. ಯಾವಾಗ ಬರುತ್ತೆ ಎಂದು ಕಾಯುವಂತೆ ಮಾಡಿದೆ. ಇದೀಗ ಮತ್ತೊಂದು ವಿಡಿಯೋ ಬಿಟ್ಟು ಕುತೂಹಲವನ್ನು ಕೆರಳಿಸಿದೆ.
'ಯುಗಾಂತರ'
ಧಾರಾವಾಹಿಯ
ಮೂಲಕ
ಕಿರುತೆರೆಗೆ
ಮರಳಿದ
ದೀಪಾ
ಭಾಸ್ಕರ್

ಹಾಡುಗಾರಿಕೆಯ ಹಿಂದಿನ ಕಥೆ
'ನಮ್ಮ ಲಚ್ಚಿ' ಧಾರಾವಾಹಿಯ ಕಥೆ ಹಾಡುಗಾರಿಕೆಯ ಮೇಲೆ ಹೆಣೆದಿರುವಂತಹ ಕಥೆಯಾಗಿದೆ.ತಂದೆ ಯಾರೆಂಬುದೇ ಗೊತ್ತಿಲ್ಲದ ಮಗಳಿಗೆ ತಂದೆಯ ಗುಣವೇ ಬಂದಿದೆ. ಅಮ್ಮ ಕೂಡ ತಂದೆಯ ವಿಚಾರವನ್ನು ಮಗಳಿಗೆ ಹೇಳಿಲ್ಲ. ಹಾಡು ಎಂದರೆ ದ್ವೇಷ ಮಾಡುವ ಅಮ್ಮನ ಮುಂದೆ ಮಗಳಲ್ಲಿ ಹಾಡುವ ಟ್ಯಾಲೆಂಟ್ ಬಂದಿದೆ. ಭಾವನಾತ್ಮಕ ದೃಶ್ಯಗಳಿಗೆ ಇದು ಸಾಕ್ಷಿಯಾಗುತ್ತಿದೆ.

ತಂದೆಯನ್ನೇ ಅನುಕರಿಸುವ ಮಗಳು
ಲಚ್ಚಿ ಪುಟಾಣಿ ಹುಡುಗಿ. ಹಳ್ಳಿಯಲ್ಲಿ ಬೆಳೆಯುತ್ತಿರುವ ಈ ಪುಟಾಣಿಗೆ ಅಮ್ಮನನ್ನು ಕಂಡರೆ ಬಹಳ ಭಯ. ಆದರೂ ತನ್ನೊಳಗಿನ ಹಾಡುವ ಆಸೆಯನ್ನು ದೂರದಲ್ಲೆಲ್ಲೋ ಹೋಗಿ ಪೂರೈಸಿಕೊಂಡು ಬರುತ್ತಾಳೆ. ರೇಡಿಯೋದಲ್ಲಿ ಯಾವಾಗಲೂ ಕೇಳುವುದು ಸಂಗಮ್ ಅವರ ಹಾಡು. ಆದ್ರೆ ಅವರೇ ನನ್ನ ತಂದೆ ಎಂಬುದು ಮಾತ್ರ ಲಚ್ಚಿಗೆ ಗೊತ್ತಿಲ್ಲದ ಸತ್ಯ. ಊರಿನ ಮಕ್ಕಳನ್ನೆಲ್ಲಾ ಸೇರಿಸಿಕೊಂಡು ಹಾಡು ಹಾಡುತ್ತಾ, ಕುಣಿಯುವುದನ್ನು ಕಂಡಾಗೆಲ್ಲಾ ಲಚ್ಚಿಯ ಅಮ್ಮನಿಗೆ ಇನ್ನಿಲ್ಲದ ಕೋಪ. ತಂದೆಯಿಂದ ದೂರವಿಟ್ಟರು ಮತ್ತೆ ಮತ್ತೆ ಅವರನ್ನೇ ಅನುಸರಿಸುತ್ತಾಳೆ ಎಂಬ ಬೇಸರ ಅವಳಲ್ಲಿದೆ.

'ನಮ್ಮ ಲಚ್ಚಿ' ಮುಂಚೆ ಏನಾಗುತ್ತೆ?
ಸದ್ಯ 'ನಮ್ಮ ಲಚ್ಚಿ' ಧಾರಾವಾಹಿಯ ಪ್ರೋಮೋ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಪಕ್ಕಾ ಹಳ್ಳಿ ಭಾಷೆಯಲ್ಲಿ ಪುಟಾಣಿ ಮಗುವಿನ ಪದವನ್ನು ಕೇಳುವುದೇ ಚೆಂದ. ಎರಡು ಹಲ್ಲು ಕೂಡ ಉದುರಿ ಹೋಗಿದ್ದರೂ ಆ ಮುಖವನ್ನು ನೋಡುವುದಕ್ಕೆ ಚೆಂದ. ಆದರೆ ಈ ಧಾರಾವಾಹಿ ಮುಂಚೆಯೇ ಬರಬೇಕಿತ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದಕ್ಕೆ ಕಾರಣ ಪ್ರೋಮೋಗೆ ಬಂದ ಹಲವು ಕಮೆಂಟ್‌ಗಳು. ಈ ಧಾರಾವಾಹಿಯ ಪ್ರೋಮೋ ಈ ಮೊದಲು ಕೂಡ ರಿಲೀಸ್ ಆಗಿತ್ತು. ಆದರೆ ಅದರ ಹೆಸರು 'ಕೀರ್ತಿ ಕುಮಾರ ಹಾಡುಗಾರ' ಎಂಬುದಾಗಿತ್ತು. ಇದೀಗ ಹೆಸರು ಬದಲಾವಣೆಯಾಗಿದ್ದು, ಕಮೆಂಟ್‌ನಲ್ಲಿ ಇದಕ್ಕೆ ಉತ್ತರ ನಿರೀಕ್ಷೆ ಮಾಡುತ್ತಿದ್ದಾರೆ.

ಕಿರುತೆರೆಯಲ್ಲಿ ಮೋಡಿ ಮಾಡುತ್ತಾ ಈ ಜೋಡಿ?
ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಬರುತ್ತಿದ್ದ 'ಪ್ರೇಮ ಲೋಕ' ಧಾರಾವಾಹಿಯಲ್ಲಿ ವಿಜಯ್ ಸೂರ್ಯ ನಟಿಸಿದ್ದರು. ಆದರೆ ಅದು ಕಾರಣಾಂತರಗಳಿಂದ ನಿಂತು ಹೋಗಿತ್ತು. ಬಳಿಕ ಕೆಲವೊಂದು ಧಾರಾವಾಹಿಗಳಲ್ಲಿ ಅತಿಥಿ ಪಾತ್ರದ ಮೂಲಕ ಬಂದು ಹೋಗಿದ್ದರು. ಇದೀಗ ಸುವರ್ಣ ವಾಹಿನಿಯಲ್ಲಿಯೇ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಇನ್ನು ನೇಹಾ ಗೌಡ ಕೂಡ ಧಾರಾವಾಹಿಯಿಂದ ಸ್ವಲ್ಪ ಸಮಯ ದೂರ ಉಳಿದಿದ್ದರು. ಈಗ ಇದೇ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಆಗುತ್ತಿದ್ದಾರೆ.

ಯಾರೆಲ್ಲಾ 'ನಮ್ಮ ಲಚ್ಚಿ'ಯನ್ನು ಹರಸಿದ್ದಾರೆ
ಧಾರಾವಾಹಿಯ ಪ್ರೋಮೋ ನೋಡಿದರೆ ಎಂಥವರಿಗೂ ಖುಷಿ ಎನಿಸುತ್ತದೆ. ಅದರಲ್ಲೂ ನೇಹಾ ಗೌಡಗೆ ತುಂಬಾ ಆತ್ಮೀಯರಾಗಿರುವ ಅನುಪಮಾ ಆನಂದ್ ಕೂಡ ಈ ಪ್ರೋಮೋ ನೋಡಿ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಅದಿತಿ ಪ್ರಭುದೇವ, ಸಿಹಿ ಕಹಿ ಚಂದ್ರು, ಅಮೃತಾ ಅಯ್ಯಂಗಾರ್ ಸೇರಿದಂತೆ ಹಲವರು ಪ್ರೋಮೋ ನೋಡಿ ಖುಷಿ ಪಟ್ಟಿದ್ದಾರೆ. ಮಗುವಿನ ಇನೋಸೆಂಟ್ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.