Neha Gowda; ಮಗು ಆರೋಗ್ಯಕ್ಕೆ ಯೋಗ ಮಾಡಿದ ನೇಹಾ : ಗೊಂಬೆಯ ಬೇಬಿ ಬಂಪ್ ನೋಡಿ ಖುಷಿ ಪಟ್ಟ ಫ್ಯಾನ್ಸ್..!
ಲಕ್ಷ್ಮೀ ಬಾರಮ್ಮ ಜೋಡಿಗಳಾದ ಚಿನ್ನು ಮತ್ತು ಗೊಂಬೆ ಇಬ್ಬರೂ ಒಂದೇ ಸಮಯದಲ್ಲಿ ಬಡ್ತಿ ಪಡೆದಿದ್ದಾರೆ. ಗರ್ಭಿಣಿಯರಿಬ್ಬರೂ ತಾಯ್ತನದ ಸಂತಸವನ್ನು ಅನುಭವಿಸುತ್ತಿದ್ದಾರೆ. ನಟಿ ನೇಹಾ ಗೌಡ ಈಗಲೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದು, ಇಂದಿಗೂ ಅವರನ್ನು ಅಭಿಮಾನಿಗಳು ಗೊಂಬೆ ಎಂದೇ ಕರೆಯುತ್ತಾರೆ. ಇನ್ನು ನೇಹಾ ಗೌಡ ಅವರು ಗರ್ಭೀಣಿ. ಆದರೂ ಯೋಗ ಮಾಡುತ್ತಿರುವ ನೇಹಾ ಅವರು ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್ ಹ್ಯಾಪಿ ಆಗಿದ್ದಾರೆ.
ಗೊಂಬೆ ಬೇಬಿ ಬಂಪ್
ನೇಹಾ ಅವರ ಮೊದಲ ಬೇಬಿ ಬಂಪ್ ಫೋಟೋಗಳಿಗೆ ಸಾಕಷ್ಟು ಲೈಕ್‌ಗಳು ಬಂದಿವೆ. ಅಲ್ಲದೇ, ಎಲ್ಲರೂ ನೇಹಾ ಅವರ ಬೇಬಿ ಬಂಪ್ ಕಂಡು ವಿಶ್ ಮಾಡಿದ್ದಾರೆ. ನೇಹಾ ಅವರಿಗೆ ಈಗ ಎಷ್ಟು ತಿಂಗಳಿರಬಹುದು ಎಂದು ಹಲವರು ಕುತೂಹಲಗೊಂಡಿದ್ದು, ಈಗ ಎಷ್ಟು ತಿಂಗಳು ಎಂದು ಸುಮಾರು ಮಂದಿ ಪ್ರಶ್ನೆ ಮಾಡಿದ್ದಾರೆ. ಮುದ್ದು ಗೊಂಬೆ ಗರ್ಭದಲ್ಲಿ ಪುಟಾಣಿ ಗೊಂಬೆ ಬರುತ್ತಿರುವುದಕ್ಕೆ ನೇಹಾ ಕುಟುಂಬದಲ್ಲಿ ಇರುವಷ್ಟೇ ಸಂತಸವನ್ನೂ ಅಭೀಮಾನಿಗಳು ಪಟ್ಟಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ನೇಹಾ ಅವರು ಪುಟಾಣಿ ಕಂದಮ್ಮನಿಗೆ ಜನ್ಮ ನೀಡಲಿದ್ದು, ಅಭಿಮಾನಿಗಳು ಮುದ್ದು ಮಗುವನ್ನು ನೋಡಲು ಕಾತುರರಾಗಿದ್ದಾರೆ.

ನೇಹಾ ಗೌಡ ಅವರ ನಟನಾ ಪಯಣ
ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಗೊಂಬೆ ಎಂದೇ ಜನಪ್ರಿಯತೆ ಪಡೆದಿರುವ ನೇಹಾ ಗೌಡ, ತೆಲುಗು ಹಾಗೂ ತಮಿಳಿನ ಧಾರಾವಾಹಿಗಳಲ್ಲಿ ಫೇಮಸ್ ಆಗಿದ್ದಾರೆ. ಧಾರಾವಾಹಿ ಅಷ್ಟೇ ಅಲ್ಲದೇ, ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಗೆ ನೇಹಾ ಗೌಡ ಅವರು ಹಲವು ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ. ಸರಿ ಸುಮಾರು 6 ವರ್ಷಗಳ ಕಾಲ ಮೂಡಿ ಬಂದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ನೇಹಾ ಗೌಡ ಫೇಮಸ್ ಆಗಿದ್ದರು. ಕಳೆದ ವರ್ಷ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಂಡ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದರು. ಸದ್ಯ ಗರ್ಭಿಣಿ ಆಗಿದ್ದು ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ.
ತ್ರಿ-ಭಾಷಾ ನಟಿ ನೇಹಾ ಗೌಡ
ಇನ್ನು ನಟಿ ನೇಹಾ ಗೌಡ ಅವರ ಮೊದಲ ಧಾರಾವಾಹಿ ಸ್ವಾತಿ ಚುನುಕುಲು. ಈ ಧಾರಾವಾಹಿ ನೇಹಾ ಗೌಡ ಅವರಿಗೆ ಅಷ್ಟೇನು ಹೆಸರು ಕೊಡದಿದ್ದರೂ, ಇವರ ನಟನೆಗೆ ಮನ ಸೋಲದವರಿಲ್ಲ. ಇದಾದ ಬಳಿಕ ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಕಲ್ಯಾಣ ಪರಿಸು ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ಮೇಲೆ ಕಿರುತೆರೆಯಲ್ಲಿ ಮುಂದುವರೆಯುವ ಆಸೆ ಏನೂ ಇರಲಿಲ್ಲ. ಓದು, ಕೆರಿಯರ್ ಎಂದು ನೇಹಾ ತಮ್ಮ ಲೈಫ್ ನಲ್ಲಿ ಬ್ಯುಸಿಯಾಗಿದ್ದರು. ಬಿಕಾಂ ಓದುತ್ತಿರುವಾಗ ನೇಹಾ ಗೌಡ ಅವರು ಫ್ಯಾಷನ್ ಡಿಸೈನರ್ ಆಗಬೇಕು ಎಂದು ಆಸೆ ಪಟ್ಟಿದ್ದರಂತೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಗೊಂಬೆ ಪಾತ್ರ ಚೆನ್ನಾಗಿದೆ ಎಂದು ನಟಿಸಲು ಮುಂದಾದರಂತೆ. ಕನ್ನಡದ ಜೊತೆಗೆ ತೆಲುಗು, ತಮಿಳು ಭಾಷೆಗಳಲ್ಲೂ ಕೂಡ ನೇಹಾ ಗೌಡ ಕೆಲಸ ಮಾಡಿದ್ದಾರೆ.

ಫ್ಯಾಮಿಲಿ ಎಂದರೆ ಬಹಳ ಇಷ್ಟ
ಬೆಂಗಳೂರಿನಲ್ಲಿ ಚಂದನ್ ಜೊತೆ ಸಪ್ತಪದಿ ತುಳಿದ ನೇಹಾ ಗೌಡ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಮದುವೆಯಾಗಿ ಫಾರಿನ್ ನಲ್ಲಿದ್ದ ನೇಹಾ ನಂತರ ರಾಜಾ ರಾಣಿ, ಬಿಗ್ ಬಾಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರು. ಗರ್ಭಿಣಿ ಆಗುವ ಮುನ್ನ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ನಟನೆಯ ಜೊತೆಗೆ ಆಗಾಗ ಟ್ರಿಪ್ ಗೆ ಹೋಗುವುದು ಫೋಟೋಶೂಟ್ ಮಾಡಿಸುವುದನ್ನು ನೇಹಾ ಅವರು ಮಾಡುತ್ತಿರುತ್ತಾರೆ. ಹೆಚ್ಚಾಗಿ ಪ್ಯಾಮಿಲಿ ಜೊತೆಗೆ ಕಾಲ ಕಳೆಯಲು ಇಚ್ಛಿಸುತ್ತಾರೆ.


Click it and Unblock the Notifications











