ವಯಸ್ಸಿಗೂ ಮೀರಿದ ಪಾತ್ರಕ್ಕೆ ಜೀವ ತುಂಬಿದ ನೇತ್ರಾ ಕಿರುತೆರೆಯ ಫೇಮಸ್ ಖಳನಾಯಕಿ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಶ್ರೀರಸ್ತು ಶುಭಮಸ್ತು'. ಈ ಧಾರಾವಾಹಿಯಲ್ಲಿ ಕನ್ನಡದ ಜನಪ್ರಿಯ ಶಾರ್ವರಿ ಪಾತ್ರಧಾರಿ ನಟಿ ನೇತ್ರಾ ಜಾದವ್ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಬಹಳಷ್ಟು ಅಭಿಮಾನಿಗಳನ್ನು ಹೊಂದಿರುವ ನಟಿ ನೇತ್ರಾ ಜಾಧವ್ ಅವರು ಈ ಹಿಂದೆ ಬಹಳಷ್ಟು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು! ನೇತ್ರಾ ಜಾಧವ್ ಅವರದ್ದು ಹೊಸ ಮುಖದಂತೆ ಕಂಡರೂ ಅವರು ಹಲವಾರು ಧಾರಾವಾಹಿಗಳಿಂದ ನಟಿಸಿದ್ದಾರೆ. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀರಸ್ತು ಶುಭಮಸ್ತು' ಎಂಬ ಪಾಪ್ಯುಲರ್ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನೇತ್ರಾ ಜಾಧವ್ ಅವರು ತಮ್ಮ ಅದ್ಬುತ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ.

ವಯಸ್ಸಿಗೂ ಮೀರಿದ ಪಾತ್ರ
ಅಸಲಿಗೆ ವಯಸ್ಸಿಗೂ ಮೀರಿರುವಂತಹ ಪಾತ್ರವನ್ನು ನಿಭಾಯಿಸುತ್ತಿರುವ ಇವರು ಬಹಳಷ್ಟು ಅಭಿಮಾನಿಗಳನ್ನು ಈಗಾಗಲೇ ಪಡೆದಿದ್ದಾರೆ. ಈ ಹಿಂದೆ ಉದಯವಾಹಿನಿಯಲ್ಲಿ ಪ್ರಚಾರವಾಗುತ್ತಿದ್ದ ರಥಸಪ್ತಮಿ, ಆಕೃತಿ, ಸುಂದರಿ ಇತ್ಯಾದಿ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ನಟಿ ನೇತ್ರಾ ಜಾದವ್ ಅವರಿಗಿದೆ.
ಇನ್‌ಸ್ಟಾಗ್ರಾಂನಲ್ಲೂ ಸಕತ್ತಾಗಿದೆ ನೇತ್ರಾ ಹವಾ
ಇನ್ನು ನಿಜ ಜೀವನದಲ್ಲಿ ಆಕೆಗೆ ಮದುವೆಯಾಗಿ ಎರಡು ಮಕ್ಕಳು ಇದ್ದಾರೆ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ತಂಡದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಇವರು ಬಿಡುವಿದ್ದಾಗೆಲ್ಲ ತಮ್ಮ ಸಹನಟರೊಂದಿಗೆ ರೀಲ್‌ಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿಯೂ ಬಹಳಷ್ಟು ಪಾಪುಲಾರಿಟಿಯನ್ನು ಪಡೆದಿದ್ದಾರೆ.

ಹಲವಾರು ಧಾರಾವಾಹಿಗಳಲ್ಲಿ ಮುಂಚೆ ಈಕೆ ಕಾಣಿಸಿಕೊಂಡಿದ್ದರೂ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಇವರಿಗೆ ಇವರ ನಟನೆ ಅದ್ಭುತ ನಟನೆಗೆ ಒಂದು ದೊಡ್ಡ ಬ್ರೇಕ್ ಕೊಟ್ಟಿದೆ ಎಂದರೆ ತಪ್ಪಾಗಲಾರದೇನೋ!


Click it and Unblock the Notifications











