For Quick Alerts
  ALLOW NOTIFICATIONS  
  For Daily Alerts

  ವಿವಾದಕ್ಕೀಡಾದ ಫೋಟೊ ಶೂಟ್: ನಟಿಯ ಬಂಧನ

  |

  ನಟಿಯರು ಆಗಾಗ್ಗೆ ತಮ್ಮ ಫೋಟೊ ಶೂಟ್ ಮಾಡಿಸುತ್ತಲೇ ಇರುತ್ತಾರೆ. ತಮ್ಮ ಅಂದ ಪ್ರದರ್ಶಿಸಲು ಮಾಡುವ ಈ ಫೋಟೊ ಶೂಟ್‌ಗಳು ಕೆಲವು ಬಾರಿ ನಟಿಯರಿಗೆ ಸಮಸ್ಯೆ ತಂದೊಡ್ಡುವುದೂ ಇದೆ. ಮಲಯಾಳಂ ನಟಿಯೊಬ್ಬರು ಫೋಟೊಶೂಟ್ ಮಾಡಿಸಿದ ಕಾರಣದಿಂದಲೇ ಜೈಲು ಸೇರಿದ್ದಾರೆ.

  ಮಲಯಾಳಂ ಕಿರುತೆರೆಯ ಖ್ಯಾತ ನಟಿ ನಿಮಿಷಾ ಬಿಜೊ ಕೆಲವು ದಿನಗಳ ಹಿಂದೆ ಫೋಟೊಶೂಟ್ ಮಾಡಿಸಿದ್ದರು. ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

  ಕೇರಳದ ಪಥನಂತಿಟ್ಟ ಜಿಲ್ಲೆಯ ಅರಣ್‌ಮುಲಾ ದೇವಾಲಯದಲ್ಲಿ ನಟಿ ನಿಮಿಷಾ ಬಿಜೊ ಫೋಟೊಶೂಟ್ ಮಾಡಿಸಿದ್ದರು. ನಟಿಯ ಫೋಟೊಶೂಟ್ ದೇವಾಲಯದ ನಿಯಮಗಳ ಉಲ್ಲಂಘನೆಯಾದ್ದರಿಂದ ದೇವಾಲಯದ ಸಮಿತಿಯವರು ದೂರು ನೀಡಿದ್ದರು. ಹಾಗಾಗಿ ಪೊಲೀಸರು ನಟಿಯನ್ನು ಹಾಗೂ ಆಕೆಯ ಸ್ನೇಹಿತನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

  ನಟಿಯು ಪಲಿಯೋಡಮ್ ಎಂಬ ದೋಣಿಯ ಮೇಲೆ ಕುಳಿತುಕೊಂಡು ಫೋಟೊಶೂಟ್ ಮಾಡಿಸಿಕೊಂಡಿದ್ದರು. ಪಲಿಯೋಡಮ್ ಹಾವಿನ ರಚನೆಯ ದೋಣಿಗಳಾಗಿದ್ದು, ಇವುಗಳನ್ನು ಪಂಪಾ ನದಿಯಲ್ಲಿ ದೇವರ ಉತ್ಸವ ಮಾಡಲು ಬಳಸಲಾಗುತ್ತದೆ. ಈ ದೋಣಿಯ ಮೇಲೆ ಕುಳಿತು ನಟಿ ನಿಮಿಷಾ ಫೋಟೊ ಶೂಟ್ ಮಾಡಿಸಿದ್ದರು.

  ಪಾಲಿಸಿಕೊಂಡು ಬಂದಿರುವ ನಿಯಮದ ಪ್ರಕಾರ ಪಲಿಯೋಡಮ್ ಮೇಲೆ ಮಹಿಳೆಯರು ಹತ್ತುವಂತಿಲ್ಲ. ನಿಮಿಷ ಅದರ ಶೂ ಧರಿಸಿಕೊಂಡೆ ಹತ್ತಿ ಫೋಟೊಶೂಟ್ ಮಾಡಿಸಿದ್ದರು. ನಿಮಿಷಾರ ಈ ನಡೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ದೇವಾಲಯವರ ದೂರು ಆಧರಿಸಿ ನಟಿಯನ್ನು ಹಾಗೂ ಆಕೆಯ ಚಿತ್ರ ತೆಗೆದ ಗೆಳೆಯನನ್ನು ಪೊಲೀಸರು ಬಂಧಿಸಿ ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

  ಘಟನೆ ಬಳಿಕ ತಾವು ಅಪ್‌ಲೋಡ್ ಮಾಡಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಿಂದ ಹಿಂಪಡೆದಿರುವ ನಟಿ ನಿಮಿಷಾ, ''ಪಲಿಯೋಡಾ ಮೇಲೆ ಹತ್ತುವುದು ತಪ್ಪು ಎಂದು ಗೊತ್ತಿರಲಿಲ್ಲ. ಪಲಿಯೋಡಾ ಕೇವಲ ದೇವರ ಕಾರ್ಯಕ್ಕೆ ಮಾತ್ರವೇ ಬಳಸುತ್ತಾರೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ನನ್ನ ತಪ್ಪು ಅರಿವಾಗುತ್ತಿದ್ದಂತೆ ಎಲ್ಲ ಚಿತ್ರಗಳನ್ನು ಹಿಂಪಡೆದಿದ್ದೇನೆ. ಆದರೆ ಆ ಘಟನೆ ಆದಾಗಿನಿಂದಲೂ ನನಗೆ ಹಲವರು ಕರೆ ಮಾಡಿ ಸಂದೇಶ ಕಳಿಸಿ ಬೆದರಿಕೆಗಳನ್ನು ಹಾಕುತ್ತಿದ್ದಾರೆ'' ಎಂದಿದ್ದಾರೆ ನಟಿ.

  ಕೆಲವು ತಿಂಗಳ ಹಿಂದೆ ನಟಿ ಪೂನಂ ಪಾಂಡೆ ಮಾಡಿಸಿದ್ದ ಫೋಟೊ ಶೂಟ್‌ನಿಂದಾಗಿ ಗೋವಾ ಪೊಲೀಸರು ನಟಿಯನ್ನು ಬಂಧಿಸಿದ್ದರು. ಗೋವಾದ ಕಡಲ ತಡಿಯಲ್ಲಿ ಪೂನಂ ಪಾಂಡೆ ವಿಡಿಯೋ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ ಆ ಪ್ರದೇಶವು ನಿಷೇಧಿತ ಪ್ರದೇಶವಾಗಿತ್ತು. ಈ ವಿಚಾರ ಗೋವಾ ಅಸೆಂಬ್ಲಿಯಲ್ಲಿಯೂ ಸದ್ದಾಗಿತ್ತು. ನಟಿಯನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

  English summary
  Malayalam TV actress Nimisha Bijo arrested for doing photo shoot on sacred baot palliyodam. Later she released on bail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X