ಕಿರುತೆರೆ ನಟಿ ನಿರುಷಾ ಗೌಡ ಹುಟ್ಟು ಹಬ್ಬದ ಸಂಭ್ರಮಾಚರಣೆ ಹೇಗಿತ್ತು ?

By ಪ್ರಿಯಾ ದೊರೆ

ಕಳೆದ ವರ್ಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಂಡ ಹೆಂಡತಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ನಿರುಷಾ ಗೌಡ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಗಂಡ ಹೆಂಡತಿ ಧಾರಾವಾಹಿಯಲ್ಲಿ ಸ್ನೇಹಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿತ್ತು. ಸ್ನೇಹಕ್ಕೋಸ್ಕರ ಬಾಲ್ಯ ಸ್ನೇಹಿತರು ಜೀವನದಲ್ಲಿ ಯಾವ ರೀತಿಯ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ ಎಂಬುದನ್ನು ತೋರಿಸಿಕೊಡಲಾಗಿತ್ತು.

ಧಾರಾವಾಹಿಯಲ್ಲಿ ಸ್ವಾತಿ ಮತ್ತು ಮುರಳಿ ಇಬ್ಬರೂ ಬಾಲ್ಯ ಸ್ನೇಹಿತರು. ಬಾಲ್ಯದಿಂದಲೂ ಒಟ್ಟಿಗೆ ಬೆಳೆದಿದ್ದರೂ ಕೂಡ ಒಂದು ದಿನವೂ ಮದುವೆಯಾಗಬೇಕು ಎಂದುಕೊಂಡಿರಲಿಲ್ಲ. ಆದರೆ ಸಂದರ್ಭಕ್ಕೆ ಸಿಲುಕಿ ಇಬ್ಬರೂ ಒಟ್ಟಿಗೆ ಬಾಳುವಂತಾಗುತ್ತದೆ.

actress nirusha gowda birthday

ಡಿಫರೆಂಟ್ ಪಾತ್ರದಲ್ಲಿ ನಟಿಸಿದ್ದ ನಿರುಷಾ

ಈ ಧಾರಾವಾಹಿಯು ಈಗ ಮುಕ್ತಾಯಗೊಂಡಿದ್ದು, ವೀಕ್ಷಕರಿಗೆ ಧಾರಾವಾಹಿ ಇಷ್ಟವಾಗಿತ್ತು. ಇನ್ನು ನಟಿ ನಿರುಷಾ ಗೌಡ ಅವರು ಈ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ನಾಯಕಿ ಸ್ವಾತಿಗೆ ಅನ್ಯಾಯವಾಗಬಾರದು, ಆಕೆ ಒಂಟಿ ಆಗಬಾರದು ಎಂಬ ಕಾರಣಕ್ಕೆ ನಾಯಕ ಮುರಳಿ ಸ್ವಾತಿ ಜೊತೆಗೆ ಜೀವನ ನಡೆಸುತ್ತಾರೆ. ಸ್ವಾತಿ ರಾಹುಲ್ ಎಂಬ ಹುಡುಗನನ್ನು ಪ್ರೀತಿಸಿ ಮೋಸ ಹೋಗಿರುತ್ತಾಳೆ. ರಾಹುಲ್ ಬೇಕಂತಲೇ ಸ್ವಾತಿಯನ್ನು ಗರ್ಭಿಣಿಯನ್ನಾಗಿ ಮಾಡಿ ಪರಾರಿಯಾಗಿರುತ್ತಾನೆ. ಹೊಟ್ಟೆಯಲ್ಲಿ ಮಗು ಹೊತ್ತುಕೊಂಡು ಬೀದಿ ಪಾಲಾಗುತ್ತಿದ್ದ ಸ್ವಾತಿಯ ರಕ್ಷಣೆಗೆ ಮುರಳಿ ನಿಂತಿದ್ದಾನೆ. ತನ್ನ ನಿಶ್ಚಿತಾರ್ಥವನ್ನು ನಿಲ್ಲಿಸಿ, ಸ್ವಾತಿಯನ್ನು ಮದುವೆಯಾಗಿತ್ತಾನೆ. ಇವರಿಬ್ಬರೂ ಕೂಡ ಸ್ನೇಹಿತರಾಗಿಯೇ ಒಬ್ಬರನ್ನೊಬ್ಬರು ನಡೆಸಿಕೊಳ್ಳುತ್ತಿರುವ ರೀತಿಗೆ ವೀಕ್ಷಕರು ಫಿದಾ ಆಗಿದ್ದರು. ಸ್ನೇಹಿತರೆಂದರೆ ಹೀಗಿರಬೇಕಪ್ಪ ಎಂದು ಹೇಳುತ್ತಿದ್ದರು.

ಅಮ್ಮನ ಮದುವೆ ಮೂಲಕ ಕಿರುತೆರೆಗೆ ಎಂಟ್ರಿ

ನಟಿ ನಿರುಷಾ ಗೌಡ ಅವರಿಗೆ ಗಂಡ ಹೆಂಡತಿ ಧಾರಾವಾಹಿ ಮೊದಲ ಧಾರಾವಾಹಿ ಏನಲ್ಲ. ಈ ಹಿಂದೆಯೂ ಕಿರುತೆರೆಯಲ್ಲಿ ನಿರುಷಾ ಅವರು ಕಾಣಿಸಿಕೊಂಡಿದ್ದಾರೆ. ಸಿರಿ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಅಮ್ಮನ ಮದುವೆ ಧಾರಾವಾಹಿಯಲ್ಲಿ ನಿರುಷಾ ಅವರು ನಾಯಕಿಯ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮ್ಮನ ಮದುವೆ ಧಾರಾವಾಹಿಯಲ್ಲಿ ಭವ್ಯಶ್ರೀ ಅವರು ನಾಯಕಿ ಆಗಿ ನಟಿಸಿದ್ದಾರೆ. ಇವರ ಮಗಳ ಪಾತ್ರದಲ್ಲಿ ನಿರುಷಾ ಅವರು ಕಾಣಿಸಿಕೊಂಡಿದ್ದರು. ಇನ್ನು ಗಂಡ ಹೆಂಡತಿ ಧಾರಾವಾಹಿ ಮುಗಿದ ಬಳಿಕ ಸೈಲೆಂಟ್ ಆಗಿದ್ದಾರೆ.

actress nirusha gowda birthday

ಮಾಡ್ರರ್ನ್ ಉಡುಗೆಯಲ್ಲೂ ಸೂಪರ್

ಇದೆಲ್ಲಾ ಬಿಡಿ ನಿರುಷಾ ಗೌಡ ಅವರು ಕಿರುತೆರೆಗೆ ಪಾದಾರ್ಪಣೆ ಮಾಡುವ ಮುನ್ನ ಮಾಡೆಲ್ ಆಗಿದ್ದರು. ಧಾರಾವಾಹಿಯಲ್ಲಿ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ನಿರುಷಾ ಗೌಡ ಅವರು ಮಾಡ್ರನ್ ಉಡುಗೆಯಲ್ಲೂ ಮುದ್ದಾಗಿ ಕಾಣಿಸುತ್ತಾರೆ. ಮಾಡೆಲ್ ಆಗಿರುವ ನಿರುಷಾ ಗೌಡ ಅವರು ಸಾಕಷ್ಟು ಫೋಟೋಶೂಟ್ ಗಳನ್ನು ಮಾಡಿಸಿಕೊಂಡಿದ್ದಾರೆ. ಇದರ ಜೊತೆಗೆ ಕೆಲ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆಕ್ಟೀವ್ ಆಗಿ ಇರದಿದ್ದರೂ, ಆಗಾಗ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ.

ನಿರುಷಾ ಗೌಡಗೆ ಹುಟ್ಟುಹಬ್ಬದ ಸಂಭ್ರಮ

ಈ ಹಿಂದೆ ನಿರುಷಾ ಗೌಡ ಅವರು ತಮ್ಮ ಬೆನ್ನಿನ ಮೇಲೆ ಟೆಂಪ್ರವರಿ ಆಗಿ ಮಿನಿನ ಟ್ಯಾಟೂ ಹಾಕಿಸಿಕೊಂಡಿದ್ದರು. ಶ್ವಾನವನ್ನು ಸಾಕಿರುವ ನಿರುಷಾ ಗೌಡ ಅವರು ಶ್ವಾನದ ಜೊತೆಗೆ ಫೋಟೋ ತೆಗಿಸಿಕೊಂಡು ಶೇರ್ ಮಾಡಿದ್ದಾರೆ. ಇನ್ನು ನಿರುಷಾ ಗೌಡ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ನಿರುಷಾ ಅವರ ಹುಟ್ಟುಹಬ್ಬವನ್ನು ಖುಷಿಯಿಂದ ಸೆಲಬ್ರೇಟ್ ಮಾಡಿದ್ದಾರೆ. ನಿರುಷಾ ಗೌಡ ಅವರಿಗೆ ವಿಶ್ ಮಾಡಿದ್ದಾರೆ. ಗೆಳೆಯರು, ಅಭಿಮಾನಿಗಳು ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಪೋಸ್ಟ್ ಗಳನ್ನು ನಿರುಷಾ ಗೌಡ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

More from Filmibeat

English summary
ganda hendathi serial actress nirusha gowda happy birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X