'ನಿನ್ನ ಜೊತೆ ನನ್ನ ಕಥೆ' ಅಂತ ಹೊಸ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ ನಿರುಷಾ ಗೌಡ

By ಅನಿತಾ ಬನಾರಿ

ವಿಭಿನ್ನ ಧಾರಾವಾಹಿಗಳ ಜೊತೆಗೆ ವಿನೂತನ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ವಾಹಿನಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯೂ ಕೂಡಾ ಒಂದು. ಇಂತಿಪ್ಪ ಸುವರ್ಣ ವಾಹಿನಿಯಲ್ಲಿ ಮಗದೊಂದು ಹೊಸ ಧಾರಾವಾಹಿ ಶುರುವಾಗಲಿದೆ. 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯು ಶೀಘ್ರದಲ್ಲಿ ಶುರುವಾಗಲಿದ್ದು, ಅದರ ಪ್ರೋಮೋವನ್ನು ವಾಹಿನಿ ರಿಲೀಸ್ ಮಾಡಿದೆ. ಧಾರಾವಾಹಿಯ ನಾಯಕನಾಗಿ ನಿರಂಜನ್ ನಟಿಸಿದ್ದರೆ, ನಾಯಕಿಯಾಗಿ ನಿರುಷಾ ಗೌಡ ಅಭಿನಯಿಸಲಿದ್ದಾರೆ.

'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯ ಪ್ರೋಮೋದಲ್ಲಿ ನಾಯಕ ನಾಯಕಿಯ ನಡುವೆ ಒಪ್ಪಂದದ ಮೂಲಕ ಈ ಮದುವೆ ನಡೆಯುತ್ತದೆ. ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಹೀರೋ ತಾನು ಮದುವೆ ಆಗುವ ಹುಡುಗಿ ಬಳಿ ಮುಂಚೆ ಮಾತನಾಡಿಕೊಂಡಿರುವ ಹಾಗೆ 1 ವರ್ಷ ಮಾತ್ರ ನೀನು ನನ್ನ ಹೆಂಡ್ತಿ ಆಗಿರುತ್ತೀಯಾ. ಇದು ಒಪ್ಪಂದದ ಮದುವೆ ಅಂತ ನಮ್ಮ ಮನೆಯಲ್ಲಿ ಯಾರಿಗೂ ಗೊತ್ತಾಗಬಾರದು. ನಿನ್ನ ತಾಯಿ ನಿರಪರಾಧಿ ಅಂತ ಸಾಬೀತುಪಡಿಸೋಕೆ ನಾನು ಪ್ರಯತ್ನಪಡ್ತೀನಿ ಒಪ್ಪಂದಕ್ಕೆ ಸಹಿ ಮಾಡು ಎಂದು ಹೇಳುತ್ತಾನೆ. ಈ ಒಪ್ಪಂದದ ಮದುವೆ ಯಾಕೆ? ನಾಯಕ ನಾಯಕಿಯ ಉದ್ದೇಶ ಏನು ಎಂಬುದು ತಿಳಿಯಬೇಕಿದೆ.

Actress Nirusha Gowda is back on television with a new serial Ninna Jothe Nanna Kathe

ಅಂದ ಹಾಗೇ ಈ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ನಿರುಷಾ ಗೌಡ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಂಡ ಹೆಂಡ್ತಿ' ಧಾರಾವಾಹಿಯಲ್ಲಿ ನಾಯಕಿ ಸ್ವಾತಿ ಪಾತ್ರದಲ್ಲಿ ನಿರುಷಾ ಗೌಡ ಅಭಿನಯಿಸಿದ್ದರು. ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ನೂರು ಸಂಚಿಕೆ ಪೂರೈಸುತ್ತಿದ್ದಂತೆ ಪ್ರಸಾರ ನಿಲ್ಲಿಸಿತ್ತು. ತದ ನಂತರ ಕಿರುತೆರೆಯಿಂದ ದೂರವಿದ್ದ ನಿರುಷ ಗೌಡ ಇದೀಗ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳುತ್ತಿದ್ದಾರೆ.

ಅಂದ ಹಾಗೆ, 'ಅಮ್ಮನ ಮದುವೆ' ಧಾರಾವಾಹಿಯ ಮೂಲಕ ನಿರುಷಾ ಗೌಡ ಅವರ ನಟನಾ ಪಯಣ ಶುರುವಾಗಿತ್ತು. ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಮ್ಮನ ಮದುವೆ' ಧಾರಾವಾಹಿಯಲ್ಲಿ ನಾಯಕಿ ನವಮಿ ಪಾತ್ರದಲ್ಲಿ ಅಭಿನಯಿಸಿದ್ದ ನಿರುಷಾ ಗೌಡ ಮೊದಲ ಧಾರಾವಾಹಿಯಲ್ಲಿ ನಾಯಕಿಯಾಗಿ ಮೋಡಿ ಮಾಡಿದ ಬೆಡಗಿ. ಮುಂದೆ ಎರಡನೇ ಧಾರಾವಾಹಿಯಲ್ಲಿಯೂ ನಾಯಕಿಯಾಗಿ ಮಿಂಚಿದ ಈಕೆ ಇದೀಗ ಮಗದೊಂದು ಧಾರಾವಾಹಿಯ ಮೂಲಕ ನಟನಾ ಕಂಪನ್ನು ಪಸರಿಸಲು ಬರುತ್ತಿದ್ದಾರೆ.

Actress Nirusha Gowda is back on television with a new serial Ninna Jothe Nanna Kathe

ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಿರುಷಾ ಗೌಡ ಅವರು ನಟನೆಯ ಹೊರತಾಗಿ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡ ಬೆಡಗಿ. ಈಗಾಗಲೇ ಕೆಲವೊಂದು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಮೋಡಿ ಮಾಡಿರುವ ನಿರುಷಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್. ಆಗಾಗ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುವ ಈಕೆ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಂದ ಹಾಗೇ ಕೇವಲ ಟ್ರೆಡಿಶನಲ್ ಡ್ರೆಸ್‌ನಲ್ಲಿ ಮಾತ್ರವಲ್ಲದೇ ಗ್ಲಾಮರಸ್ ಡ್ರೆಸ್‌ನಲ್ಲಿಯೂ ನಿರುಷಾ ನೆಟ್ಟಿಗರ ಮನ ಸೆಳೆಯಲಿದ್ದಾರೆ.

More from Filmibeat

English summary
Actress Nirusha Gowda is back on television with a new serial Ninna Jothe Nanna Kathe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X