ಪ್ರೀತಿಲಿ ಬಿದ್ರಾ ನಿಶಾ ರವಿಕೃಷ್ಣನ್? ಆಕೆ ಬರೆದ ಸಾಲುಗಳು ಯಾರಿಗಾಗಿ..?
ಕನ್ನಡ ಕಿರುತೆರೆಯಲ್ಲಿ ಟಾಪ್ ಒನ್ ಸೀರಿಯಲ್ ಆಗಿರುವ ಧಾರಾವಾಹಿ 'ಗಟ್ಟಿಮೇಳ'. ಈ ಧಾರಾವಾಹಿಯ ನಾಯಕಿ ಅಮೂಲ್ಯ ಪಾತ್ರದ ನಟಿಯ ನಿಜವಾದ ಹೆಸರು ನಿಶಾ ರವಿಕೃಷ್ಣನ್. ರೌಡಿ ಬೇಬಿ ಎಂದೇ ಖ್ಯಾತಿ ಗಳಿಸಿರುವ ನಿಶಾ ರವಿಕೃಷ್ಣನ್, ಸಿಂಗರ್ ಹಾಗೂ ಡ್ಯಾನ್ಸರ್ ಕೂಡ ಆಗಿದ್ದಾರೆ. ಖಾಸಗಿ ವಾಹಿನಿಯಲ್ಲಿ 12ನೇ ವಯಸ್ಸಿಗೆ ನಿರೂಪಕಿ ಆಗಿದ್ದ ನಿಶಾ ರವಿಕೃಷ್ಣನ್.
ಸತತವಾಗಿ ನಾಲ್ಕು ವರ್ಷಗಳ ಕಾಲ ನಿರೂಪಕಿಯಾಗಿದ್ದರು. ಸದ್ಯ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಿಶಾ ಅವರಿಗೆ ಎರಡೂ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ. ಇದೀಗ ಹೊಸ ಫೋಟೋಗಳನ್ನು ಹಾಕಿ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ್ದಾರೆ.

ನಿಶಾ ರವಿಕೃಷ್ಣನ್ ಅವರು ಬಾಲ ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿಕೊಟ್ಟವರು. ಈಗ ಕಿರುತೆರೆಯ ಸೂಪರ್ ನಟಿಯಾಗಿ ಎಲ್ಲರ ಮನ ಗೆದ್ದಿದ್ದಾರೆ. ಬಾಲ್ಯದಲ್ಲೇ ಕ್ಯಾಮರಾ ಫೇಸ್ ಮಾಡುವುದನ್ನು ಕಲಿತಿದ್ದರು. 'ಸರ್ವ ಮಂಗಳ ಮಾಂಗಲ್ಯೇ' ಎಂಬ ಸೀರಿಯಲ್‌ನಲ್ಲಿ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದರು. ತದನಂತರ ನಿಶಾ 'ಗಟ್ಟಿಮೇಳ' ಸೀರಿಯಲ್ ಮೂಲಕ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಪಾತ್ರದಲ್ಲಿ ಮಿಂಚುತ್ತಿರುವ ನಿಶಾ ಅವರು ಹಲವು ಪ್ರೇಕ್ಷಕರು ಮೆಚ್ಚಿದ್ದಾರೆ.
ತೆಲುಗಿನಲ್ಲೂ ಮಿಂಚುತ್ತಿರುವ ನಿಶಾ
ಧಾರಾವಾಹಿ ಮಾತ್ರವಲ್ಲದೇ ಸಿನಿಮಾದಲ್ಲೂ ನಿಶಾ ಬಣ್ಣ ಹಚ್ಚಿದ್ದಾರೆ. 'ಅದೊಂದಿತ್ತು ಕಾಲ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. 'ಇಷ್ಟಕಾಮ್ಯ' ಸಿನಿಮಾದ ಹಾಡೊಂದಕ್ಕೆ ಬ್ಯಾಕ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ನಿಶಾ ರವಿಕೃಷ್ಣನ್ ಅವರು ಕನ್ನಡ ಮಾತ್ರವಲ್ಲದೇ, ಕೂಡ ತೆಲುಗಿನಲ್ಲಿ 'ಮುತ್ಯಮಂತ ಮುದ್ದು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನ 'ಅಮ್ಮಾಯಿಗಾರು' ಎಂಬ ತೆಲುಗು ಧಾರಾವಾಹಿಯಲ್ಲೂ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದ ನಟಿ
ಇನ್ನು ನಿಶಾ ಅವರು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿ ಇರುತ್ತಾರೆ. ಫೋಟೋಶೂಟ್ ಮಾಡಿಸಿ ವಿವಿಧ ಉಡುಗೆಯಲ್ಲಿನ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇನ್ ಸ್ಟಾಗ್ರಾಂನಲ್ಲಿ ಲಕ್ಷ ಲಕ್ಷ ಫಾಲೋವರ್ಸ್ ಇದ್ದಾರೆ. ಇನ್ನು ನಿಶಾ ರವಿಕೃಷ್ಣನ್ ಅವರು ಸೀರೆ ಉಟ್ಟು ಮುದ್ದಾಗಿ ಕಾಣುತ್ತಿದ್ದು, ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಬರೀ ಫೋಟೋ ಹಾಕದೇ, ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಇದನ್ನು ನೋಡಿ ಹಲವರಿಗೆ ನಿಶಾ ಅವರ ಮೇಲೆ ಅನುಮಾನ ಬಂದಿದೆ. ಯಾರು ಆ ಹುಡುಗ ಎಂದು ಪ್ರಶ್ನಿಸಿದ್ದಾರೆ? ಕ್ಯಾಪ್ಶನ್ ನೋಡಿದ ಅಭಿಮಾನಿಗಳು ಯಾರಿಗೆ ಈ ಸಾಲುಗಳು ಎಂದು ಪ್ರಶ್ನಿಸಿದ್ದಾರೆ.

ಹೊಂಗನಸ ವ್ಯಾಪಾರಿ ಯಾರು..?
ನಿಶಾ ಅವರು ತಮ್ಮ ಫೋಟೋ ಜೊತೆಗೆ "ನನ್ನ ಎದೆಯ ಬೀದಿಯಲಿ ಹೊಂಗನಸ ವ್ಯಾಪಾರಿ ನೀ" ಎಂದು ಕ್ಯಾಪ್ಶನ್ ಹಾಕಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ "ಜೀವನ ಹೂಬನ ಚಂದ ಈಗ ನಿನ್ನಿಂದ" ಎಂದು ಬರೆದುಕೊಂಡಿದ್ದಾರೆ. ಈಗ ಅಭಿಮಾನಿಗಳು "ಆ ಹೊಂಗನಸ ವ್ಯಾಪಾರಿ ಯಾರು..? ಯಾರಿಂದ ಚೆಂದ" ಎಂದು ಕೇಳಿದ್ದಾರೆ.
ಇನ್ನೂ ಕೆಲವರು ನಿಶಾ ಅವರ ಸಾಲುಗಳಿಗೆ ಸೋತು ಅವರೂ ಕವಿ ಆಗಿದ್ದಾರೆ. ನಿಶಾಳನ್ನು ಗೊಂಬೆ ಎಂದು ಕರೆದು ಖುಷಿಪಟ್ಟಿದ್ದಾರೆ. ಆದರೆ ಬಹುತೇಜ ನಿಶಾ ಸುಮ್ಮನೆ ತಮ್ಮ ಫೋಟೊಗೆ ಆ ರೀತಿ ಕ್ಯಾಪ್ಷನ್ ಕೊಟ್ಟಿದ್ದಾರೆ ಅಷ್ಟೆ, ಸುಮ್ನೆ ಏನೇನೋ ಊಹಿಸಿಕೊಳ್ಳಬೇಡಿ ಎನ್ನುತ್ತಿದ್ದಾರೆ ಒಟ್ನಲ್ಲಿ ನಿಶಾ ಅವರು ಪ್ರೀತಿಯಲ್ಲಿ ಬಿದ್ದಿದ್ದಾರಾ ಎಂಬ ಅನುಮಾವೂ ಶುರುವಾಗಿದೆ. ಆದರೆ, ಈ ಅನುಮಾನಗಳಿಗೆ ನಿಶಾ ಅವರೇ ಉತ್ತರ ನೀಡಬೇಕಿದೆ. ಆದರೆ ಬಹುತೇಜ ನಿಶಾ ಸುಮ್ಮನೆ ತಮ್ಮ ಫೋಟೊಗೆ ಆ ರೀತಿ ಕ್ಯಾಪ್ಷನ್ ಕೊಟ್ಟಿದ್ದಾರೆ ಅಷ್ಟೆ, ಸುಮ್ನೆ ಏನೇನೋ ಊಹಿಸಿಕೊಳ್ಳಬೇಡಿ ಎನ್ನುತ್ತಿದ್ದಾರೆ.


Click it and Unblock the Notifications











