Nivedita Gowda:"200 ಬಟ್ಟೆಗಳನ್ನು ಬದಲಾಯಿಸಿದಂತಾಗಿದೆ " ಸ್ವಾತಂತ್ರ್ಯ ದಿನೋತ್ಸವಕ್ಕೆ ನಿವೇದಿತಾ ಸರ್ಪ್ರೈಸ್!

By ಅನಿತಾ ಬನಾರಿ

ಭಾರತದ 77ನೇ ಸ್ವಾತಂತ್ರ್ಯ ದಿನೋತ್ಸವಕ್ಕೆ ಇಡೀ ದೇಶವೇ ಸಜ್ಜಾಗಿರುವ ಈ ಸಂದರ್ಭದಲ್ಲಿ ಬಾಲಿವುಡ್ ಸ್ಯಾಂಡಲ್ ವುಡ್ ನಟ ನಟಿಯರು ತಮ್ಮ ಕಾಂಟ್ರಿಬ್ಯುಶನ್ ನೊಂದಿಗೆ ಈ ದಿನವನ್ನು ಆಚರಿಸಲು ತಯಾರಾಗಿದ್ದಾರೆ. ಇಂತಹ ನಟ ನಟಿಯರಲ್ಲಿ ನಟಿ ನಿವೇದಿತಾ ಗೌಡ ಕೂಡ ಒಬ್ಬರು. ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರನ್ನು ಮದುವೆಯಾಗಿರುವ ನಟಿ ನಿವೇದಿತಾ ಗೌಡ ಅವರು ಗೊಂಬೆ ಎಂದೇ ಫೇಮಸ್ಸು!

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಬಹಳಷ್ಟು ಖ್ಯಾತಿ ಗಳಿಸಿರುವ ಇವರು ತದನಂತರ ಹಲವಾರು ಶೋಗಳಲ್ಲಿ ಕಾಣಿಸಿಕೊಂಡಿದ್ದಲ್ಲದೇ ಇದೀಗ ಕನ್ನಡದ ಟ್ರೆಂಡಿಂಗ್ ಜೋಡಿಗಳಲ್ಲಿ ಒಬ್ಬರು.

Actress Nivedita Gowda is coming with a new concept for the 77th Independence Day

ಅದರಲ್ಲೂ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟೀವ್ ಇರುವ ನಟಿ ನಿವೇದಿತಾ ಗೌಡ ಸ್ವಾತಂತ್ರ್ಯ ದಿನಾಚರಣೆಗೆ ಒಂದು ಹೊಸ ಕಾನ್ಸೆಪ್ಟನ್ನು ಬಿಡುಗಡೆ ಮಾಡುವುದಾಗಿ ಹೇಳಿ ಅವರ ಅಭಿಮಾನಿಗಳಲ್ಲಿ ಬಹಳಷ್ಟು ಕುತೂಹಲವನ್ನು ಕೆರಳಿಸಿದ್ದಾರೆ.

ಹಾಗಾದರೆ ಏನು ಈ ಕಾನ್ಸೆಪ್ಟ್? ಎಂಬ ಪ್ರಶ್ನೆಗೆ ಸರ್ಪ್ರೈಸ್ ಎಂದು ಉತ್ತರ ನೀಡಿರುವ ನಟಿ ನಿವೇದಿತಾ ಗೌಡ ಅವರು ಸ್ವಾತಂತ್ರ್ಯ ದಿನಕ್ಕೆ ಕಾಯಬೇಕೆಂದು ತಮ್ಮ ಅಭಿಮಾನಿಗಳ ಕುತೂಹಲವನ್ನು ಕಾಯ್ದಿರಿಸಿದ್ದಾರೆ. ಆದರೂ ತಮ್ಮ ಹೊಸ ಕಾನ್ಸೆಪ್ಟ್ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಹೊರಹಾಕಿರುವ ನಿವೇದಿತಾ "ನನಗೆ 200 ಬಗೆಯ ಬಟ್ಟೆಗಳನ್ನು ಬದಲಾಯಿಸಿದ ಅನುಭವವಾಗಿದೆ " ಎಂದು ಹೇಳಿ ಒಂದಷ್ಟು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ .

ಭಾರತದ ಬೇರೆ ಬೇರೆ ರಾಜ್ಯಗಳ ಉಡುಗೆಗಳ ತೊಡುಗೆಯನ್ನು ತೊಟ್ಟುಕೊಂಡು ಪೋಸ್ ನೀಡಿರುವ ಕೆಲವು ಫೋಟೋಗಳನ್ನು ಮಾತ್ರ ಶೇರ್ ಮಾಡಿರುವ ನಟಿ ನಿವೇದಿತಾ ಗೌಡ ಅವರು ತಮ್ಮ ಕಾನ್ಸೆಪ್ಟ್ ಹಿಂದಿನ ಒಂದಷ್ಟು ಹಿಂಟ್ಗಳನ್ನು ಈ ಮೂಲಕ ಹೊರ ಹಾಕಿದ್ದಾರೆ. ಆದರೂ ನಾಳೆ ಏನು ಹೊಸ ವಿಚಾರ ನಡೆಯಲಿದೆ ಎಂಬುದನ್ನು ಪ್ರೇಕ್ಷಕರು ಅಭಿಮಾನಿಗಳು ಕಾದು ಅವರ ಯೂಟ್ಯೂಬ್ ಚಾನೆಲ್‌ನಲ್ಲಿಯೇ ನೋಡಬೇಕಿದೆ.

ಅಂದಹಾಗೆ ನಟಿ ನಿವೇದಿತಾ ಗೌಡ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಜನ ಫ್ಯಾನ್ಸ್ ಗಳಿದ್ದು ಇವರು ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಾರೆ. ತಮ್ಮ ದೈನಂದಿನ ಜೀವನ ಗಂಡ ಚಂದನ್ ಶೆಟ್ಟಿ ಅವರೊಂದಿಗೆ ಇನ್ನ ರೋಮ್ಯಾನ್ಸ್ ಸೋಲೋ ಟ್ರಿಪ್ ಈ ರೀತಿ ಬೇರೆ ಬೇರೆ ವಿಚಾರಗಳನ್ನು ಹಾಗೂ ಹಲವಾರು ರೀಲ್ ಗಳನ್ನು ಶೇರ್ ಮಾಡುವ ಮೂಲಕ ಮೆಚ್ಚುಗೆ ಜೊತೆ ಜೊತೆಗೆ ಟ್ರೋಲ್‌ಗಳಿಗೂ ಪಾತ್ರವಾಗುತ್ತಿರುತ್ತಾರೆ.

ಇತ್ತೀಚೆಗಷ್ಟೇ ಗೋವಾದಲ್ಲಿ ತೆಗೆಸಿಕೊಂಡ ಒಂದು ಡಿಸೆಂಟ್ ಫೋಟೋವನ್ನು ಪೋಸ್ಟ್ ಮಾಡುವುದರ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಅವರು ಅದಾದ ಮೇಲೆ ಏರ್ಪೋರ್ಟ್ ನಲ್ಲಿ ರೀಲ್ಸ್ ಮಾಡಿ ಒಂದಷ್ಟು ನ್ಯೂಸೆನ್ಸ್ ಮಾಡಿದ್ದಕ್ಕೆ ಟ್ರೋಲ್ ಕೂಡ ಆದರು.

ಅಷ್ಟೇ ಅಲ್ಲದೆ ನಿವೇದಿತಾ ಗೌಡ ಅವರ ಮ್ಯೂಸಿಕ್ ಆಲ್ಬಮ್ ಒಂದು ರೆಡಿಯಾಗಿದ್ದು ಸದ್ಯದಲ್ಲೇ ರಿಲೀಸ್ ಕೂಡ ಆಗಲಿದೆ. ಬಿಗ್ ಬಾಸ್ ಖ್ಯಾತಿಯ ಶಮಂತ್ ಗೌಡ ಅಲಿಯಾಸ್ ಬ್ರೋ ಗೌಡ ಎಂದು ಕರೆಸಿಕೊಳ್ಳುವ ನಟ ಶಮಂತ್ ಅವರ ಜೊತೆ ಈ ವಿಡಿಯೋವನ್ನು ಮಾಡಿದ್ದು ಅದರ ಬಗ್ಗೆಯೂ ಬಹಳಷ್ಟು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಬಾರ್ಬಿ ಡಾಲ್ ಗೊಂಬೆ ಎಂದೆಲ್ಲಾ ಕರೆಸಿಕೊಳ್ಳುವ ಇವರು ಆಗಾಗ ಒಂದಷ್ಟು ಹೊಸ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಮತ್ತೊಂದಷ್ಟು ಹಳೆ ಹಾಡುಗಳಿಗೆ ನಟಿಸುತ್ತಾ, ಹೊಸ ಹೊಸ ವಿಚಾರಗಳೊಂದಿಗೆ ಎದುರು ಬರುತ್ತಾ... ಮತ್ತೊಂದಷ್ಟು ಅಸಂಬದ್ಧ ವಿಡಿಯೋಗಳನ್ನು ಮಾಡಿ ಟ್ರೋಲ್ ಆಗುತ್ತಿರುತ್ತಾರೆ. ಹಾಗೆಯೇ ನಟಿ ನಿವೇದಿತಾ ಗೌಡ ಅವರು ತಮ್ಮ ಅಭಿಮಾನಿಗಳಿಗೆ ಮೆಚ್ಚುಗರಿಗೆ ಥ್ಯಾಂಕ್ಸ್ ಹೇಳುತ್ತಾ ಟ್ರೊಲಿಗರಿಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಜೀವನವನ್ನು ಆರಾಮಾಗಿ ನಡೆಸುತ್ತಿದ್ದಾರೆ.

ಈಗಂತೂ ಅಂದರೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅವರು ಮಾಡುತ್ತಿರುವ ಹೊಸ ಕಾನ್ಸೆಪ್ಟ್ ನ ವಿಡಿಯೋ ಏನೆಂಬುದೇ ಎಲ್ಲರ ಕುತೂಹಲವಾಗಿದ್ದು ಜನರು ಅದಕ್ಕೆ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲ್ಲ.

More from Filmibeat

English summary
Actress Nivedita Gowda is coming with a new concept for the 77th Independence Day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X