Niveditha gowda: ತಂದೆ ತಾಯಿ ಜೊತೆ ಸೆಲ್ಪಿಗೆ ಪೋಸ್ ನೀಡಿದ ಗೊಂಬೆ, ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್

By Poorva

ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಎಲ್ಲರ ಮನ ಗೆದ್ದ ನಟಿ ನಿವೇದಿತಾ ಗೌಡ. ಕ್ಯೂಟ್ ಕ್ಯೂಟ್ ಆಗಿ ಎಲ್ಲರ ಜೊತೆ ಮಾತನಾಡುತ್ತಾ ಸದಾ ಎಲ್ಲರನ್ನೂ ನಗಿಸುವ ಬೇಬಿ ಡಾಲ್ ಎಂದು ಈಕೆಯನ್ನು ಬಹಳ ಪ್ರೀತಿಯಿಂದ ಕರೆಯುತ್ತಾರೆ. ನಿವೇದಿತಾ ಗೌಡ ಒಂದಲ್ಲ ಒಂದು ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇವರ ಮುದ್ದು ಮುದ್ದಾದ ಫೋಟೋಗಳನ್ನು ನೋಡಿ ಅಭಿಮಾನಿಗಳು ಬಹಳ ಖುಷಿ ಪಡುತ್ತಾರೆ.

ಇದೀಗ ತಮ್ಮ ತಂದೆ ತಾಯಿ ಜೊತೆ ನಿವೇದಿತಾ ಗೌಡ ಅವರು ಕಾಲ ಕಳೆಯುತ್ತಿದ್ದಾರೆ. ತನ್ನ ತಂದೆ ತಾಯಿ ಜೊತೆ ಫೋಟೋವನ್ನು ಕ್ಲಿಕ್ಕಿಸಿದ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ನಟಿಯ ಫ್ಯಾಮಿಲಿ ಫೋಟೋ ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ನಿವೇದಿತಾ ಗೌಡ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರನ್ನು ಮದುವೆಯಾಗಿದ್ದಾರೆ.

Actress Niveditha gowda photo shoot

ಮದುವೆ ಆದ ಬಳಿಕವೂ ಕೆಲವೊಂದು ರೀಲ್ಸ್ ಮಾಡಿ ಟ್ರೊಲ್ ಗೆ ಗುರಿ ಆಗಿದ್ದಾರೆ. ಇನ್ನೂ ಕೆಲವೊಂದು ಬಾರಿ ಅಭಿಮಾನಿಗಳು ಇವರನ್ನು ಹಾಡಿ ಹೊಗಳುತ್ತಾರೆ. ಮಾಡ್ರನ್, ಟ್ರೆಡಿಷನಲ್ ಎಲ್ಲಾ ಡ್ರೆಸ್ ನಲ್ಲಿ ನಿವೇದಿತಾ ಗೌಡ ಬಹಳ ಸುಂದರವಾಗಿ ಕಾಣಿಸುತ್ತಾರೆ. ನಿವೇದಿತಾ ಸೌಂದರ್ಯಕ್ಕೆ ಮರುಳಾದ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ರೀಲ್ಸ್ ನೋಡಿ ಖುಷಿ ಪಟ್ಟ ಅಭಿಮಾನಿಗಳು

ಟ್ರೋಲಿಗರು ಏನೇ ಟ್ರೋಲ್ ಮಾಡಿದರು ಅದೆಲ್ಲವನ್ನೂ ಅಷ್ಟಾಗಿ ಗಮನದಲ್ಲಿ ಇರಿಸಿಕೊಳ್ಳದೆ ತಾನು ಮಾಡಿದ ರೀಲ್ಸ್‌ಗಳನ್ನ ಅಪ್ಲೋಡ್ ಮಾಡಿ ಖುಷಿ ಪಡುತ್ತಾರೆ ನಿವೇದಿತಾ. ಯಾರು ಏನೇ ಅಂದರೂ ಕ್ಯಾರೆ ಎನ್ನುವುದಿಲ್ಲ ಈಕೆ. ಪರ - ವಿರೋಧ ಕಾಮೆಂಟ್‌ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಕಾಮೆಂಟ್‌ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟೀವ್ ಆಗಿದ್ದಾರೆ.

Actress Niveditha gowda photo shoot

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಿವೇದಿತಾ

ನಿವೇದಿತಾ ಅವರ ತಾಯಿ ಕೂಡ ನೋಡಲು ಬಹಳ ಕ್ಯೂಟ್ ಆಗಿದ್ದು ಮನ ಸೆಳೆಯುವ ಹಾಗೆ ಕಾಣಿಸುತ್ತಾರೆ. ನಿವೇದಿತಾ ಗೌಡ ಅವರ ತಾಯಿಯನ್ನು ನಿವೇದಿತಾ ಅವರ ಅಕ್ಕ ಎಂದು ಎಲ್ಲರೂ ಹೇಳುತ್ತಾರೆ. ಅಷ್ಟು ಕ್ಯೂಟ್ ಆಗಿ ಕಾಣಿಸುತ್ತಾರೆ ಅವರು. ನಿವೇದಿತಾ ತನ್ನ ತಂದೆ ತಾಯಿಯ ಜೊತೆ ಟ್ರಿಪ್ ನಲ್ಲಿ ಎಂಜಾಯ್ ಮಾಡುತ್ತಿರುವ ವೇಳೆ ಸೆಲ್ಫಿ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ತಂದೆ ತಾಯಿ ಜೊತೆ ಪ್ರವಾಸಕ್ಕೆ ತೆರಳಿದ ನಿವಿ

ಇವರ ಫ್ಯಾಮಿಲಿ ಫೋಟೋ ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ತಂದೆ ಉದ್ಯಮಿಯಾಗಿದ್ದು ಹೆಸರು ಲಕ್ಷ್ಮಣ್. ತಾಯಿ ಹೇಮಾ ರಮೇಶ್ ಗೃಹಿಣಿ. ಇದೀಗ ನಿವೇದಿತಾ ಅವರು ಅಪ್ಪ-ಅಮ್ಮನ ಜೊತೆ ಇರುವ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ. ನಿವೇದಿತಾ ಗೌಡ ಹಾಗೂ ಚಂದನ್ ಬಿಗ್ ಬಾಸ್ ಮೂಲಕ ಜನರಿಗೆ ಚಿರಪರಿಚಿತರು. ಅವರಿಬ್ಬರ ಜೋಡಿಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

More from Filmibeat

English summary
Actress Niveditha gowda photoshoot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X