ಕಿರುತೆರೆಯಲ್ಲಿ 'ಮಾನಸ ಸರೋವರ'ದ ಪದ್ಮ ವಾಸಂತಿ!

By ಪ್ರಿಯಾ ದೊರೆ

ಕೃಷ್ಣ ಸುಂದರಿ ಎಂದೇ ಖ್ಯಾತಿ ಪಡೆದ ಹಿರಿಯ ನಟಿ ಪದ್ಮ ವಾಸಂತಿ ಬಣ್ಣದ ಲೋಕದ ಜರ್ನಿಯೇ ಅದ್ಭುತ. ಪದ್ಮ ವಾಸಂತಿ ಇಂದಿಗೂ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಟಿಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ತಮ್ಮ ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡುತ್ತಾ ಮಿಂಚುತ್ತಿದ್ದಾರೆ.

ಹಿರಿಯ ನಟಿಯರಾದ ವಿನಯಾ ಪ್ರಸಾದ್‌, ಗಿರಿಜಾ ಲೋಕೇಶ್‌ ಅವರಂತೆಯೇ ಪದ್ಮ ವಾಸಂತಿ ಅವರು ಕೂಡ ಬಣ್ಣದ ನಂಟನ್ನು ಬಿಡಲು ಸಿದ್ಧರಿಲ್ಲ. 80ರ ದಶಕದಲ್ಲಿ ಅಭಿಮಾನಿಗಳನ್ನು ಹೇಗೆ ರಂಜಿಸಿದ್ದರೋ ಹಾಗೆಯೇ ಇಂದಿಗೂ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

'ಮಾನಸ ಸರೋವರ' ಚಿತ್ರದ ಮೂಲಕ ಅಭಿಮಾನಿಗಳಿಗೆ ಹತ್ತಿರವಾದವರು ಪದ್ಮ ವಾಸಂತಿ. 'ಬೆಟ್ಟದ ಹೂ' ಸಿನಿಮಾದಲ್ಲಿ ನಟಿಸಿಯೂ ಸೈ ಎನಿಸಿಕೊಂಡವರು. ಸಿನಿಮಾಗಳಿಗಷ್ಟೇ ಮೀಸಲಿರದೆ ಕಿರುತೆರೆಯಲ್ಲೂ ಮಿಂಚಿದರು. ಇವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ.

80ರ ದಶಕದಲ್ಲಿ ಪದ್ಮಾ ವಾಸಂತಿ ಮಿಂಚು!

80ರ ದಶಕದಲ್ಲಿ ಪದ್ಮಾ ವಾಸಂತಿ ಮಿಂಚು!

80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರು ಇದ್ದರು. ಪ್ರತಿಯೊಬ್ಬರೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು. ಇನ್ನು ಇದೇ ಸಂದರ್ಭದಲ್ಲಿ ಮಿಂಚಿದ ನಟಿ ಪದ್ಮ ವಾಸಂತಿ ಇತರರಿಗಿಂತಲೂ ಭಿನ್ನ ವ್ಯಕ್ತಿತ್ವದವರು. ಎಂದೂ ಮರೆಯಲಾಗದ ನಟಿ ಎಂದರೂ ತಪ್ಪಾಗೋದಿಲ್ಲ. 'ಮಾನಸ ಸರೋವರ'ದಂತಹ ಉತ್ತಮ ಚಿತ್ರದಲ್ಲಿ ಅಭಿನಯಿಸಿದವರು. ತಮ್ಮ ನಟನೆಗೆ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪಡೆದರು.

130 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

130 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

1982 ರಲ್ಲಿ ಪದ್ಮಾ ವಾಸಂತಿ 'ಮಾನಸ ಸರೋವರ' ಚಿತ್ರದ ಮೂಲಕ ಸಿನಿರಂಗಕ್ಕೆ ಪ್ರವೇಶಿಸಿದರು. ಪದ್ಮ ವಾಸಂತಿಯವರು ತಮ್ಮ ಮೊದಲ ಚಿತ್ರದಲ್ಲಿಯೇ ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಕೆಲಸ ಮಾಡಿ ಜಯಿಸಿದವರು. ಬಳಿಕ 'ಅಮೃತ ಘಳಿಗೆ', 'ಧರಣಿ ಮಂಡಲ ಮಧ್ಯದೊಳಗೆ', 'ತವರಿನ ತೊಟ್ಟಿಲು' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ನಾಯಕಿಯಾಗಿ ಮಿಂಚಿದ ಪದ್ಮ ವಾಸಂತಿ 1984 ರಿಂದ 1996ರವರೆಗೂ ಬ್ರೇಕ್‌ ತೆಗೆದುಕೊಂಡಿದ್ದರು. ಬಳಿಕ ಅವರು ಪೋಷಕ ಪಾತ್ರಗಳ ಮೂಲಕ ಮತ್ತೆ ಸೆಕೆಂಡ್‌ ಇನ್ನಿಂಗ್ಸ್ ಆರಂಭಿಸಿದರು. ಹ್ಯಾಟ್ರಿಕ್ ಹೀರೊ ಶಿವ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ದರ್ಶನ್ ಅವರಿಂದ ಹಿಡಿದು ಎಲ್ಲರಿಗೂ ತಾಯಿಯ ಪಾತ್ರದಲ್ಲಿ ನಟಿಸಿದರು. 'ಬೆಟ್ಟದ ಹೂ', 'ಮುಸ್ಸಂಜೆ ಮಾತು', 'ಹೆತ್ತವರ ಕನಸು', 'ಬಾಯ್‌ ಫ್ರೆಂಡ್‌' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಸುಮಾರು 130 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಪದ್ಮವಾಸಂತಿ ಕುಟುಂಬ!

ಪದ್ಮವಾಸಂತಿ ಕುಟುಂಬ!

ವೈಯಕ್ತಿಕ ಜೀವನವನ್ನು ಎಲ್ಲೂ ಬಹಿರಂಗ ಪಡಿಸದ ಪದ್ಮ ವಾಸಂತಿ ಅವರು ತಮ್ಮ ಕುಟುಂಬವನ್ನು ಎಲ್ಲೂ ಪರಿಚಯಿಸಿಲ್ಲ. ಮೂವತ್ತು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಸಿನಿಮಾ ರಂಗದಲ್ಲಿರುವ ಪದ್ಮ ವಾಸಂತಿ ಎಂದಿಗೂ ತಮ್ಮ ಪರ್ಸನಲ್‌ ವಿಚಾರವನ್ನು ಹೊರಗೆ ತಂದಿಲ್ಲ. ತಮ್ಮ ಪೋಷಕರು, ಪತಿ, ಮಕ್ಕಳು ಯಾರ ಬಗ್ಗೆಯೂ ಯಾವ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ.

ಕಿರುತೆರೆಯಲ್ಲೂ ಪದ್ಮ ವಾಸಂತಿ!

ಕಿರುತೆರೆಯಲ್ಲೂ ಪದ್ಮ ವಾಸಂತಿ!

ಇನ್ನು ಪದ್ಮ ವಾಸಂತಿ ಸಿನಿಮಾಗಳಿಗಷ್ಟೇ ಮೀಸಲಿರದೇ, ಕಿರುತೆರೆಯಲ್ಲೂ ನಟನೆಯನ್ನು ಮುಂದುವರಿಸಿದ್ದಾರೆ. ಉದಯ ಟಿವಿಯಲ್ಲಿ 'ಮಾನಸ ಸರೋವರ' ಹೆಸರಿನ ಧಾರಾವಾಹಿ ಪ್ರಸಾರವಾಗಿತ್ತು. ಈ ಧಾರಾವಾಹಿಯಲ್ಲಿ ಪದ್ಮ ವಾಸಂತಿ ನಟಿಸಿ, ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿಕೊಟ್ಟರು. ಬಳಿಕ ಜೀ ಕನ್ನಡ ವಾಹಿನಿಯಲ್ಲಿ 'ಕಮಲಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಇದರಲ್ಲಿ ನಾಯಕಿ 'ಕಮಲಿ' ಪಾತ್ರಧಾರಿಯ ಅಜ್ಜಿಯಾಗಿ ನಟಿಸುತ್ತಿದ್ದಾರೆ.

More from Filmibeat

English summary
Actress Padma Vasanthi Biography And Life Story Is Here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X