»   » ಅಕುಲ್ ಮಾತಿನ ಮನೆಯಲ್ಲಿ 'ಶುಭಾ-ಪೂಜಾ'

ಅಕುಲ್ ಮಾತಿನ ಮನೆಯಲ್ಲಿ 'ಶುಭಾ-ಪೂಜಾ'

Posted By:
Subscribe to Filmibeat Kannada

ಕನ್ನಡದ ಇಬ್ಬರು ಗ್ಲಾಮರಸ್ ನಟಿಯರು ಕಿರುತೆರೆಯ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಸೂಪರ್ ಟಾಕ್ ಟೈಮ್'ನಲ್ಲಿ ಈ ವಾರ 'ಮೋದಕ ನಟಿ' ಜೊತೆ 'ಜಿಲೇಬಿ' ಆಗಮಿಸುತ್ತಿದ್ದಾರೆ.

ಹೌದು, ಅಕುಲ್ ಬಾಲಜಿ ನಿರೂಪಣೆ ಮಾಡುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಈ ವಾರ ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಮೋದಕ ನಟಿ ಶುಭಾ ಪೂಂಜಾ ಮಾತಿಗೆ ಸಿಕ್ಕಲಿದ್ದಾರೆ.

Actress Pooja Gandhi and Shubha Poonja in Super talk time

ಈಗಾಗಲೇ ಪೂಜಾ ಗಾಂಧಿ ಮತ್ತು ಶುಭಾ ಪೂಂಜಾ ಎಪಿಸೋಡ್ ನ ಪ್ರೋಮೋ ಕೂಡ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಇದಕ್ಕು ಮುಂಚೆ ರವಿಚಂದ್ರನ್, ನಟಿ ಖುಷ್ಬೂ, ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ ಚಂದ್ರನ್, ರಕ್ಷಿತಾ ಪ್ರೇಮ್ ಮತ್ತು ರಾಗಿಣಿ ದ್ವಿವೇದಿ, ನೀನಾಸಂ ಸತೀಶ್ ಮತ್ತು ಸಿಂಧುಲೋಕನಾಥ್ ಸೇರಿದಂತೆ ಹಲವು ಸಿನಿತಾರೆಯರು ಸೂಪರ್ ಟಾಕ್ ಟೈಮ್ ನಲ್ಲಿ ಭಾಗವಹಿಸಿದ್ದಾರೆ.

Actress Pooja Gandhi and Shubha Poonja in Super talk time

ಇದೇ ವಾರ ನಟ ರಘು ಮುಖರ್ಜಿ ಮತ್ತು ಅನು ಪ್ರಭಾಕರ್ ದಂಪತಿ ಕೂಡ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದಾರೆ.

ಮುಂದಿನ ವಾರ ನಿಮ್ಮನೆಗೆ ಬರ್ತಿದ್ದಾರೆ ಅನು ಪ್ರಭಾಕರ್ - ರಘು ಮುಖರ್ಜಿ ದಂಪತಿ

ಪೂಜಾ ಗಾಂಧಿ-ಶುಭ ಪೂಂಜಾ ಮತ್ತು ರಘು ಮುಖರ್ಜಿ-ಅನು ಪ್ರಭಾಕರ್ ಕಾರ್ಯಕ್ರಮ ಇದೇ ಗುರುವಾರ ಮತ್ತು ಶುಕ್ರವಾರ ರಾತ್ರಿ 9 ಗಂಟೆಗೆ ನಿಮ್ಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ಈ ಪ್ರಸಾರವಾಗಲಿದೆ. ಮಿಸ್ ಮಾಡ್ದೆ ನೋಡಿ....

English summary
Kannada Actress Pooja Gandhi and Actress Shubha Poonja takes Part in Colors Super Channel's Popular Show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada