For Quick Alerts
  ALLOW NOTIFICATIONS  
  For Daily Alerts

  ಖಳನಾಯಕಿಯಾಗಿ ರಂಜಿಸುತ್ತಿರುವ ಪ್ರಥಮಾ ಪ್ರಸಾದ್

  By ಅನಿತಾ ಬನಾರಿ
  |

  'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ನಾಯಕಿ ತಾರಿಣಿ ಸೋದರತ್ತೆ ಸುಮತಿಯಾಗಿ ಅಭಿನಯಿಸುತ್ತಿರುವ ಪ್ರಥಮಾ ಪ್ರಸಾದ್ ಮನೋಜ್ಞ ನಟನೆಯ ಮೂಲಕ ಗಮನ ಸೆಳೆದಾಕೆ.

  ಶ್ರುತಿ ನಾಯ್ಡು ನಿರ್ದೇಶನದಡಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಒಲವಿನ ನಿಲ್ದಾಣ" ಧಾರಾವಾಹಿಯು ವಿಭಿನ್ನ ಕಥಾಹಂದರದ ಜೊತೆಗೆ ಪಾತ್ರವರ್ಗದ ಮೂಲಕವೂ ಕಿರುತೆರೆ ಅಂಗಳದಲ್ಲಿ ಸದ್ದು ಮಾಡುತ್ತಿದೆ.

  Puttakkana Makkalu: ಅದ್ಧೂರಿಯಾಗಿ ನಡೆದ ಪುಟ್ಟಕ್ಕನ ಮಗಳ ನಿಶ್ಚಿತಾರ್ಥ Puttakkana Makkalu: ಅದ್ಧೂರಿಯಾಗಿ ನಡೆದ ಪುಟ್ಟಕ್ಕನ ಮಗಳ ನಿಶ್ಚಿತಾರ್ಥ

  ಧಾರಾವಾಹಿಯಲ್ಲಿ ಏಕಕಾಲಕ್ಕೆ ಪಾಸಿಟಿವ್ ಹಾಗೂ ನೆಗೆಟಿವ್ ಪಾತ್ರಗಳಿಗೆ ಜೀವ ತುಂಬುತ್ತಿರುವ ನಟಿ ಪ್ರಥಮಾ ಪ್ರಸಾದ್ ಅವರು ಖಳನಾಯಕಿಯಾಗಿ ನಟಿಸುತ್ತಿರುವುದು ಇದು ಮೊದಲೇನಲ್ಲ. ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ದೇಶನದಡಿಯಲ್ಲಿ "ಮನಸ್ಸೆಲ್ಲಾ ನೀನೆ" ಧಾರಾವಾಹಿಯಲ್ಲಿ ಖಳನಾಯಕಿಯಾಗಿ ವೀಕ್ಷಕರನ್ನು ರಂಜಿಸಿದ್ದರು.

  ಈಗ ಮತ್ತೊಮ್ಮೆ ಸುಮತಿ ಪಾತ್ರದ ಮೂಲಕ ಖಳನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿರುವ ಪ್ರಥಮಾ ಪ್ರಸಾದ್ ನೆಗೆಟಿವ್ ಜೊತೆಗೆ ಪಾಸಿಟಿವ್ ರೋಲ್ ಅನ್ನು ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ. ಆಕೆಯ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  Priya Kesare:'ಅಶ್ವಿನಿ ನಕ್ಷತ್ರ' ಖ್ಯಾತಿ ನಟಿ ಪ್ರಿಯಾ ಕೆಸರೆ ನಟನೆಯಿಂದ ದೂರ ಉಳಿದಿದ್ದೇಕೆ? ಕಾರಣ ಇದೇನೆ!Priya Kesare:'ಅಶ್ವಿನಿ ನಕ್ಷತ್ರ' ಖ್ಯಾತಿ ನಟಿ ಪ್ರಿಯಾ ಕೆಸರೆ ನಟನೆಯಿಂದ ದೂರ ಉಳಿದಿದ್ದೇಕೆ? ಕಾರಣ ಇದೇನೆ!

  ಸ್ಕಂದ ಮಾತೆಯಾಗಿ ಮೋಡಿ

  ಸ್ಕಂದ ಮಾತೆಯಾಗಿ ಮೋಡಿ

  ಮಿಲನ ಪ್ರಕಾಶ್ ನಿರ್ದೇಶನದ "ಬೊಂಬೆಯಾಟವಯ್ಯಾ" ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಪ್ರಥಮಾ ಪ್ರಸಾದ್ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಬೆಡಗಿ. ಶ್ರುತಿ ನಾಯ್ಡು ಅವರ "ದೇವಿ"ಧಾರಾವಾಹಿಯಲ್ಲಿ ಕೊಲ್ಲೂರು ಮೂಕಾಂಬಿಕೆ ಪಾತ್ರಕ್ಕೆ ಜೀವ ತುಂಬಿದ್ದ ಪ್ರಥಮಾ ಪ್ರಸಾದ್ ಮುಂದೆ ಶ್ರುತಿ ನಾಯ್ಡು ನಿರ್ದೇಶನದ "ಮಹಾದೇವಿ" ಧಾರಾವಾಹಿಯಲ್ಲಿ ಸ್ಕಂದ ಮಾತೆಯಾಗಿ ಮೋಡಿ ಮಾಡಿದರು.

  ಪುಟ್ಟತ್ತೆಯಾಗಿ ಫೇಮಸ್

  ಪುಟ್ಟತ್ತೆಯಾಗಿ ಫೇಮಸ್

  'ಮಹಾದೇವಿ' ಧಾರಾವಾಹಿಯ ನಂತರ ಪ್ರಥಮಾ ಪ್ರಸಾದ್ ಬದಲಾಗಿದ್ದು ಪುಟ್ಟತ್ತೆಯಾಗಿ. ಶ್ರುತಿ ನಾಯ್ಡು ನಿರ್ದೇಶನದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕ ಲಕ್ಕಿ ಆಲಿಯಾಸ್ ಲಕ್ಷ್ಮಣನ ಸೋದರತ್ತೆ ಪುಟ್ಟತ್ತೆಯಾಗಿ ನಟಿಸಿದ ಪ್ರಥಮಾ ಪ್ರಸಾದ್‌ಗೆ ಆ ಪಾತ್ರ ತಂದುಕೊಟ್ಟ ಜನಪ್ರಿಯತೆ ಅಷ್ಟಿಷ್ಟಲ್ಲ. ಕರುನಾಡಿನಾಡಿನಾದ್ಯಂತ ಪುಟ್ಟತ್ತೆಯಾಗಿ ಫೇಮಸ್ಸು ಪಡೆದುಕೊಂಡಿದ್ದ ಪ್ರಥಮಾ ಪ್ರಸಾದ್ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಮ್ನೋರು' ಧಾರಾವಾಹಿಯಲ್ಲಿ ಮತ್ತೊಮ್ಮೆ ದೇವಿಯಾಗಿ ಕಾಣಿಸಿಕೊಂಡಿದ್ದರು.

  ಬೆಳ್ಳಿತೆರೆಯಲ್ಲೂ ನಟನೆ

  ಬೆಳ್ಳಿತೆರೆಯಲ್ಲೂ ನಟನೆ

  'ಎಂಎಂಸಿಹೆಚ್', 'ಲಕ್ಷ್ಮಿ ನಾರಾಯಣರ ಪ್ರಪಂಚಾನೇ ಬೇರೆ', 'ಚೌಕಾಬಾರ' ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಪ್ರಥಮಾ ಪ್ರಸಾದ್ ಆಚಾರ್ಯ ಶ್ರೀಶಂಕರ ಸಿನಿಮಾದಲ್ಲಿ ಶಂಕರಚಾರ್ಯರ ಮಡದಿ ಆರ್ಯಾಂಬಾ ಆಗಿ ಅಭಿನಯಿಸಿದ್ದರು.

  ಬಹುಮುಖ ಪ್ರತಿಭೆ ಪ್ರಥಮಾ

  ಬಹುಮುಖ ಪ್ರತಿಭೆ ಪ್ರಥಮಾ

  ಕಥಕ್ ನೃತ್ಯಗಾರ್ತಿಯಾಗಿರುವ ಪ್ರಥಮಾ ಪ್ರಸಾದ್ ಕಥಕ್ ಕಲಾವಿದೆ ಮಾಯಾರಾವ್ ಅವರ ನೃತ್ಯ ಗರಡಿಯಲ್ಲಿ ಪಳಗಿದ ಬೆಡಗಿ.‌ ಇನ್ನು ಕರ್ನಾಟಕ ಬೋರ್ಡ್ ಸೆಕೆಂಡರಿ ಪರೀಕ್ಷೆಯಲ್ಲಿ ವಿದ್ವತ್​​​ನಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಈಕೆ ನಟನೆ, ನೃತ್ಯ ಇವೆರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಿದ್ದಾರೆ.

  English summary
  Actress Prathama Prasad became more popular by featuring in negative roles in Kannada Serials. She entertaining people through negative roles.
  Tuesday, January 10, 2023, 17:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X